ಪ್ರಿಯ ಸಖಿ, ಹಣ್ಣು ಮಾಗುವುದು, ವಯಸ್ಸು ಮಾಗುವುದು ಎಲ್ಲ ಸೃಷ್ಟಿ ಸಹಜ ಕ್ರಿಯೆಗಳು. ಹೀಚಾಗಿದ್ದು, ಕಾಯಾಗಿ, ದೋರುಗಾಯಾಗಿ, ಪರಿಪಕ್ವವಾಗಿ ಹಣ್ಣಾದಾಗ ಅದು ಮಾಗಿದ ಹಂತವನ್ನು ತಲುಪುತ್ತದೆ. ಹಾಗೇ ವ್ಯಕ್ತಿ ಕೂಡ. ಬಾಲ್ಯ ಕಳೆದು, ಯೌವ್ವನ ಮುಗಿದು ಮ...

ಈ ನಮ್ಮ ತಾಯಿನಾಡು ನಿರುಪಮ ಲಾವಣ್ಯದ ಬೀಡು ಈ ವನದಲಿ ನಲಿದುಲಿವ ಕೋಗಿಲೆಗಳು ನಾವು ಪರ್ವತಗಳಲ್ಲೆ ಹಿರಿಯ ಆಗಸದ ನೆರೆಯ ಗೆಳೆಯ, ರಕ್ಷೆಯವನೆ ನಮಗೆ, ಅವನೇ ಮಾರ್ಗದರ್ಶಿ ಗುರಿಗೆ. ಈ ತಾಯ ಮಡಿಲಿನಲ್ಲಿ-ಸಾವಿರ ನದಿಗಳೆ ಹರಿಯುವುವು, ಈ ಸುಂದರ ನಂದನಕೆ ...

ಗಾಳಿ ಬಿರುಗಾಳಿಯಾಗಿ ಧೂಳೆಬ್ಬಿಸಿ ಡಿಕ್ಕಿ ಹೊಡೆದರೆ ಮೋಡಗಳು ಗುಡುಗು ಸಿಡಿಲು ಮಳೆ ಬರಿಗಾಳಿ ಬಿಳಿಮೋಡ ಬೆರಗುಗೊಳಿಸುವುದಿಲ್ಲ ‘ಹನಿಗೂಡಿ ಹಳ್ಳ’ ನದಿಯಾಗಿ ಸಮುದ್ರ ಸೇರುವ ಮುನ್ನ ಸೇರಿಕೊಳ್ಳುವುದು ಒಡಲೊಳಗೆ ಕಸಕಡ್ಡಿ ಕಲ್ಲುಮಣ್ಣು ಕೊಡಲು ಬದುಕಿಗ...

ಏನ ದುಡಿದೆ ನೀನು-ಭಾರಿ ಅದೇನ ಕಡಿದೆ ನೀನು? ನೀನು ಬರುವ ಮೊದಲೇ-ಇತ್ತೋ ಭೂಮಿ ಸೂರ್ಯ ಬಾನು ಕಣ್ಣು ಬಿಡುವ ಮೊದಲೇ-ಸೂರ್ಯನ ಹಣತೆಯು ಬೆಳಗಿತ್ತೋ ಮಣ್ಣಿಗಿಳಿವ ಮೊದಲೇ – ಅಮ್ಮನ ಎದೆಯಲಿ ಹಾಲಿತ್ತೋ ಉಸಿರಾಡಲಿ ಎಂದೇ – ಸುತ್ತಾ ಗಾಳಿ ಬೀ...

ಹೊರಗೆ ಸುರಿಯುತ್ತಿದ್ದ ಮಳೆಯನ್ನೆ ದಿಟ್ಟಿಸುತ್ತಿದ್ದವನಿಗೆ ನೀಲಾ ಟೇಬಲ್ ಮೇಲೆ ತಿಂಡಿ ತಟ್ಟೆ ತಂದಿಟ್ಟಿದ್ದು ತಿಳಿಯಲೇ ಇಲ್ಲ. ಇತ್ತ ಗಮನವೇ ಇಲ್ಲದಂತೆ ಕುಳಿತಿದ್ದವನನ್ನು ನೋಡಿ ಸಿಡಿಮಿಡಿಗುಟ್ಟಿದ್ದು ಒಂದೂ ಅವನಿಗರಿವಿಲ್ಲ. ಪ್ರತಿಸಲ ಮಳೆ ಬಂದಾ...

ಎಂಥ ಬಾಳಿದು ಬಾಳು, ಚಿಂತೆಯೇ ತುಂಬಿ ನಿಂತು ನಿಟ್ಟಿಸೆ ವೇಳೆಯಿಲ್ಲದಿರೆ ನಮಗೆ. ಮರದ ಅಡಿಯಲಿ ನಿಂತು ಕುರಿ ಹಸುಗಳಂತೆ ಮರೆತು ಮೈಯನು, ನೋಡಲೆಮಗೆ ಹೊತ್ತಿಲ್ಲ. ಕಾಡಿನೆಡೆ ಸುಳಿದಂದು, ತಾವಾಯ್ದ ತಿನಿಸುಗಳ ಗೂಡಿಗೊಯ್ಯುವ ಅಳಿಲ ನೋಡೆ ಹೊತ್ತಿಲ್ಲ. ಇ...

ಅಣಬೆ ಕೊಡೆ ಬೇಕು ನನಗೆ ಹಿಡಿಯಲು ಕೈಗೆ ಮಿದು ಧರ್ಮಕೆ ಸಿಗುವಂಥದು ಹಳ್ಳ ಕೊಳ್ಳದ ಬದಿಯಲ್ಲಿ ಕುಂಬು ಮರಗಳ ಬುಡದಲ್ಲಿ ಫೇರಿಗಳದರಲಿ ತೂಗಾಡಬೇಕು ದೇವತೆಗಳೂ ಸಹ ಬೇಕೆನಬೇಕು ಎನಗೊಂದಣಬೆ ನಿನಗೊಂದಣಬೆ ಸೂರ್ಯದೇವರಿಂಗೆ ನೂರಾರು ಅಣಬೆ ಮಳೆಹನಿ ಬಿದ್ದರೆ...

ಬಂಧನವರಿಯದೆ ಸುಖವನು ಬಯಸದೆ ಬೆಳೆಯುತ ಬರುತಿಹಳೀ ಸೀತೆ ನಿರುತವು ಶ್ರಾವ್ಯದ ಗಾನವನೊರೆವಳು ಕಿರುನಗೆ ಮೊಗದೊಳು ಸುಪ್ರೀತೆ ಗಾಯಕಿ ನಿನ್ನಯ ಗಾನವ ಕೇಳಲು ಕಾತರರಾಗಿಹೆವೆಂದೊಡನೆ ಕಂಗಳ ಮುಚ್ಚುತ ತಾಳವ ತಟ್ಟುತ ಝೇಂಕೃತನಾದವ ಗೆಯ್ಯುವಳು ಗಾನದ ಸಾಗರ- ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...