ಬೋರಿನಾಳದಿಂದೆಂತೆತ್ತುವುದೋ ಕೃಷಿಯನ್ನು?

ಗುರು ಹಿರಿಯರೊಡಗೂಡಿ ಪ್ರಕೃತಿಯ ಕುರಿತಾಡಿ ಅನ್ನದರಿವನು ಮೈಗೂಡಿ ಗರಿತಳೆದೊಂದುಚಿತದುನ್ನದ ಕೃಷಿ ಜಾರಿ ಹೋಯ್ತಲಾ ಕನ್ನದರಿವಿನಲಿ ವಾರಿಯೊಡಗೂಡಿ ಭಾರಿಯಾಳದಲಿ - ವಿಜ್ಞಾನೇಶ್ವರಾ *****

ಮೀಸೆ ಇದ್ರೆ

ಬಾಲು ತನ್ನ ಗೆಳೆಯ ಗಣಪತಿಗೆ ಹೇಳಿದ - "ಮೀಸೆ ಇದ್ದರೆ ನೀನು ನನ್ನ ಹೆಂಡ್ತಿ ತರನೇ ಕಾಣಿಸ್ತಿಯ?" ಗಣಪತಿ: "ನನಗೆಲ್ಲಿ ಮೀಸೆ ಇದೆ?" ಬಾಲು: "ಅದು ನನಗೆ ಗೊತ್ತು. ಆದ್ರೆ ನನ್ನ ಹೆಂಡ್ತಿಗಿದೆಯಲ್ಲಾ" *****

ಏಕಾಂಗಿ

ಎಲ್ಲಿದ್ದರೇನು ಹೇಗಿದ್ದರೂ ಏಕಾಂಗಿ ನಾನು ಮುಚ್ಚಿಡಲಾರೆನು, ಬಿಚ್ಚಿಡಲಾರೆನು ಭಾವನೆಗಳ ಮಹಾಪೂರ ಕುಳಿತಿರಲಿ ಮಲಗಿರಲಿ ಬಂದು ಮುತ್ತುವಿರಿ ಒಗಟಾಗಿ ನಿಂದು ಬರುವಿರೇಕೆ ಮನದ ಗೂಡಿನೊಳಗೆ ಕುಣಿಯುವಿರೇಕೆ ಪರದೆಯೊಳಗೆ ಕಾಡುವಿರೇಕೆ ಕನಸುಗಳ ಕತ್ತರಿಸುವಿರೇಕೆ. ಜಡವಾಗಿ ಶಿಲೆಯಾಗಬಾರದೆ ನಾನು...
ವಚನ ವಿಚಾರ – ಅತಿಮಥನ

ವಚನ ವಿಚಾರ – ಅತಿಮಥನ

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ ದಿತಿಗೆಟ್ಟೆ ನಾನು ಅದರಿಂದ ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ ಕಪಿಲಸಿದ್ಧಮಲ್ಲಿಕಾರ್‍ಜುನಾ [ಅತಿಮಥನ- ಅತಿಯಾದ ವಿಶ್ಲೇಷಣೆ, ದಿತಿಗೆಟ್ಟೆ-ಧೃತಿಗೆಟ್ಟೆ,...

ಮಿಂಚು

ಮಿಂಚು ಬಾರೆ ಮಿಂಚು ರಾಣಿ ! ಮುದ್ದು ಮೊಗವ ತೋರೆ ಜಾಣಿ !! ಮುಗಿಲಿನಲ್ಲಿ ಮಲಗಿಕೊಂಡು ಮೋಡಗಳಲಿ ಮುಸುಕಿಕೊಂಡು ಸೂರ್‍ಯನಿಲ್ಲದ ಸಮಯದಲ್ಲಿ ಕತ್ತಲೇರುವ ಕಾಲದಲ್ಲಿ ಕಣ್ಣು ಮುಚ್ಚಲು ಕಾಣಿಸಿಕೊಳ್ಳುವಿ ! ಕೈಯಚಾಚಲು ಕಾಲುತೆಗೆಯುಸಿ !...