ಐರಿಷ್ ವೈಮಾನಿಕನ ಹಾಡು

ಮೇಲೆ ಅಲೆವ ಮುಗಿಲಿನೊಳಗೆ ಹೀಗೇನೇ ಒಮ್ಮೆ ಸಂಧಿಸುವೆನು ನನ್ನ ವಿಧಿಯ ಎಂದು ನಾನು ಬಲ್ಲೆ. ಕಾದುವವರ ಕೂಡ ನನಗೆ ಇಲ್ಲ ಯಾವ ಹಗೆತನ, ಯಾರಿಗಾಗಿ ಕಾದುವೆನೋ ಅವರೊಳಿಲ್ಲ ಒಗೆತನ. ಕಿಲ್ಟಾರ್‍ಟನ್ ಕ್ರಾಸ್ ಎನ್ನುವ ದೇಶ...

ಗಾಜಿನ ಅರಮನೆ

ತೋಟದಲ್ಲಿ ತಿರುಗುವಾಗ ಭುಜವೇರಿ ಬಂದಿತ್ತು ಒಂದು ಕಂಬಳಿ ಹುಳು. ಮೈ ನವೆ ತಡೆಯಲಾರದೆ ಸಿಟ್ಟಿನಿಂದ ಕಂಬಳಿ ಹುಳುವನ್ನು ಒಂದು ಸೀಸೆಯಲ್ಲಿ ಹಾಕಿ ಬಂಧಿಸಿಟ್ಟ ತೋಟದ ಮಾಲಿ. ಗಿಡಗಳಿಗೆ ನೀರು ಹಾಕುವಾಗ ಕನಿಕರ ಗೊಂಡು ನಾಲಕ್ಕು...

ಮುಂಗಾರು

ಮುಂಗಾರು ನನ್ನ ಮುಂದಾರೆಂಬ ಬಿಂಕದಲಿ ಮುಂದಲೆಯ ಕೇಶರಾಶಿಯನೆತ್ತಿ ಕಣ್ಕಿಸಿದು, ಎಬ್ಬಿಸಿದ ಕೆಂಧೂಳಿ ಕಾರ್‍ಮುಗಿಲ ಮುಟ್ಟಲದು ರಕ್ಕಸಿಯ ರಕ್ಕಸದಿ ನಿಂತಿದೆ ದಿಗಂತದಲಿ ಮುಂಗಾರ ಸಿಂಗಾರವಿದು ನಿರಾತಂಕದಲಿ ಮುಚ್ಚಿಹುದು ಹಗಲ ಬಂಗಾರವನು ಬೆಚ್ಚಿಹುದು ಮುಂಗಾರ ಸಿಡಿಲು-ಮಿಂಚನು ಮೊದಲುಸಲ...

ಮುದ್ದು ಕಂದನ ವಚನಗಳು: ಎರಡು

ಶಿವಯೋಗ ಕೂಸು ತಾಯಿಯ ಕಂಡು ಕುಲುಕುಲನೆ ನಕ್ಕಂತೆ ಯೋಗವೆಂಬುದು ಚಂದ ಚಲುವ ಬಂಧ ತಾಯ ಎದೆ ಹಾಲನ್ನು ಗಟಗಟನೆ ಕುಡಿದಂತೆ ಶಿವಯೋಗದಾನಂದ ಮುದ್ದುಕಂದ ಬಣ್ಣ ಮಾವೀನ ಮರಕಂಡು ಗಾನ ಮಾಡುವರಿಲ್ಲ ಕಲ್ಲೊಗೆದು ಹರಿದೊಯ್ವ ಕಳ್ಳರಿಹರು...
ಮತ್ತೆ ಸೀತಾಯಣದ ನೆನಪು ಕೆದಕಿ

ಮತ್ತೆ ಸೀತಾಯಣದ ನೆನಪು ಕೆದಕಿ

ರಾಮಾಯಣದ ಓದುಗಳು ಹಲವಾರು. ‘ತಿಣುಕಿದನು ಫಣಿರಾಯ ರಾಮಾಯಣದ ತಿಂತಿಣಿಯ ಭಾರದಲಿ’ ಎಂದ ಕುಮಾರವ್ಯಾಸನ ಮಾತು ಅಕ್ಷರಶಃ ನಿಜವೆನ್ನುವಂತೆ ರಾಮಾಯಣಗಳು ಹಲವಾರು ಭಾಷೆಗಳಲ್ಲಿ ಹಲವಾರು ಭಾವಗಳೊಡನೆ ರಾಮಾಯಣಗಳು ಸೃಷ್ಟಿಯಾಗುತ್ತಲೇ ಬಂದಿದ್ದಾವೆ. ರಾಮಾನುಜನ್ ಅವರು ಬರೆದ ಜನಪ್ರಿಯ...

ನಡತೆ

ಬುಂಡೇಗೆ ಯೆಂಡ್ ಎಂಗೆ ಯೆಂಡಕ್ಕೆ ನೊರೆಯಂಗೆ ಅಂಗೇನೆ ಮನ್ಸಂಗು ಒಳ್ಳೆ ನಡತೆ. ಬುಂಡೇಗೆ ಆಲೆಂಗೆ ಆಲೊಳಗೆ ವುಳವೆಂಗೆ ಅಂಗೇನೆ ಆಳ್ ನಡತೆ ನರಮನ್ಸಗೆ. ಅಮಲಿಂದ ಯೆಂಡ್‌ಕುಡಕ ಗುಲ್ಲಿಂದ ಪಡಕಾನೆ ನಡತೇಂದ ಗೊತ್ತಾಗ್ತೆ ಒಳ್ಳೆ ಮನ್ಸ....

ದುರ್‍ಲಭಯುಕ್ತಿ

"ತಿಣಕದಿರು ಸುಖದ ಸಂಪಾದನೆಗೆ -ಒಂದಿನಿಸು ನಗೆ, ಇನಿಸು ದುಃಖ ವಿಸ್ಮೃತಿ, ಇನಿಸು ಲೋಕಾನು- ಭವವು, ರಸಿಕತೆ ಇನಿಸು, ತಾಳ್ಮೆಯಿರೆ ಇನಿಸಾನು; ಹಲಸು ಕಾತಂತೆ ರಸಭಾವ ರೋಮಾಂಚಿತಸು. ಹಸು ಕರುವಿನೆಡೆಗೆ ಕೆಚ್ಚಲುದೊರೆದು ಬರುವಂತೆ, ಅಂಬೆಗರೆಯಲು ಕರುಳು,...
ಕರ್ಣಾಟಕದ ಕುಶಲತೆಯ ಪೂರ್ವಚರಿತ್ರೆ

ಕರ್ಣಾಟಕದ ಕುಶಲತೆಯ ಪೂರ್ವಚರಿತ್ರೆ

Kannada Research Lectures Series No. 6 ೧೯೪೩ ಯಲ್ಲಿ ಮಾಡಿದ ಬಾಷಣ. ಪೂರ್ವ ಚರಿತ್ರೆ:- ಚರಿತ್ರಕಾರರು ಚರಿತ್ರೆ, ಆದಿ ಚರಿತ್ರೆ (Proto-history) ಮತ್ತು ಪೂರ್ವ ಚರಿತ್ರೆ (Pre-history) ಗಳೆಂಬ ಪದಗಳನ್ನು ಉಪಯೋಗಿಸುತ್ತಾರೆ. ಕರ್ಣಾಟಕಕ್ಕೆ...

ಹಣದ ಚೈತನ್ಯವನು ಜೀವನ ಚೈತನ್ಯವೆನಬಹುದೇ?

ಊಣುವಾರೋಗ್ಯವಿಲ್ಲದೆಲೆ ಅಡುಗೆಯೊಳು ಪ್ರಾ ವೀಣ್ಯದಿಂದೇನು? ವಸನ ವಸತಿ ವಾಹನ ಗ ಡಣಗಳೇನಿದ್ದೊಡೇನು? ನೌಕರಿಯ ವರಕ ರುಣೆಯಲ್ಲದೊಡುಣಿಸೇನು? ಅನ್ನದೊಳನ್ನ ಬೆಳೆ ದುಣುವಾ ಚೈತನ್ಯವಿಲ್ಲದಿಳೆಯೊಳಬಲ ಬದುಕೇನು? - ವಿಜ್ಞಾನೇಶ್ವರಾ *****

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ ಕೋಲು ಕೋಲೇಲೋ ಅದು ಕೋಲೇ ದ್ಯೇವರೇ || ೧ || ಶಿನ್ನದೊಂದು ಕೋಲೇಲೋ ಅದು ಕೋಲೇ ದ್ಯೇವರೇ ರಾಜದೇವಿಂದ್ರಾಡೂ ಕೋಲೇಲೋ ದ್ಯೇವರೇ || ೨ || ಕೋಲು ಕೋಲೇ...