ಈ ಮಾತುಗಳು ಮಾತೇ ಕೇಳಲೊಲ್ಲವು ಮೊಳಕೆ ಒಡೆಯಲೊಲ್ಲವು ಚಿಗುರಿ ಹೂತು ಕಾತು ಹಣ್ಣಾಗುವುದಂತೂ ದೂ…ರ ಷಂಡವಾಗಿವೆ ಮಾತು ಜೊಳ್ಳು ಬೀಜದಂತೆ ಸಂತಾನ ಶಕ್ತಿಯೇ ಇಲ್ಲ ಬರೀ ಬೆಂಕಿಯಲ್ಲಿ ತುಪ್ಪ ಹೊಯ್ದು ಹೊಗೆ ಎಬ್ಬಿಸಿದಂತೆ ಮಿಥ್ಯಾ ಮಾಯಾಬ್ರಹ್ಮದ ಮ...

‘ದುಡಿದು ತಿನ್ನುವವ ದೊಡ್ಡವ ಬಡಿದು ತಿನ್ನುವವ ಭಂಡರವ’ ಹೀಗೊಂದು ಲಾರಿ ಹಿಂಬದಿಯ ಬರಹ; ವಾಸ್ತವದಲ್ಲಿ ಆಗಿದೆ ಬಡಿದು ತಿನ್ನುವವ ದೊಡ್ಡವ ದುಡಿದು ತಿನ್ನುವವ ಭಂಡರವ! *****...

ನನಗೆ ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ದೊರೆತದ್ದು ವಿದ್ಯೆಯ ಮೊಗವಾಡ, ಬರಿಯ ಪದವಿ ಪತ್ರ ಎಂದು ಸ್ಪಷ್ಟವಾದದ್ದು; ನಮ್ಮ ಸಮಾಜದ ಪ್ರತಿಷ್ಠಿತರು ನಮ್ಮನ್ನು ಎಷ್ಟು ನಯವಂಚಕರನ್ನಾಗಿ ಬೆಳೆಸಿದ್ದಾರೆ ಎಂದು ಅರಿವಾದದ್ದು; ದೀನದಲಿತರ ಉದ್...

ಅಮ್ಮ ನಿನ್ನ ಕರುಣೆಯ ನಾ ಸದಾ ಮನದಿ ನೆನೆವೆ ನೂರು ರೂಪಗಳಲಿ ನಮ್ಮ ಭಾಗ್ಯವ ನೀ ಬೆಳೆವೆ ಮಲೆನಾಡಿನ ಕಾಡುಗಳಲಿ ಮೈಪಡೆದ ಬಲವೆ, ಅಡಿಕೆ ತೆಂಗು ಸಾಲು ಸಾಲು ಸೇನೆ ನಿಂತ ನಿಲವೆ, ಶಾಲಿವನದ ತೆನೆಗಳಲ್ಲಿ ತೂಗುವನ್ನಪೂರ್ಣೆಯೇ, ಚೆಲುವಿನಷ್ಟೊ ಹೊನಲು ಸೇರ...

ನಾಲ್ಕು ದಾರಿಗಳು ಸೇರುವ ಇಲ್ಲಿ ಬಹುದಿನಗಳಿಂದ ಒಬ್ಬ ‘ಮುದುಕ’ ಕೋಲು ಹಿಡಿದು ನಿಂತಿದ್ದಾನೆ ವೃತ್ತ ಸುತ್ತಿಕೊಂಡು ಹೋಗುವ ಜನ ಯಾರನ್ನೂ ಗಮನಿಸುವುದಿಲ್ಲ ಅವಸರದಲಿ ನಡುವೆ ನಿಂತ ಅರೆ ಬೆತ್ತಲೆ ಫಕೀರನನು ಅಲ್ಲೇ ಮಲಗಿರುವ ದನಗಳನೂ… ಮುರುಕು ಚ...

ಕಟ್ಟಿದ್ದೇನು ಕುಣಿದಿದ್ದೇನು ಸಿಂಗರಿಸಿದ್ದು ಅದೇನು! ಒಂದೇ ದಿನದ ಮಂಗಕುಣಿತಕ್ಕೆ ಹಡೆ ವೈಯಾರ ಅದೇನು! ಆರತಿ ಬಂತು, ಅಕ್ಷತೆ ಬಿತ್ತು ಉಘೇ ಉಘೇ ಜನ ಘೋಷ, ನಂದೀಕೋಲು ನೂರು ಹಿಲಾಲು ಕುಣಿತ ಕೇಕೆ ಆವೇಶ. ಭಜನೆ ಮುಗಿದು ಮೈ ಬಸವಳಿದು ಕಣ್ಣಿಗಿಳಿದಿದೆ...

ಸ್ಫೂರ್ತಿ ನಿವಾಸನ ಮನೆಯಿಂದ ಬಂದ ಮೇಲೆ ಕೊಂಚ ದಿನ ಎಲ್ಲದರಲ್ಲೂ ನಿರಾಸಕ್ತಳಾಗಿದ್ದಳು. ನಿವಾಸನ ಕುಟುಂಬದ ಕಥೆ ಕೇಳಿ, ಅವನ ಮೇಲಿದ್ದ ಗೌರವ ಆದರ ಮತ್ತಷ್ಟು ಹೆಚ್ಚಾಗಿತ್ತು. ಜೊತೆಗೆ ಅನುಕಂಪ ಕೂಡ ಸೇರಿಕೊಂಡಿತು. ಪಾಪ ನಿವಾಸ್ ಅದೆಷ್ಟು ಸಂಕಟ ಅನುಭ...

ಗಳಿಸಿಕೊಂಡಿಹೆವಿಂದು ಸ್ವಾತಂತ್ರ್‍ಯ ಭಾಗ್ಯವನು ಉಳಿಸಿಕೊಳ್ಳುವೆವೇನು ಅದನು ಮುಂದಿನ್ನು? ಜಾತಿ ಮತ ಪಂಥಗಳ ಭೇದಗಳನೆ ಹಿಡಿದು, ರೀತಿ ನೀತಿಯ ತೊರೆದು, ಗುಣಕೆ ಮನ್ನಣೆ ತಡೆದು, ಭೀತಿಯನ್ನೊಡ್ಡಿ ಜನತೆಯ ಹಕ್ಕುಗಳ ಕಡಿವ ಸರ್ವಾಧಿಕಾರ ಬರೆ ಸ್ವಾತಂತ್ರ...

12345...73

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...