ಬೂದು ಬಣ್ಣದ ಚಳಿಗೆ ಮುಂಜಾವದ ತುಟಿಯೊಡೆದಿದೆ ಆಕಾಶ ಚಂದಿರನನ್ನು ಹಣೆಯಲ್ಲಿ ಧರಿಸಿ ನಸುನಗುತಿದೆ ಮಿಲ್ಲುಗಳಿಂದ ಹೊಗೆಯನ್ನೂ ಹುಣ್ಣುಗಳನ್ನೂ ಬಳುವಳಿಯಾಗಿ ಪಡೆದಿರುವ ಭದ್ರೆ ಮುದಿಸೂಳೆಯ ಹಾಗೆ ನಡುಗುತ್ತಿದ್ದಾಳೆ ಜಿಪುಣಶೆಟ್ಟಿ ಸೂರ್ಯನದು ತೂಕದ ವ್...

ದೀಪಾ ನೋಡೊ ನಿನ್ನೊಳು ದೀಪಾ ನೋಡೋ ಹೊಳೆಹೊಳೆ ಹೊಳೆಯುವ ತಿಳಿವೆಳಗಿನ ದೀಪ ದೀಪಾ ನೋಡೊ ಬೆಳ್ಳಿಯ ದೀಪಾ ನೋಡೊ|| ಈ ಚಿಪ್ಪು ತಲಿಯಾಗ ಉಪ್ಪುಪ್ಪು ನೀರಾಗ ಈ ಸೆಳವು ಆ ಸೆಳವು ತಿರುಗೂಣಿ ಮ್ಯಾಗೊ ದೀಪಾ ನೋಡೂ ಏಂಚಂದ ದೀಪಾ ನೋಡೊ|| ನಗುನಗು ನಗತೈತೆ ಬೆಳ...

ಅಧ್ಯಾಯ-೨ “ಬುದ್ದಿವಂತ/ಬುದ್ದಿವಂತೆ” ಎನಿಸಿಕೊಳ್ಳಲು ಎಲ್ಲರಿಗೂ ಇಷ್ಟ. ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವವರನ್ನು ಬುದ್ದಿವಂತರೆನ್ನುತ್ತಾರೆ, ಯಾವುದೇ ಸಮಸ್ಯೆ ಕಷ್ಟ ವಿಷಯಗಳನ್ನು ವಿಶ್ಲೇಷಿಸಿ ಪರಿಹಾರ ನೀಡುವವರ...

ಹೂ ಬಿಡುತ್ತದೆ ಹಣ್ಣುಕೊಡುತ್ತದೆ ಸಸ್ಯಶಾಸ್ತ್ರ ಓದದೆಯೇ ಮರ; ಮೊಟ್ಟೆಯಿಡುತ್ತದೆ ಮರಿ ಮಾಡುತ್ತದೆ ಜೀವಶಾಸ್ತ್ರ ಓದದೆಯೇ ಖಗ ವ್ಯಾಕರಣ ಯಾಕೆ, ಅಲಂಕಾರ ಬೇಕೆ ಮಾತಿನ ಮರ್ಮ ಬಲ್ಲ ವಾಗ್ಮಿಗೆ ? ವಾತ್ಸ್ಯಾಯನನ ಸೂತ್ರ ಪಾಠವಾಗಿರಬೇಕೆ ನಲ್ಲೆಗೆ ಬೇಯುತ್...

ಚರಿತ್ರೆಯಲಿ ದಾಖಲಾಗುವ ಹಂಬಲದಲಿ ಹಸಿವು ನೂರಾರು ದಾರಿಗಳಲಿ ಚೆಲ್ಲಾಪಿಲ್ಲಿ. ಆಗೊಮ್ಮೆ ಈಗೊಮ್ಮೆ ಮಾತ್ರ ದಾರಿಯೇ ಇರದ ದುರ್ಗಮಾರಣ್ಯದ ರೊಟ್ಟಿಯ ಅಕ್ಕರೆಯ ಸೆಳೆತ....

ನೇತ್ರಾವತಿ ಮೈ ತುಂಬಿಕೊಂಡ ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ ನಾನೀ ನೂಲಿನೆಳೆಯ ಕಸೂತಿ ಅದು ಕರುಳ ಬಳ್ಳಿ ಹಬ್ಬಹರಡಿ ಮುರಗಿ ಹೆಣಿಕೆಯ ವಂಕಿ ಚಿತ್ತಾರ ನಡೆಯ ನಾಜೂಕು ಹರವು ಖುಷಿ ಪ್ರೀತಿಯ ಕುಸುರಿ ಕಣ್ಣರಳಿ ಮದುವೆ ಮನೆ ಕೋಮಲ ಎಳೆಹಾಸು ಮೃದು ಮನದ ...

ತನ್ನಷ್ಟಕ್ಕೆ ತಾನು ನಡೆದು ಹೋಗುತ್ತಿದ್ದರೂ ಮೈಯೆಲ್ಲಾ ಸಾವಿರ ಕಣ್ಣು ಮಾಡಿಕೊಂಡು ಯಾರೋ ನೋಡಿದಾಗ ಭಯಗೊಂಡು ಬೆವೆತು ಚಕ್ಕನೆ ಆ ಕಡೆ ಸರಿದರೆ ಯಾರು ಇಲ್ಲ ಆದರೂ – ಏಕೋ ಏನೋ ಸಂತೆಯಲ್ಲಿ ನಡೆದಾಡಿದ ನೆನಪು *****...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...