Home / ಕವನ / ಕವಿತೆ

ಕವಿತೆ

ನೀ ಬರುವೆಯೆಂದು ತಲ್ಲಣವೆ ಕ್ಷಣ ಕ್ಷಣ ಬರುವ ದಾರಿಯ ನೆನಪು ನವಪುಲಕದೂರಣ ನಿರೀಕ್ಷೆಯ ಮಹಾಪೂರ ನನ್ನ ಮೇಲೆ ಸುರಿದಂತೆ ಮನಸು ನಿರ್ವ್ಯಾಪಾರ ಮಾಡುವ ಸಂತೆಯಂತೆ ಇಲ್ಲೇ ನಿಜರೂಪದ ನೆನಪ ಬಿಸಿಲಗುದುರೆ ಕಾಣ್ವ ಕಾತರತೆಯಲ್ಲೆ ಕಾಣದಿಹ ನಶ್ವರತೆ ಕಾಯುವ ಹಿ...

ನಾನು ಹಕ್ಕಿ ಆದರೂಽನು ಹಾರಲಾರೆ ಇನ್ನುಽ ನಾಽನು || ಪುಕ್ಕ ಬಿಗಿದ ಕ್ರೂರಗಣ್ಣು ಯಾವ ಯುಗದ ಮಾಯೆಯೋ ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ ಸ್ವತಂತ್ರ ಬರೀ ಛಾಯೆಯೋ || ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ ಶಂಕೆಯಲೆಯಲೆ ಭೀತಿಯು ಅನಿಲನಿಲದ ಕೊರಳ ರವದಲ...

ಸಣ್ಣ ಹುಡುಗನ ಶಡುವಿಗೆ ಮಿಡಿಕ್ಯಾಡೋ ಮನಕ ಮಚ್ಚಿಲ್ಹೊಡೆದು ||ಪ|| ಅಣಕವಾಡು ಶಿವನಂದಿ ಪಿಟೀಲಿಗೆ ತುಣಕ ಚರಂತಿಯ ತಾಳ ಕುಟೀಲಗೆ ಹೆಣಕ್ಯಾಡುವ ಸೊಟ್ಟದ ಕೌಚಾಪಿಗೆ ಕಣಕಹಚ್ಚಿ ಬಾರಿಸುವ ಮೃದಂಗದ ಘನಶಾಸ್ರ ಅರಿಯದ ಗುಣಗೇಡಿಗಳಿಗೆ ||೧|| ಹೊಸಹಳ್ಳಿ ಗ್ರ...

ಏನು ಮಾಡೋದು ಯಾವಾಗಲೂ ಎಲ್ಲಾದಕ್ಕೂ ಎರೆಡೆರಡು ಮುಖ ಮನುಷ್ಯನಿಗೆ ಹೆಚ್ಚು ಆಸೆ ಯಾವುದು ಕೆಟ್ಟದ್ದೋ ಅದರ ಮೇಲೆ ಯಾರಿಗೆ ಗೊತ್ತಿಲ್ಲ ತಂಬಾಕು ದೇಹಕ್ಕೆ ಘೋರ ಘೋರ ಸಿಗರೇಟು ಸೇದಲು ಮನೇಲಿ ಹೆಂಡತಿ ಅಡ್ಡಿ ಬೀದೀಲಿ ಕಾನೂನು ಅಡ್ಡಿ ಆದರೂ ಅದನ್ನು ಬಿಟ್...

ಅಲ್ಲಿ ಭಾವಗೀತೆಯಂತೆ ತಂಗಾಳಿ ಸೂಸುವ, ದಟ್ಟ ನೆರಳು ಕೊಡುವ ಸಾಲುಹುಣಸೆಮರಗಳಿದ್ದವು. ಯಂತ್ರ, ವಾಹನಗಳ ಹೊಗೆ; ಪ್ರವಹಿಸುತ್ತದೆ ಮನಸ್ಸಿನಾಳದಲ್ಲಿ, ಇತ್ತೀಚೆಗೆ ಹಾಳು ಹುಡುಗಿಯರು ಕತ್ತೆಗಳಂತೆ ಅಲ್ಲಲ್ಲಿ ಸ್ತಬ್ಧವಾಗಿ ನಿಂತಿರುತ್ತಾರಂತೆ. ಮುರಿದು ...

ಕೇಳಿರಣ್ಣ ಕೇಳಿರಿ ದೀನರ ವ್ಯಥೆಯ ನೋಡಿರಣ್ಣ ನೋಡಿರಿ ಹೀನರ ಕಥೆಯ || ಅಂತ್ಯಕಾಲದ ದೀಪ ಜನರಲ್ಲೆಜುಕೇಷನ್ನು ಎಂಥ ದುಸ್ಥಿತಿ ಗ್ಯಾಟಿನಿಂದಲ್ಲದಿನ್ನೇನು ತಲೆ ಕತ್ತರಿಸಿ ಪಾದಕೆ ನೀರೆರದರೇನು ಹೈಯರೆಜುಕೇಷನ್ನಿನ ಜೀವ ಉಳಿದೀತೇನು || ಡಾಟುಕಾಮಿನಿಂದ ಬ...

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು || ಬರೆದುದೆ ಬದುಕಲ್ಲ ಬದುಕಿದ್ದು ತಾ ನಿಲುಕಲ್ಲ. ಕಾವ್ಯವೆಂದರೆ ಅದುವೆ ಜನನಮರಣದಾಚೆ ಈಚೆ ಬಾಳು || ಹೇಳುವರು-ಹೇಳಿದ...

ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ||ಪ|| ದುರಿತಭವದ ಯೋಗದಿಂದ ವಾದವ್ಯಾತಕೆ ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ ||೧|| ನಾಗಲಿಂಗಯೋಗಿ ತಾನು ತಿರುಗುವುದ್ಯಾತಕೆ ಬಗಳಾಮುಖಿಯ ಮಗನಕೂಡ ರಗಳಿಯಾತಕೆ |...

ನೀಲಿಹೂಗಳ ಬುಡ್ಡೆಸೊಪ್ಪನ್ನೋ, ಹೂಳೆತ್ತಿದ ಕೆರೆಮಣ್ಣನ್ನೋ, ಇಟ್ಟಿಗೆಗಳನ್ನು ತುಂಬಿಕೊಂಡೋ ಆ ಕೆರೆದಡದ ಮೇಲೆ ಸಾಗಿಹೋಗುವ ಮ್ಯಾಸ್ಸೆ ಫರ್ಗ್ಯುಸನ್ ಟ್ರ್ಯಾಕ್ಟರ್ ಅನ್ನು ಆಗಾಗ ನೋಡುತ್ತಿರುತ್ತೇನೆ. ಬಟವಾಡೆಯ ವಿಚಾರದಲ್ಲೋ, ಹೆಂಡಗಡಂಗಿನವನ ಜೊತೆ ಕ...

ಕ್ಷಮಿಸು ಗೆಳತಿ ನಾನಿಂದು ಮಾಡಿದವಮಾನವ ನಿನ್ನೆದುರು ನಾನು ಕ್ಷಣ ಕ್ಷಣಕೂ ಅಲ್ಲ ಮಾನವ || ಅರಿಯದಾದೆ, ನಿನ್ನ ಎಲ್ಲರೆದುರು ಅಸವಲ್ಲದವಳೆಂದರೂ ನೀನು ವಹಿಸಿದ ಮೌನವಿಂದು ಕೊಲ್ಲುತಿದೆ ನಾನೆಂಥವನೆಂದು || ನನ್ನ ಕ್ಷಮೆಗೆ ಸೂಚನೆ ನಿನ್ನಿಂದೇಗೆ ನಿನ್ನ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...