ಕಾರಣ

ಕೆಂಪಿನ್ ಬಟ್ಟೆ ಕಾಣ್ದೆ ಓದ್ರೆ
ಗೂಳೀಗ್ ರಕ್ತ ಕುದಿಯಾಲ್ಲ!
ಸುಂಕೆ ಕುದಿಯಾಲ್ಲ!
ನಂಜಿ ರತ್ನಂಗ್ ಒದ್ರೆ ಕಾರಣ
ಗೀರಣ ಯೋಳ್ಕೊಂಡ್ ಒದಿಯಾಲ್ಲ!
ಇದಕೇಂತ್ ಒದಿಯಾಲ್ಲ! ೧

ರಾಗ ಆಕ್ತ ರಾತ್ರಿ ಬರದೆ
ಸುಂಕೆ ಮಲ್ಗೆ ಅರಳಾಲ್ಲ!
ಅಗಲಲ್ ಅರಳಾಲ್ಲ!
ರತ್ನನ್ ಆಳ್ತ ಮುತ್ನಲ್ ಊಳ್ತ
ನಂಜಿ ಇದಕೇಂತ್ ಯೋಳಾಲ್ಲ!
ರತ್ನ ಕೇಳಾಲ್ಲ! ೨

ನಂಜಿ! ನೀ ನಂಗ್ ಒದ್ರೂ ಬಿದ್ರೂ
ಕಾರಣ ನಿಂಗೇನ್ ಬೇಕಿಲ್ಲ!
ನಂಗೂ ಬೇಕಿಲ್ಲ!
ಕಾರಣ ಗೀರಣ ಎಲ್ಲಾ ಐತೆ-
ಕಣ್ಗೆ ಕಂಡ್ರೂ ಕಾಣಾಲ್ಲ!
ಕೇಳೋದ್ ಜಾಣಲ್ಲ! ೩
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಬ್ಬಾಳಿಕೆಗೆ – ೨
Next post ಸ್ತ್ರೀ ಸಾಮರ್‍ಥ್ಯ ಮತ್ತು ಅವಕಾಶಗಳು

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…