ಏ ಕೃಷ್ಣ ಭಿಕ್ಷೆ ಬೇಡ್ಬೇಡ್ವೋ….. ನನ್ನ ಮನೆತನದ ಮರ್ಯಾದೆ ಹರಾಜಿಗಿಡಬೇಡ….. ನಿನ್ಗೆ ಏನ್ ಬೇಕಂತಾದ್ರು ಹೇಳೋ …. ನಿನ್ನ ಕಾಲ್ಮುಗಿತೀನಿ…. ತುಂಡು ಬೀಡಿಗಾಗಿ, ಹನಿ ಸರಾಯಿಗಾಗಿ ಭಿಕ್ಷೆ ಬೇಡ್ಬೇಡ. ಮನೆಯಲ್ಲಿ ನಿನಗೇನ...

ಅದೃಷ್ಟದ ರೇಖೆಗಳಿವೆ ನಿನಗೆ ವಿದೇಶಕ್ಕೆ ಹೋಗುತ್ತೀ ಅಲ್ಲದೆ ಎಷ್ಟು ಮೆತ್ತಗಿದೆ ಈ ಹಸ್ತ! ಎಲ್ಲರೂ ಒಲಿಯುತ್ತಾರೆ ನಿನಗೆ ಬಲಿಯಾಗುತ್ತಾರೆ ಹೆಬ್ಬೆರಳ ಬುಡದ ಈ ಎತ್ತರ ನೋಡು ಅದರ ಕೆಳಗಿನ ವಿಸ್ತಾರ ನೋಡು ಉಪನದಿಗಳಂತಹ ಈ ಗೆರೆಗಳು ಭಾಗ್ಯದ ಸೆರೆಗಳು ...

ಬಟ್ಟಲು ಗಂಗಳ ಚಲುವೆ ಕಣ್ಣಸಿಪ್ಪೆಯ ಕೆಳಗೆ ವರ್ತಲದ ಛಾಯೆ ಕೆನ್ನೆ ಗಂಟಿದ ಅಶ್ರುಧಾರೆ ಮೇಲೆ ಜರತಾರಿ ಸೀರೆ ಮಕಮಲ್ಲಿನ ಬಟ್ಟೆ ವಡ್ಯಾಣ ಒಡವೆ ಹುಸಿ ನಗೆಯ ಮುಖವಾಡ ಹಮ್ಮು ಬಿಮ್ಮಿನ ಕೈವಾಡ ಒಲುಮೆ ರಾಗ ಮೈದುಂಬಿ ಉಕ್ಕಿ ಉರಿಸಿದ ಬಗೆ ಬರಿಯ ಬೊಗಳೆ ತಟ...

ನನ್ನೆಲ್ಲಾ ಪದ್ಯಗಳಲ್ಲಿರುವಂತೆ ಇಲ್ಲೂ ತಾರೆ, ಮೋಡ, ಗಾಳಿ, ಕಡಲು, ಸೂರ್ಯರಿದ್ದಾರೆ. ನಿನಗಿಷ್ಟವಾದರೆ ಓದು ಒತ್ತಾಯವಿಲ್ಲ ಇಷ್ಟವಾಗದಿದ್ದರೆ ಬೇಡ ಕಿಂಚಿತ್ತೂ ಕೋಪವಿಲ್ಲ. ಆದರೆ ನಾನು ಪ್ರೀತಿಸುವ ಗಾಳಿ, ಮೋಡ, ತಾರೆಯರನ್ನು ನಿಂದಿಸಬೇಡ. ಅವರ ಬಗ್...

ಮಳೆಗಾಲದಲ್ಲಿ ಬಸಿರಿಯಂತೆ ಮೈತುಂಬಿ ಬಾಯ್ಗೆ ಸಿಕ್ಕ ಜೊಂಡು ಹುಲ್ಲನ್ನೆಲ್ಲ ತಿಂದುಂಡ ನದಿ, ಈಗ ಬೇಸಿಗೆಯಲ್ಲಿ ಬಾಣಂತಿಯಂತೆ ಕೃಶವಾಗಿ ಬೆಂಡು; ಹೆತ್ತು ಮರಳ ಹಾಸಿಗೆಯ ಮೇಲೆ ಮಲಗಿಸಿದ್ದು ಮಾತ್ರ ಒಂದಿಷ್ಟು ಬರೀ ಕರಿಕಲ್ಲ ಗುಂಡು. *****...

ಮುಳ್ಳು ಮುರಿದು ಎಳ್ಳು ಸುರಿದು ಬೆಳ್ಳಿ ಹೂವು ಮಿನುಗಲಿ ಜಗದ ಭೇರಿ ನೊಗದಿ ಹೇರಿ ಯುಗದ ದೇವಿ ಬಂದಳೊ ಮುಗಿಲ ನಾರಿ ಹಸಿರು ತೂರಿ ಹೂವು ತೇರು ತಂದಳೊ ಹಸಿರಿನೆದೆಯ ಹೂವು ಅರಳಿ ಕಲ್ಪವೃಕ್ಷ ಬೆಳಗಿತು ಹಳದು ಹೋಗಿ ಹೊಸತು ತೀಡಿ ಯುಗದ ಬಳ್ಳಿ ಬೆಳೆಯಿತು...

ಎದುರು ಮನೆ ಹುಡುಗಿಯ ತಂದೆ ದೋತ್ರಧಾರಿಯನ್ನು ‘ಗೋತ್ರ’ ಯಾವುದು? ಎಂದು ಕೇಳಿದ ವಿಶ್ವ, ನನ್ನ ಮಿತ್ರ; ಅವಾಕ್ಕಾಗಿ ನುಡಿದರು; ‘ವಿಶ್ವಾಮಿತ್ರ’. ವಿಶ್ವ ನುಡಿದ: “ಕ್ಷಮಿಸಿ, ನಮ್ಮಿಬ್ಬರದೂ ಒಗ್ಗೋತ್ರ!” *****...

ಕರ್ನಾಟಕದ ೫೦ನೆಯ ರಾಜ್ಯೋತ್ಸವ ಸುವರ್ಣಕರ್ನಾಟಕ ಎ೦ಬ ಹೆಸರಿನಲ್ಲಿ ನವಂಬರ್ ಒಂದರನ್ನು ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಕರ್ನಾಟಕದಿಂದ ದೂರವಿರುವ ನಾನು ಇದರ ಕೆಲವು ಕಾರ್ಯಕ್ರಮಗಳನ್ನು ದೂರದರ್ಶನದ ಮೂಲಕ ವೀಕ್ಷಿಸಿದ್ದು ಮಾತ್ರ. ಈಟೀವಿ ಪ್ರಸ್ತು...

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ ಅದಕ್ಕಿಲ್ಲ ಸರಳಗತಿ ದಾರಿನೆರಳು ; ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು ಮಂಡೆ ಮೇಲೇ ಬಾಯಿಮಸೆವ ಬಿಸಿಲು. ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ ಸುರಿದ ಮರುಧರೆಯ ಅಮೂಲ್ಯ ನೀರು ; ಕೊಲ್ಲಲೆಳಸು...

1...4041424344...73

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...