ಕೂಡಿ ಬಾಳಿದೊಡೆಲ್ಲ ತಲೆಮಾರೊಂದಾದೊಡದು ಕುಟುಂಬ ಕೂಡಿ ಬೆಳೆದೊಡೆಲ್ಲ ಗಿಡಮರಬಳ್ಳಿಗಳೆಡೆಗದುವೆ ಕೃಷಿಯು ಕೂಡಿ ಬಾಳಲು ಕೂಡಿ ಬೆಳೆಯಲು ಮಮತೆಯಂತರ್‍ಜಲ ಕುಡಿಯ ಬೇಕಲ್ಲದಿದೇನಂಗಡಿ ಸರಕಿನವಸರವು ಕಾಡಿನೊಳೆಲ್ಲ ಕೂಡಿ ಬಾಳ್ವಂತಿರದೆ ಅದೆತ್ತಣಂತರ್‍ಜಲವು...

ರಂಗು ರಂಗಿನ ನೂರು ಗಂಧದ ಆತ್ಮ ಹೂಗಳು ಅರಳಿವೆ ಚಂಗುಲಾಬಿಯು ದುಂಡುಮಲ್ಲಿಗೆ ಕೆಂಡಸಂಪಿಗೆ ನಗುತಿವೆ ಯುಗದ ಮೇಲೆ ಯುಗವು ಬಂದಿತು ಹೆಗಲು ಏರಿತು ಕಾಲವು ಕಲ್ಪ ಕಾಲಕೆ ಪುಷ್ಪತಲ್ಪವು ತೂಗುಮಂಚವ ತೂಗಿತು ಗಂಧ ಪರಿಮಳ ಪುಷ್ಪ ಅರಳಿವೆ ಗಂಧವಿಲ್ಲದ ಹೂ ಇವ...

ವರ್ಷಾ ಬಂತು ಹರುಷ ತಂತು ಎಲ್ಲರೆದೆಯಲಿ ಹಸಿರು ತುಂಬಿ ಉಸಿರು ಬಂತು ಭೂಮಿಯ ಮೊಗದಲಿ ಹನಿ ಹನಿ ಮುತ್ತಾಗಿ ಚೆಲ್ಲಿ ಧರೆಗಿಳಿದು ಹಾರವಾಗಿ ಕಡಲ ಕೊರಳ ಬಳಸಲೆಂದು ವಧುವಂತೆ ನಾಚುತ ಬಂತು ಹೊಳೆ ಹಳ್ಳ ಕೆರೆ ತುಂಬಿ ತುಳುಕಿ ಬೆಟ್ಟ ಬಯಲು ಜಲಪಾತ ಬಳುಕಿ ಬ...

ಇನ್ನೇವೆನಿನ್ನೇವೆನಯ್ಯಾ ಎನ್ನ ಮನವೆಂಬ ಮರ್ಕಟನ ದಾಳಿ ಘನವಾಯಿತ್ತು ಎನ್ನ ನಿಂದಲ್ಲಿ ನಿಲಲೀಯದು ಕ್ಷಣದಲ್ಲಿ ಪಾತಾಳಕ್ಕೆ ಐದುತ್ತಿದೆ ಕ್ಷಣದಲ್ಲಿ ಆಕಾಶಕ್ಕೆ ಐದುತ್ತಿದೆ ಕ್ಷಣದಲ್ಲಿ ದಿಗ್ದೆಸೆಗೆ ಐದುತ್ತಿದೆ ಕೂಡಲಸಂಗಮದೇವಾ ಈ ಮನವೆಂಬ ಮರ್ಕಟನ ದಾ...

ಸೂಳೆಕುದುರೆಯ ಬಿಟ್ಟು ಮೂಜಗದಿ ಸಂಚರಿಸಿದೆವು, ಕಟಿ ಹಾಕುವ ಕಲಿಯು ಒಬ್ಬನಿಲ್ಲವು ಎಂಬ ಹೆಬ್ಬುಬ್ಬಿನೀ ಚಿಹ್ನ ಗಂಡಸಿನ ಹೃದಯ `ಹೂಂಕಾರ’! ಮುದುಕನಾಹುತಿ ಕೊಟ್ಟು ಹುಡುಗಿಯ ತಲೆಬುರುಡಿಯನು ಕೆಂಪು ಬಟ್ಟೆಯೊಳದ್ದಿ ಪೂರ್ವ-ಪಶ್ಚಿಮದಿ ಮೆರೆಯಿಸಿ...

ಕಾಮನ ಬಿಲ್ಲು ಹಿಡಿಯಲಾಗದ ನೋವು ನೀನು ಮುಂಜಾನೆ ಕಿರಣಗಳ ಹೊತ್ತು ತಂದಾಗ, ಕರಗಿತು ನದಿಯಾಗಿ ಅದ್ಭುತ ಸೌಂದರ್ಯವತಿ. ನನ್ನೊಳಗಿಳಿದ ಜ್ಞಾನ, ಬೆಳಕಿನ ಹಣತೆ ಮತ್ತೆ ಹೂವರಳಿದೆ ದಿನವೆಲ್ಲಾ ಘಮ ಘಮ. ಮಡಿಕೆಯಲ್ಲಿ ತುಂಬಿಟ್ಟ ನೀರು ತಣ್ಣಗೆ ಆಗಿ ಗದ್ದೆಯ...

ಭಾರತವಿದು ಭಾರತ ನಮ್ಮಲ್ಲಿದೆ ಒಮ್ಮತ ಹಿಂದು, ಮುಸ್ಲಿಮ್, ಕ್ರೈಸ್ತ, ಸಿಖ್ ಎಲ್ಲಾ ಒಂದೆ ಎನ್ನುತ || ಸತ್ಯ ಧರ್‍ಮ ತ್ಯಾಗ ಶಾಂತಿ ನಮಗಿದುವೆ ಸಮ್ಮತ ವೀರ ಧೀರ ಕಲಿಗಳ ನೆಲೆಬೀಡು ಎನ್ನುತ || ಗಂಧ ಕುಸುಮ ಅಂದ ಚೆಂದ ಪ್ರಕೃತಿ ಚೆಲುವು ಬೀರುತ ಸುಂದರ ...

ಲೋಕಾಂತ ಎನಗೆ ಬೇಡ ಬೇಕು ಏಕಾಂತ ಧ್ಯಾನ ಎನಗೆಬೇಕು ಕಾಣುವೆ ರಜನಿಕಾಂತ ಕಾಮ ಕಾಂಚನಗಳ ಬೇಡ ಮತ್ತೆ ವಿಷಯ ಸುಖ ಇಹಸುಖಗಳಲಿ ಬರೀ ಕಾಣುವೆ ದುಃಖ ಜೀವನವೊಂದು ಹೋರಾಟ ಬರಿ ಯುದ್ಧ ಇಂದ್ರಿಯಗಳೊಂದಿಗೆ ಕಾದಿದೆ ದ್ವಂದಯುದ್ಧ ಕನಸುಗಳೇ ವಾಸ್ತವ ಮರೆಸುವ ಹಾಗ...

ದುಷ್ಮಾನರು ಅಪಜಯ ಹೊಂದಿ, ಶಿಕ್ಷೆಗೆ ಪಾತ್ರರಾದರೆಂಬ ಆಹ್ಲಾದ ಕರವಾದ ವಾರ್ತೆಯು ಕಿವಿಗೆ ಬೀಳುತ್ತಲೇ ವಾಗ್ದೇವಿಯೂ ಚಂಚನೇತ್ರರೂ ಪುಳಕಿತರಾದರು. ಭೀಮಾಜಿಗೂ ಶಾಬಯ್ಯಗೂ ಸದ್ಭಶರಾದ ಗಂಡುಗಲಿ ಗಳು ಹುಟ್ಟಲೇ ಇಲ್ಲವೆಂದರು. ಸಕ್ರೆ ಪಂಚಕಜ್ಜಾಯ ದೊಡ್ಡ ದ...

ಮೋಡಗಳೊರಗಿವೆ ನಿರ್ವಾಸಿತವಾದಾಕಾಶದ ಅವಕಾಶದೊಳು ಆಲಸದಲಿ ದಣಿವಾದವೊಲು ಗತಿಸಿದ ಕಡಲಿನ ನೆರೆ ತೆರೆ ಅವಲೋಕಿಸಿ ಸುತ್ತಾಡುತ್ತಿವೆ ಖಿನ್ನ ಉರುಳುರುಳುತ್ತಿವೆ ಅವಸನ್ನ ಬರಿ ಚಿಂತೆಯೊಳೋ ಕರಿ ಕರೆ ಚಾಚಿದೆ ಶೋಕಾಕುಲತೆಯೆ ಮುಸುಕಿದೊಲು ವಾಯವ್ಯದ ಉಸಿರಾಟ...

1...34567...15

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...