ರಂಗು ರಂಗಿನ ನೂರು ಗಂಧದ
ಆತ್ಮ ಹೂಗಳು ಅರಳಿವೆ
ಚಂಗುಲಾಬಿಯು ದುಂಡುಮಲ್ಲಿಗೆ
ಕೆಂಡಸಂಪಿಗೆ ನಗುತಿವೆ
ಯುಗದ ಮೇಲೆ ಯುಗವು ಬಂದಿತು
ಹೆಗಲು ಏರಿತು ಕಾಲವು
ಕಲ್ಪ ಕಾಲಕೆ ಪುಷ್ಪತಲ್ಪವು
ತೂಗುಮಂಚವ ತೂಗಿತು
ಗಂಧ ಪರಿಮಳ ಪುಷ್ಪ ಅರಳಿವೆ
ಗಂಧವಿಲ್ಲದ ಹೂ ಇವೆ
ಬಣ್ಣ ಉಂಟು ಬಣ್ಣವಿಲ್ಲಾ
ಕೋಟಿ ಸುಮಗಳು ನಗುತಿವೆ
ನಿನ್ನ ಉಪವನ ಮಧುರ ಮಧುವನ
ಪ್ರೇಮ ಪುಷ್ಪವು ಅರಳಲಿ
ದೇಹ ಮಾಯಾ ಮೋಹ ಮರೆಯಲಿ
ಪುಷ್ಪ ಪರಿಮಳ ಸುರಿಯಲಿ
*****