ಏನ್ ಏಳ್ಙೌ ಈ ವುಚ್ಗೆ!

ನಂ ಪಡಕಾನೇಲ್ ವುಂಬ ಮುನಿಯ
ಇಬ್ರೂ ಗಟಾಂಗಟಿ!
ಓದ್ ಸನವಾರ ಬಿತ್ ಇಬ್ಬರ್‍ಗು
ಬಾರಿ ಲಟಾಪಟ! ೧

ಸುರುವಾಯ್ತಣ್ಣ ಮಾರಾಮಾರಿ-
ಯಾವ್ದೊ ಒಂದ್ ಚಿಕ್ ಮಾತ್ಗೆ;
ಬೆಟ್ದಾಗ್ ಕಲ್ಗೋಳ್ ಪೇರೀಸ್ದಂಗೆ
ಲಾತ್ ಏರ್‍ಕೋಂತು ಲಾತ್ಗೆ ೨

ನಡನುಗ್ ಎತ್ತಾಕ್ ಕೆಳಕ್ ಕೆಡೀಕೊಂಡ್
ಮುನಿಯಂಗ್ ಉಂಬ ಬೆಚ್ಗೆ
ತೀಡ್ತಿದ್ರಣ್ಣ-ಮುನಿಯ ಕೂಕ್ಕೊಂಡ್
ಆಕ್ದ ಕೈನ ಮಚ್ಗೆ! ೩

ಇಬ್ರಲ್ ಒಬ್ಬ ಠಾರಾಗ್ಬೇಕು-
ಅಲ್ಲೀಗಂಟ್ಲು ಸೈನೆ!
ಪೋಲೀಸ್ನೋರ್ ಬಂದ್ ಇಡದ್ಬುಟ್ರಣ್ಣ-
ತಕ್ಕೋ! ತಕ್ಕ ತೈನೆ! ೪

ಕೇಡೀಗ್ ಕೇಡಿ ಮಿಲಾಯಿಸ್ಬೇಕು-
ಆಗ್ ಅದ್ ನೋಡಾಕ್ ಮಜ!
ಮುನಿಯ ವುಂಬ ಇಬ್ರ್ ಅಂತೌರು-
ಈಗ್ ಬಿದ್ದೌರೆ ಸಜ! ೫

ದುಗ್ಗಾಣಿ ಸೊಪ್ಪ್ ಉಟ್ಟಾಕಿಲ್ಲ
ಒಂದೆ ಸೇರ್ ಅಕ್ಕಿ ನುಚ್ಗೆ!
ಅಲ್ಕ ಜಗಳಕ್ ಜೀವಾಂತಂದ್ರೆ-
ಏನ್ ಏಳ್ಙೌ ಈ ವುಚ್ಗೆ! ೬
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸಿಕ:-ವೇದಾಂತಿಗೆ
Next post ವಿಧವೆಯರ ಸಾಮಾಜಿಕ ಸ್ಥಾನಮಾನ- ದುರಂತ ಬದುಕಿನ ವ್ಯಾಖ್ಯಾನ

ಸಣ್ಣ ಕತೆ

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…