ನಾವೈದು ಜನ
ಪಾಂಡವರು
ಯುದ್ದ ಮಾಡೆವು ಕೌರವರೊಡನೆ
ಅನುಭವಿಸೆವು ಸಾಮ್ರಾಜ್ಯವನೆ
ಇದು ಕಲಿಯುಗ
ಸುಮ್ಮನಿರಬೇಕಣ್ಣ
ದೊರೆಯಲು ಮುಕುತಿಯ ಮಣ್ಣ
ನಾವೈದು ಜನ
ಕೂಡಿದರೆ ಮುಷ್ಟಿಯಾದೇವು
ಅಗಲಿದರೆ ಹಸ್ತವಾದೇವು
ಅಂಗೈಲಿ ಕಮಲ ಹಿಡಿದೇವು
ಹೊತ್ತೇವು ತೆನೆ ತಲೆಯ ಮೇಲೆ
ಸಿಕ್ಕೆಸೇವು ಕುಡುಗೋಲು ಸೊಂಟದಲಿ
ಹಾಗೆಂದ ಮಾತ್ರಕ್ಕೆ
ಆಳುವ ಜಾತಿ ನಮ್ಮದಲ್ಲ
ನಾವೈದು ಜನ
ಕೆಲಸ ಮಾಡದ ಸೋಮಾರಿ
ಗಳಲ್ಲ
ಹಿಡಿದದ್ದು ಸಾಧಿಸುವ
ಹಠಮಾರಿಗಳಲ್ಲ
ಬದುಕಿಯೂ
ಸತ್ತಂತೆ ಬದುಕಿರುವ
ನಮ್ಮ
ಸುತ್ತಲಿನ ನಿಮ್ಮ
ಪ್ರತಿನಿಧಿಗಳು
ಖೋಜಾಗಳು!
*****