ಐಸ್ ಕ್ರೀಮ್ ಬೇಕೇ ಐಸ್ ಕ್ರೀಮ್ ಅಂತ ಕೂಗುತ ಬಂತು ಐಸ್ ಕ್ರೀಮ್ ಗಾಡಿ ಐಸ್ ಕ್ರೀಮ್ ಬೇಡ ಎಂದನು ಪುಟ್ಟ ಐಸ್ ಕ್ರೀಮ್ ಗಾಡಿ ಹೊರಟೋಯಿತ್ತು ಚುರುಮುರು ಬೇಕೇ ಚುರುಮುರು ಅಂತ ಕೂಗುತ ಬಂತು ಚುರುಮುರು ಗಾಡಿ ಚುರುಮುರು ಬೇಡ ಎಂದನು ಪುಟ್ಟ ಚುರುಮುರು ಗ...

ಕುಲಗೆಟ್ಟ ಹೆಣ್ಣಿವಳು ಅಂಟದಿರಿ ಜೋಕೆ ಹುಳುಕು ತುಂಬಿಹುದಂತೆ ಗೊಡವೆ ನಮಗೇಕೆ ಪತಿಹೀನೆಯಾದವಳು ಗತಿಹೀನೆಯಾದವಳು ಸುತರಿಲ್ಲದೇ ಮುಕ್ತಿ ಹೀನೆಯಾದವಳು ಮತಿ ಇಲ್ಲವೋ, ಅಕಟ ದೇಹವನು ಧರಿಸಿಹಳು ಹಿತವಿಲ್ಲದಾ ಜನಕೆ ಮುಖವ ತೋರುವಳು ಸಮಾಜದೊಳಗೆಲ್ಲ ಏನೇನೊ...

ಅಣ್ಣ ಬಸವಣ್ಣ ಇದೆಲ್ಲ ಏನಣ್ಣ? ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ? ಜಾತಿ ಹೀನನಾ ಮನೆಯ ಜ್ಯೋತಿ ನೀ… ಹೀನ ಜಾತಿಗಳ ಪೊರೆದ ದೊರೆ ನೀ…! * ಕಲ್ಯಾಣದ ಬೆಂಕಿ ನೀ ಕೆಳ ಜಾತಿ, ಮತ, ವರ್ಗಗಳಿಗೆ, ಕಣ್ಣು ನೀ ‘ಹೌದು! ಮಾದಿಗರ ಮನೆ ಮಗ ...

ಶಶಿಯವರನ್ನು ಭಾರತ ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನಕ್ಕೆ ಅಭ್ಯರ್ಥಿಯೆಂದು ಹೆಸರಿಸಿದ್ದು ನನಗೇನೋ ತುಂಬಾ ಖುಷಿ ಗೆದ್ದವರು ಬಾನ್ ಕಿ ಮೂನು ಯಾರು ಗೆದ್ದರೇನು? ನಂದೇ ಹೆಸರಲ್ಲವೇನು? ಭೂಮಿಯ ಮೇಲೆ ನನ್ನ ಪ್ರಭಾವವೇನು ಈಗಲಾದರೂ ನಿಮಗೆ ಅರ್ಥವಾ...

ಮಣ್ಣಿನ ಮಕ್ಕಳ ಮಣ್ಣಿನ ಬದುಕನು ಕಣ್ಣೆತ್ತಿ ನೋಡದ ಹಾಗೆ ಮಾಡುವ ವಿದ್ಯೆಗೆ ಧಿಕ್ಕಾರ ಈ ಓದಿಗೆ ಧಿಕ್ಕಾರ ಜೀವನವೆಂದರೆ ಬದುಕೇನೆಂದರೆ ಗೊತ್ತೇ ಇಲ್ಲದ ಮುಗುದ ಮಕ್ಕಳು ಅನಂತ ವಿಶ್ವದ, ಅರಿಯದ ಭವಿಷ್ಯ ಕಲ್ಪನೆ ಕನಸಿನ ಕಣ್ಣುಗಳು ಬುರುಗು ಜೀವನಕೆ ಒಗ್...

ತುಳುನಾಡಿನ ಕೇಂದ್ರಬಿಂದು ಮಂಗಳೂರಿನಲ್ಲಿ ಜನಿಸಿದ ಎಂ.ಗೋವಿಂದ ಪೈ (ಜನನ: ೧೮೮೩ ರ ಮಾರ್ಚ್ ೨೩) ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕ, ಭಾಷಾತಜ್ಞರಾಗಿ ‘ಸಾರಸ್ವತ ಲೋಕದಲ್ಲಿ ತಮ್ಮ ಅಚ್ಚಳಿಯದ ಛಾಪು ಮೂಡಿಸಿದವರು. ಮಹತ್ವದ ಲೇಖನಗಳ ಮೂಲಕ ತುಳುನಾಡಿನ...

ಸರಿದೀತೇ ಕಾರಿರುಳು ಈ ದೇಶದ ಬಾಳಿಂದ? ಸುರಿದೀತೇ ಹೂ ಬೆಳಕು ಈ ಭೂಮಿಗೆ ಬಾನಿಂದ? ಅಲುಗಾಡಿದ ಛಾವಣಿ ಮೇಲೆ ಬಿರುಕಾಗಿವೆ ಗೋಡೆಗಳು, ನಡುಗುತ್ತಿದೆ ಕಾಲಡಿ ನಲವೇ ಗುಡುಗುತ್ತಿವೆ ಕಾರ್ಮುಗಿಲು, ಕೆಳಸೋರಿದೆ ಮಳೆಧಾರೆಯು ಹರಕಲು ಸೂರಿಂದ, ಕೊನೆಯೆಂದಿಗೆ...

ಬಿಸಿಲು ಸುಟ್ಬು ಬಿರುಕು ಬಿಟ್ಟು ಮಳೆಯ ನೀರನೆ ಕುಡಿದು ಹಸಿರು ತೊಟ್ಟ ಕಲ್ಲುಬೆಟ್ಟ ನನ್ನಪ್ಪ ಒಡಲು ಮೆಟ್ಟಿ ಸುತ್ತುಗಟ್ಟಿ ಮೇಯುವ ದನ ಕರು ಕುರಿಗಳಿಗೆ ಹಸಿರು ಹುಲ್ಲು ಕೊಟ್ಟ ಕಲ್ಲುಬೆಟ್ಟ ನನ್ನಪ್ಪ ತೊಡೆಯ ಸಂದಿಯಲಿ ಕಳ್ಳು ಬಳ್ಳಿಯ ತೆರದಿ ಬೇರು ...

1...1617181920...73

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...