ಮಿಂಚು

ಮಿಂಚು ಬಾರೆ ಮಿಂಚು ರಾಣಿ !
ಮುದ್ದು ಮೊಗವ ತೋರೆ ಜಾಣಿ !!

ಮುಗಿಲಿನಲ್ಲಿ ಮಲಗಿಕೊಂಡು
ಮೋಡಗಳಲಿ ಮುಸುಕಿಕೊಂಡು
ಸೂರ್‍ಯನಿಲ್ಲದ ಸಮಯದಲ್ಲಿ
ಕತ್ತಲೇರುವ ಕಾಲದಲ್ಲಿ
ಕಣ್ಣು ಮುಚ್ಚಲು ಕಾಣಿಸಿಕೊಳ್ಳುವಿ !
ಕೈಯಚಾಚಲು ಕಾಲುತೆಗೆಯುಸಿ !

ಮಿಂಚು ಬಾರೆ ಮಿಂಚು ರಾಣಿ !
ಮುದ್ದು ಮೊಗವ ತೋರೆ ಜಾಣಿ !!

ಮುತ್ತಿನ ಮೂಗುತಿಯಿಟ್ಟುಕೊಂಡು
ಜರದ ಕುಪ್ಪಸ ತೊಟ್ಟುಕೊಂಡು
ಹೊಳೆವ ಸೀರೆಯನುಟ್ಟುಕೊಂಡು
ಚಕ್ಕಪಕ್ಕನೆ ಕಾಣಿಸಿಕೊಂಡು
ಕಳ್ಳ ಕುಣಿತವ ಕುಣಿಯುತಿಹಿ !
ಕಣ್ಣು ಸನ್ನೆಯ ಮಾಡುತಿಹಿ !

ಮಿಂಚು ಬಾರೆ ಮಿಂಚು ರಾಣಿ !
ಮುದ್ದು ಮೊಗವ ತೋರೆ ಜಾಣಿ !!

ಏನ ಹುಡುಗಿ ನಿನ್ನ ಮಿಂಚು
ನಿನ್ನಗಾಗಿ ಹಾಕಿ ಹೊಂಚು
ಕತ್ತಲಲ್ಲಿ ತಿರುಗಿ ತಿರುಗಿ
ಮನಸಿನಲ್ಲಿ ಮರುಗಿ ಮರುಗಿ
ನೊಂದೆ ಬೆಂದೆ ಬಾರೆ ಮಿಂಚು !
ತರುಣ ಹೃದಯದಲ್ಲಿ ಮಿಂಚು !

ಮಿಂಚು ಬಾರೆ ಮಿಂಚು ರಾಣಿ !
ಮುದು ಮೊಗವ ತೋರ ಜಾಣಿ !!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಕ್ಕನ ದಾರಿ
Next post ವಚನ ವಿಚಾರ – ಅತಿಮಥನ

ಸಣ್ಣ ಕತೆ

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…