ದೃಷ್ಟಿ

ಸೀತೆಯ ವೈಭವೀಕರಿಸಿದರು ಅವಳ ಪತಿಭಕ್ತಿಗಾಗಿ ಎಲ್ಲೂ ವೈಭವೀಕರಿಸಲಿಲ್ಲ ಅವಳ ಧೀಃಶಕ್ತಿಗಾಗಿ ಪರಿತ್ಯಕ್ತ ಹೆಣ್ಣೊಬ್ಬಳು ಒಬ್ಬಂಟಿಗಳಾಗಿ ಮಕ್ಕಳ ಬೆಳೆಸಿದ ಅವಳ ಆತ್ಮಶಕ್ತಿಗಾಗಿ! ತರಲಿಲ್ಲವೇ ಗಾಂಧಾರಿ ಕುರುರಾಜನಲಿ ಮಾನಸಿಕ ಸಮಸ್ಥಿತಿ? ಉಕ್ಕಿಸಲಿಲ್ಲವೇ ದ್ರೌಪದಿ ಪಾಂಡುಪುತ್ರರಲ್ಲಿ ಶಕ್ತಿಯ ವಾರಿಧಿ?...

ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ

ಎರಡೆ ದಿನ ಹಿಂದೆ ಇನಿವಕ್ಕಿ ಚಿಲಿಪಿಲಿ ದನಿಯ ಗಾನವೇದಿಕೆಯೆನಿಸಿ, ಝಗಝಗಿಸಿ, ಈಗ ಬರಿ ಹಣ್ಣೆಲೆಯೆ ತುಂಬಿರುವ, ಇಲ್ಲ ಒಂದೆರಡಿರುವ, ಅಥವ ಚಳಿಕೊರೆತಕ್ಕೆ ಬೆದರಿ ಎಲ್ಲಾ ಉದುರಿ ಭಣಗುಡುವ ಒಣಕೊಂಬೆ ಕಾಂಡಗಳ ಹೇಮಂತ ನನ್ನ ಮೈಯಲ್ಲಿ...
ರಾವಣಾಂತರಂಗ – ೩

ರಾವಣಾಂತರಂಗ – ೩

ವಾತ್ಸಲ್ಯದ ಗಣಿ ಶೂರ್ಪನಖಿ ನಮ್ಮೆಲ್ಲರ ಮುದ್ದಿನ ತಂಗಿ, ಮುದ್ದು ಜಾಸ್ತಿಯಾದುದರ ಕಾರಣ ಅವಳು ಹಠಮಾರಿಯಾಗಿಯೇ ಬೆಳೆದಳು. ಕೇಳಿದ್ದು ಕೊಡಲಿಲ್ಲವೆಂದರೆ ಭೂಮಿ ಆಕಾಶ ಒಂದು ಮಾಡುತ್ತಿದ್ದಳು. ಅವಳ ಕಣ್ಣೀರಿಗೆ, ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಾನೇ ಕಾರಣ. ತನ್ನ...

ಸಂತೆಯಲ್ಲಿ

ಪೇಟೆ ಬೀದಿಯಲ್ಲಿ ಹಗಲು - ಹತ್ತು ಘಂಟೆಯ ಸಮಯ ಒಬ್ಬ ಬಿದ್ದಿದ್ದ ಕುಡಿದೋ ಜ್ಞಾನ ತಪ್ಪಿಯೋ, ಸತ್ತೋ ಬಿದ್ದಿದ್ದ. ನೋಡಲು ಯಾರಿಗೂ ಮನಸ್ಸಿಲ್ಲ, ಧೈರ್ಯವಿಲ್ಲ, ಸಮಯವಿಲ್ಲ ಸಂಜೆ - ಅವನು ತರಕಾರಿ ಮಾರುತ್ತಿದ್ದ. ಬೆಳಗಿನ...

ಹೊಸ ಬಾಳು

ಅರಿತ ಜೀವಿಗಳೆರಡು ಬೆರೆತು ಸಪ್ತಪದಿಯ ಹಾದಿ ತುಳಿದು ಜೀವನ ಸಂಗಾತಿಗಳಾಗಿ ನಡೆದು ಬಾಳ ದೋಣಿಯನೇರಿ ತೀರ ಬಿಡಲು ಪಯಣವು ಹಾಯಾಗಿ ಸಾಗಿರಲು ದೂರ ತೀರವ ಸೇರುವ ತವಕ ನಡೆಯುತಿರಲು ಪ್ರೀತಿಯ ಪುಳಕ ಪ್ರಣಯದ ಗೀತೆಯ...

ಒರೆಸಿಹೋಗುತ್ತವೆ

ಉಸಿರು ತುಂಬಿದ ಕ್ಷಣದಿಂದ ಯಾಚನೆಗೊಡ್ಡಿದ ಅನಾಥ ಬೊಗಸೆ ಬಿಕ್ಕಳಿಸುತ್ತಲೇ ಇದೆ ಕೊಚ್ಚಿ ಬಂದ ಮಹಾಪೂರ ತುಂಬಿಟ್ಟುಕೊಳಲಾಗದೇ ಅದಕ್ಕೆ ಬರಿದೇ ಮುಳುಗಿ ಮೀಯುವ ಸಂಭ್ರಮ ಉಕ್ಕುವ ನೀರಿನಲ್ಲೂ ಕರಗಿಸುವ ಆರ್ದ್ರತೆ! ಆ ಸೆಳೆತಕ್ಕೆ ಪುಟ್ಟ ಬೊಗಸೆಯೇ...
ಪದ ಜನಪದ

ಪದ ಜನಪದ

ನಾನೊಬ್ಬ ಅಕ್ಷರಮೋಹಿ ಹೇಗೋ ಅದೇ ರೀತಿ ಪದಮೋಹಿಯೂ ಹೌದು. ಒಮ್ಮೆ ಊರಿಗೆ ಹೋಗಿದ್ದಾಗ ಕನ್ನಡದ ಕವಿಯಿತ್ರಿ ಸಂಧ್ಯಾದೇವಿ ಫೋನ್ ಮಾಡಿದ್ದರು. ಆಗ ನಾನು ಹೊರಗೆಲ್ಲೋ ತೆರಳಿದ್ದೆ. ನಂತರ ಮನೆಗೆ ಮರಳಿದಾಗ ಗೊತ್ತಾಗಿ ನಾನೇ ಅವರಿಗೆ...

ಸಂಜೆಯ ಹಾಡು

ಹಗಲೆಲ್ಲಾ ಕಳೆಯಿತು ಸೂರ್ಯನು ಮುಳುಗೆ; ಖಗ ಹಾರಿತು ಗೂಡಿನ ಒಳಗೆ; ಜಗವೆಲ್ಲಾ ಬೆಳಗಿತು ದೀಪವು ಬೆಳಗೆ, ಗಗನಾಂಗಣದಲ್ಲಿ ಉಡು ತೊಳಗೆ; ಮೃಗವೆಲ್ಲಾ ಅಲೆವವು ಬೆಟ್ಟದ ಕೆಳಗೆ; ಹೊಗುತಿರುವುದು ಕತ್ತಲೆ ಇಳೆಗೆ. ಓ-ಮಗುವೇ, ನೀ ಸಂಜೆಯ...

ಬೋರಿನಾಳದಿಂದೆಂತೆತ್ತುವುದೋ ಕೃಷಿಯನ್ನು?

ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ - ವಿಜ್ಞಾನೇಶ್ವರಾ *****