ಜನ ಪೆಟ್ಟಿಗೆ ಸಾಮಾನು ಸರಂಜಾಮುಗಳೊಂದಿಗೆ ಗೇಟಿನತ್ತ ಧಾವಿಸುತ್ತಿದ್ದಂತೆ ಗಾಳಿ ಮಳೆ ಹೊಡೆಯುವುದಕ್ಕೆ ಶುರುವಾಯಿತು. ದೊಡ್ಡ ದೊಡ್ಡ ಮಳೆಯ ಹನಿಗಳು ಸ್ಟೇಷನ್ನಿನ ಹಂಚಿನ ಮಾಡಿನ ಮೇಲೆ ಬಿದ್ದು ಶಬ್ದ ಮಾಡಿದವು. ಹೊರಗೆ ಕಾದಿದ್ದ ಟ್ಯಾಕ್ಸಿ ಟಾಂಗಾಗಳು...

ಕೋಳಿ ಕೂಗದ ಮುನ್ನ, ನಾಯಿ ಬೊಗಳದ ಮುನ್ನ…. ರವಿ ಕಣ್ಣು ಬಿಡದ ಮುನ್ನ… ಇಡೀ ಊರು ಕೇರಿಯೆದ್ದೆದ್ದು ಕುಳಿತಿತು. ಅಂಗ್ಳ ಗುಡ್ಸಿ…. ಸಗಣೀರಾಕಿ, ರಂಗು ರಂಗ್ನಿನ ಸಪ್ತವರ್ಣಗಳಲ್ಲಿ ರಂಗವಲ್ಲಿಯಿಕ್ಕಿ, ತಂಗ್ಡಿ, ಗುರ್ಯಾಳು, ಚಂಡು...

ಹಳ್ಳಿಯಲ್ಲಿ ಚಿಕ್ಕ ತಕ್ಕಡಿ ಅಂಗಡಿ ಒಂದು. ಬೆಲ್ಲ –  ಇಂಗು – ಜೀರಿಗೆ, ಚುರಮರಿ – ಪುಠಾಣಿ ಮಾರುವ ಕಿರಾಣಿ ಅಂಗಡಿ. ಹಳ್ಳಿಯೊಳಗಿನ ಗಿರಾಕಿಗಳು ಉಡಿಯಲ್ಲಿ ಜೋಳವನ್ನೋ ಕುಸುಬೆಯನ್ನೋ ತಂದು ಅಂಗಡಿಕಾರನ ಮಾಪಿನಲ್ಲಿ ಅಳೆದುಹಾಕಿ...

ನಾನು ಹೇಳುವುದೆಲ್ಲಾ ಸತ್ಯ ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ – ಓದುಗರ ಮೇಲಾಣೆ. ಲೇಖಕ ಎಂಬುದನ್ನು ನೀನಾಗಲೇ ಮರೆತಿರಬಹುದು ಯಾಕೆಂದರೆ ಇತ್ತೀಚೆಗೆ ನೀನು ಏನನ್ನೂ ಬರೆದಂತೆ ತೋರಲಿಲ್ಲ ಸರ್ಕಾರಿ ನೌಕರಿಯಲ್ಲಿ ಇದ್ದುಕೊಂಡು ಬರೆವ ನೀವು...

ಮುಕ್ಕಾಲು ಭಾಗ ಭರ್ತಿಯಾಗಿರುವ ಗುಜರಿ ಗೋಣಿಯನ್ನು ಎಡಭುಜದ ಹಿಂಭಾಗಕ್ಕೆ ನೇತು ಹಾಕಿ, ತಲೆ ತಗ್ಗಿಸಿ ಕಣ್ಣುಗಳನ್ನು ಒಮ್ಮೆ ಎಡಕ್ಕೆ, ಇನ್ನೊಮ್ಮೆ ಬಲಕ್ಕೆ ಹೊರಳಿಸಿ, ಬಿಯರು ಬಾಟಲಿಯೋ, ಕಬ್ಬಿಣದ ಸರಳೋ, ಪ್ಲಾಸ್ಟಿಕ್‌ ಚೀಲವೋ, ಚಪ್ಪಲಿಯೋ, ಇನ್ನೇನೋ...

ಮಾರ್ಕೆಟ್ ಬದಿಯ ಪರಿಚಯದ ಸೆಲೂನ್ ಅಂಗಡಿ ಪಕ್ಕ ಬೈಕ್ ನಿಲ್ಲಿಸಿ ಮಧು ಹೆಂಡತಿ ಕೊಟ್ಟ ಚೀಟಿಯನ್ನು ಕಿಸೆಯಿಂದ ಹೊರ ತೆಗೆದ. ಹಾಲು, ಸ್ವೀಟ್ಸ್, ಬಾಳೆಹಣ್ಣು, ಮೂರು ಬಗೆಯ ತರಕಾರಿ, ಟೊಮೆಟೋ, ಬ್ರೆಡ್ ಹಾಗೂ ಕೊನೆಯ ಐಟಂ ಎರಡು ಕೆ.ಜಿ. ಕೋಳಿ ಮಾಂಸ. ಕಡ...

ಸಿನಿಮಾ ಮುಗಿದು ನಾಯಕ ತನ್ನ ಹೋಟೇಲಿಗೆ ಮರಳಿದಾಗ ಸಾಧಾರಣ ಒಂದೂವರೆ ಗಂಟೆಯಾಗಿರಬಹುದು. ಅವನ ವಾಚು ಕೆಟ್ಟುಹೋಗಿತ್ತು. ಹೋಟೇಲು ಕಾಂಪೌಂಡಿನ ಉಕ್ಕಿನ ಗೇಟು ತುಸುವೆ ತೆರೆದಿತ್ತು. ಬದಿಗೆ ಗೂಡಿನಲ್ಲಿ  ಕುಳಿತಿದ್ದ ಕಾವಲಿನವ ತೂಕಡಿಸುತ್ತಿದ್ದ. ತೂಕಡ...

ಕರಕರ ಹೊತ್ತುಟ್ಟೊ ಹೊತ್ತು. ದಕ್ಕಲು ಬಾಲಪ್ಪಗೌಡ ದಿಡಿಗ್ಗನೆದ್ದ. ಕೂಗಳತೆಯಲ್ಲಿದ್ದ ಕುಂಟೆ ಕಡೆ ನಡೆದು, ನಿತ್ಯಕರ್ಮ ಮುಗಿಸಿ, ಅಲ್ಲೇ ಮಡುವಿಗೆ ಹಾರಿ ಈಜು ಹೊಡೆದ. ಸುಸ್ತೆನಿಸಿ, ಕುಂಟೆಕಟ್ಟೆಗೆ ಹೋಗಿ ಕುಳಿತ. ಉಟ್ಟಬಟ್ಟೆಯಲ್ಲೇ ಇಷ್ಟಲಿಂಗ ಪೂಜೆ...

ತಳಿರು ತೋರಣಗಳಿಂದ ಸಿಂಗರಿಸಿ, ಅಂಗಳಗಳು ಸೆಗಣಿ ಸಾರಿಸಿಕೊಂಡು, ರಂಗೋಲಿ ಇಕ್ಕಿಸಿಕೊಂಡದ್ದಕ್ಕೆ ಸಾಯಲು ಸಿದ್ಧವಾಗಿದ್ದ ಊರಿಗೆ ಕಾಯಕಲ್ಪ ಬಂದಂತಾಗಿತ್ತು. ವರ್ಷಕೊಮ್ಮೆ ಜಾತ್ರೆಗೆ ಊರಿಗೆ ಯೌವನ ಪ್ರಾಪ್ತವಾಗುತ್ತದೆಯಾದರೂ ಅದು ಇತ್ತೀಚಿಗೆ ತನ್ನ ಆಕ...

ಗಂಡ ಹೆಂಡಿರಿಬ್ಬರು. ಒಂದುದಿನ ಹೆಂಡತಿ ಮಾಲಾದಿ ಮಾಡಿ ಮೂರು ಉಂಡಿ ಕಟ್ಟಿಟ್ಟಳು. “ಮಾಲಾದಿ ನಾ ಮಾಡೀನು. ಎರಡು ನನಗೆ ಒಂದು ನಿನಗ” ಎಂದಳು ಹೆಂಡತಿ. “ಇಲ್ಲ. ನಾ ಮಾಡಿಸಂದಾಂವ. ನನಗೆ ಎರಡು ಉಂಡಿ ನಿನಗೆ ಒಂದು ಉಂಡಿ” ಎ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...