ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕುಲೀನ ಯುವತಿ ನುಡಿದಳು ಪ್ರೇಮಿಗೆ : ‘ತಕ್ಕ ತಿನಿಸನ್ನು ಉಣಿಸದ ಪ್ರೇಮವ ಯಾರು ನೆಚ್ಚುವರು, ಹೇಗೆ? ಅದಕ್ಕೆ ಪ್ರೇಮವೆ ಅಳಿಯುವುದಾದರೆ ಹಾಡುವಿ ಪ್ರೇಮವ ಹೇಗೆ? ಆಗ ನಾ ಗುರಿಯಾಗುವೆ ನಿಂದೆಗೆ. ಓ ನನ್ನೊಲವೇ, ಓ ನನ್ನೊ...

ಮದ್ವಯಾಯಿತೆಂದು ಅವ್ವನಿಗೆ ಹೇಳಲು ಹೋಗಿದ್ದೆ. ಅವ್ವನ ಕೋಪ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿತ್ತು. ಆ ಧೈರ್ಯದಿಂದ ಹೋಗಿದ್ದೆ. ಆದರೆ ಅವ್ವ ಕೆಂಡಾಮಂಡಲವಾದಳು. “ಗಂಡಿಲ್ಲದೆ ನಿನಗೆ ಬದುಕೋಕೆ ಆಗೋದಿಲ್ವಾ?” ಕೆರಳಿದಳು. “ಆದರೆ ಒಬ್ಬಳೇ ...

‘ನಿನಗೀಗ ಬರಿ ಐದು-ಇಪ್ಪತ್ತು ಬೆಳೆದಿಂತು ಬಹಳ ಎತ್ತರವಾದೆ’ ಯೆಂದು ನುಡಿವಳು ತಾಯಿ. ‘ನಿಂತೆಹೆವು ದಡದಲ್ಲಿ; ನಿನ್ನ ಹಡಗದ ಹಾಯಿ ಮುಂದೊಯ್ಯುತಿದೆ ನಿನ್ನ’ : ಸಖರೊರೆವರೊಲವಾಂತು ಎಳೆಯರೆಲ್ಲರು ಕೂಡಿ, ‘ನೀನು ನೋಂಪಿಯನೋಂತು ನಡೆವ ಬಗೆಯನ್ನರುಹು. ತ...

ಮಂಜು ಕೇವಲ ಮಂಜು ಅಲ್ಲಾ ಮಂಜುನಾಥನೆ ಬಂದನು ಮಂಜಿನೊಳಗೆ ಪಂಜು ಹಿಡಿಯುತ ನಂಜುಗೊರಳನೆ ನಿಂದನು ಗುಡ್ಡ ಮುಚ್ಚಿದೆ ಬೆಟ್ಟ ಮುಚ್ಚಿದೆ ಮಂಜು ಸೂರ್‍ಯನ ನುಂಗಿದೆ ಕೊಳ್ಳ ಕಂದರ ದರಿಯ ತಬ್ಬಿದೆ ಮಂಜು ಸೆರಗನು ಹೊಚ್ಚಿದೆ ಇರುಳ ಕನಸಿನ ನಂಜು ನಿದ್ರೆಯ ಮಂ...

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ ಜವಾಬ...

ಕೆಂಪಿನ್ ಬಟ್ಟೆ ಕಾಣ್ದೆ ಓದ್ರೆ ಗೂಳೀಗ್ ರಕ್ತ ಕುದಿಯಾಲ್ಲ! ಸುಂಕೆ ಕುದಿಯಾಲ್ಲ! ನಂಜಿ ರತ್ನಂಗ್ ಒದ್ರೆ ಕಾರಣ ಗೀರಣ ಯೋಳ್ಕೊಂಡ್ ಒದಿಯಾಲ್ಲ! ಇದಕೇಂತ್ ಒದಿಯಾಲ್ಲ! ೧ ರಾಗ ಆಕ್ತ ರಾತ್ರಿ ಬರದೆ ಸುಂಕೆ ಮಲ್ಗೆ ಅರಳಾಲ್ಲ! ಅಗಲಲ್ ಅರಳಾಲ್ಲ! ರತ್ನನ್ ...

ಯಜ್ಞಕುಂಡದ ಹಾಗೆ ಹಗಲಿರುಳು ಹೊತ್ತುತಿಹ ತಪಸಿಗಳ ಎದೆಯ ವೇದಿಕೆಯ ತುಳಿದು, ಜ್ಞಾನಶಕ್ತಿಗೆ ಇಟ್ಟ ನಿತ್ಯನಂದಾದೀಪ- ದಂದ ಮಿದುಳಿನ ತಲೆಗಳನ್ನು ಮುಟ್ಟಿ, ಸತ್ಯವೀರರ ನಿತ್ಯ ಶುದ್ಧ ನಾಲಗೆಯಿಂದ ಬಂದುಸಿರ ಕಣೆಗಳಿಗೆ ಬೆನ್ನುಗೊಟ್ಟು, ಪ್ರೀತಿವಾತ್ಸಲ್ಯ...

ಒಂದು ಪರ್ವತದ ತಪ್ಪಲು. ಅಲ್ಲಿ ಒಂದು ಸುಂದರ ತಪೋವನ. ಅಲ್ಲಿ ನೆಲೆಯಾಗಿದ್ದ ಗುರುವಿನ ಬಳಿ ಎರಡು ಮಹಾಮೂರ್ಖರ ಗುಂಪು ವಿದ್ಯೆ ಕಲಿಯಲು ಬರುತಿತ್ತು. ಅವರಲ್ಲಿ ಸ್ವಾರ್ಥ, ಈರ್ಷೆ ತುಂಬಿಕೊಂಡಿತ್ತು. ಎರಡು ಗುಂಪುಗಳು ಒಂದೇ ದಾರಿಯಲ್ಲಿ ಬಂದರು. ಹೆಜ್ಜ...

ನಮ್ಮನೊಡಗೂಡಿ ನಾವುಣುವ, ಉಡುವ, ಮುಡಿವ ನಮ್ಮೆಲ್ಲ ಯೋಗ ಭೋಗ ಭಾಗ್ಯವೆಲ್ಲದಕು ಆಕೆ ಕಾರ ಣಮಾಗಿರಲು ಮಣ್ಣಮ್ಮನನೆಂತು ನೋಡಿದೊಡಂ ಹಮ್ಮಿನೊಳೆಮ್ಮ ಮಡದಿಯೆಂದೆಣಿಸಿದರದು ತರವಲ್ಲ ಅಮಮಾ ವಾರಂಗನೆಯೆಂದೆಣಿಸಿದರೆ ಏಡ್ಸ್ ನಿಚ್ಚಳವಲಾ – ವಿಜ್ಞಾನೇಶ...

ಕೆಮ್ಮಣ್ಣ ಗುಡ್ಡಕೇ ಗೊಲ್ಲ ದನಗಳ ಬಿಟ್ಟಿದನೋ ಕೆಮ್ಮಣ ರಾಜಾರ ಮಗಳು ನೀರಿಗೆ ಬಂದಿದಳೋ || ೧ || ಹೊರಸು ಬಾರಯ್ಯ ಗೊಲ್ಲ | ನೆಗಹು ಬಾರಯ್ಯಾ | ಹೆಣ್ಣೆ ಕೊಡವನು ಹೊರಿಸಿದರೇ ನನಗೇನು ಕೊಡುವಿಯೇ || ೨ || ನಮ್ಮ ಕೇರಿಗೆ ಬಂದಿದ್ದಾರೇ ಯೆಮ್ಮೆ ದಾನ ಕೊ...

1...2324252627...110

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....