ಊರು-ಕೇರಿ ಕುರಿತು

ನನ್ನ ಕೇರಿ ನಾಕವೇನು? ವಿಶ್ವವಿನೀಕೇತನ ವಿಹಾರಿ! ಕೇರಿಯೆಂದರೆ: ಹೊಸಲು ಕಾದು, ಕ್ರಿಯಾಶೀಲ ಸ್ಥಳ! ಜಗದ ಬಾಗಿಲು... ಪುರಾತನ ತೊಟ್ಟಿಲು. ಕೈಲಾಸಕೆ ಮೆಟ್ಟಿಲು. ಇಲ್ಲಿಹರು... ಸಮಗಾರ ಹರಳಯ್ಯ, ಕಲ್ಯಾಣದ ಗುಣಮಣೆ, ಜಾಂಬುವಂತ, ಮಾದರಚೆನ್ನಯ್ಯ, ಬಡ್ವಿಲಿಂಗಮ್ಮ, ಅರುಂಧತಿ,...

ಮಗ ಅಮ್ಮನಿಗೆ ಹೇಳಿದ್ದು

ಅಮ್ಮಾ, ಅಮ್ಮಾ, ಸೂರ್ಯ ಮುಳುಗೋದು ಇಲ್ವಂತೆ ಮಲಗೋದು ಇಲ್ವಂತೆ ಅದೆಲ್ಲಾ ಸುಳ್ಳಂತೆ ಹ್ಹೂ ನಮ್ಮ ಮಿಸ್ಸೇ ಹೇಳಿದ್ರು ಅವನು ಸಂಜೆ ಆಗ್ತಿದ್ದಂತೆ ಸ್ಪೀಡಾಗಿ ಅಮೇರಿಕಾಕ್ಕೆ ಹೋಗಿ, ಬೆಳಗಾಗ್ತಿದ್ಹಾಂಗೆ ವಾಪಸ್ಸು ಬಂದ್ಬಿಡ್ತಾನಂತೆ. *****

ಮಾನ

ಅಂತರದಲ್ಲಾಡುವಳತೆಗೋಲು ಅಳೆದೂ ಸುರಿದೂ ಹಗಲಿರುಳು ಬಟ್ಟೆ ತೊಡಿಸುತ್ತದೆ-ಕಳಚುತ್ತದೆ-ತೊಡಿಸುತ್ತದೆ ತನಗೆ ಸರಿಕಂಡಂತೆ ಕೆಲವ ತಲೆಮೇಲಿಂದಿಳಿಬಿಡುತ್ತದೆ ಮತ್ತೆ ಕೆಲವ ಕಾಲೊಳಗಿಂದ ಮೇಲೇರಿಸುತ್ತದೆ ಕೆಲವು ಸೈಲು ಜೋಲಾಗಿ, ನೆಲ ಬಳಿಯುತ್ತಾ ಹರಿದು ಚಿಂದಿಯಾಗುತ್ತವೆ ಕೆಲವು ನನ್ನ ಮೈಕೈ ಕಾಲುಗಳೊಡನೆ...

ಇಸ್ಲಾಂ-ಷಿಯಾ-ಸುನ್ನಿ-ಕೊಲೆ-ಇತ್ಯಾದಿ

[caption id="attachment_6634" align="alignleft" width="300"] ಚಿತ್ರ: ಅಲೆಕ್ಸಾ / ಪಿಕ್ಸಾಬೇ[/caption] ಯುದ್ಧದ, ಅಣ್ವಸ್ತ್ರಗಳ ಭೀತಿ ಒಂದು ಕಡೆಯಾದರೆ ಭೂಕಂಪ, ಪ್ರವಾಹ, ಚಂಡ ಮಾರುತ ಇತ್ಯಾದಿ ಪ್ರಕೃತಿಯ ವಿಕೋಪ ಮತ್ತೊಂದು ಕಡೆ. ಇವುಗಳ ಆತಂಕದಿಂದ ಬಿಡಿಸಿಕೊಂಡು...

ಹಬ್ಬಗಳು

ಹುಟ್ಟೊಂದು ಯುಗಾದಿ ಹಬ್ಬ ಬದುಕಿನ ಆರಂಭ ಬಾಲ್ಯ ಸಂಕ್ರಾಂತಿ ಹಬ್ಬ ಬೆಳವ ಬಾಳಿಗೆ ಬುನಾದಿ ಕಂಬ ಯೌವ್ವನ ಕಾಮನಹುಣ್ಣಿಮೆ ರಂಗಮಹಲಿನ ಮಹಡಿ ಮೆಟ್ಟಲು ಮಧ್ಯವಯಸ್ಸು ದೀಪಾವಳಿ ಹಬ್ಬ ಕನಸುಗಳು ತೂಗಲು ಬೆಳಕಿನ ತೊಟ್ಟಿಲು ಇಳಿವಯಸ್ಸು...

ಹಂಬಲ ಮತ್ತು ಸ್ವಾಭಿಮಾನ

ಅವನು-, ಸ್ವಚ್ಛಂದವಾಗಿ ನಗುವ ಜೋಡಿಗಳನು ನೋಡಿ ಕರಬುತ್ತಿದ್ದೇನೆ ಕಿಲುಬುಗಟ್ಟಿದ ಗೊಡ್ಡುಯೋಚನೆಗಳಿಗೆ ಸೋನೆ ಮಳೆ ಸುರಿಸು. ಅವಳು-, ಚಂದಿರ ನಗುನಗುತ ಬೆಂಕಿಹಚ್ಚಿದರೆ ಸೂರ್ಯ ಉರಿದುರಿದು ಕರಕಲಾಗಿಸಿದ ಪ್ರೀತಿಯ ಮಾತುಗಳಿಂದ ಒಮ್ಮೆಯಾದರೂ ಕಣ್ಣೀರು ಸುರಿಸುವಂತೆ ಮಾಡು. ಇಬ್ಬರಿಗೂ,...

ನಾವೈದು ಜನ

ನಾವೈದು ಜನ ಪಾಂಡವರು ಯುದ್ದ ಮಾಡೆವು ಕೌರವರೊಡನೆ ಅನುಭವಿಸೆವು ಸಾಮ್ರಾಜ್ಯವನೆ ಇದು ಕಲಿಯುಗ ಸುಮ್ಮನಿರಬೇಕಣ್ಣ ದೊರೆಯಲು ಮುಕುತಿಯ ಮಣ್ಣ ನಾವೈದು ಜನ ಕೂಡಿದರೆ ಮುಷ್ಟಿಯಾದೇವು ಅಗಲಿದರೆ ಹಸ್ತವಾದೇವು ಅಂಗೈಲಿ ಕಮಲ ಹಿಡಿದೇವು ಹೊತ್ತೇವು ತೆನೆ...

ಏನೀ ಸೃಷ್ಟಿಯ ಚೆಲುವು!

ಏನೀ ಸೃಷ್ಟಿಯ ಚೆಲುವು ಏನು ಇದರ ಗೆಲುವು! ಈ ಚೆಲುವಿನ ಮೂಲ ಏನು, ಯಾವುದದರ ಬಲವು? ಹಾಡುವ ಹಕ್ಕಿಯೆ ಮೋಡವೆ ಓಡುವ ಮರಿತೊರೆಯೇ ಕಾಡುವ ಹೆಣ್ಣೇ ಪರಿಮಳ ತೀಡುವ ಮಲ್ಲಿಗೆಯೇ ಎಳೆಯುವ ಸೆಳವೇ ಜೀವವ...