ಹೆಣ್ಣು… ಹೊನ್ನು… ಮಣ್ಣು
ಕದನಕೆ ಮೂಲ ಎನುತಿರೆ
ಹೆಣ್ಣು… ಕುದುರೆ… ನೀರು…
ಅರಿಯರು ನೆಲೆಯ ಮೂಲನು
ಎನ್ನುವ… ಪ್ರಶ್ನೆಗೆ ಉತ್ತರವು
ಮರೀಚಿಕೆಯಲಿ ಮರೆಯಾಗುತಿಹುದು
ಅಂದು-ಪ್ರೀತಿ ಬಾನಂಗಳದಿ
ಜೋಡಿ ಹಕ್ಕಿಗಳು ನಾವಾಗಿ
ಪ್ರೀತಿಯ-ಬಲೆಯಲಿ…
ಚಿಲಿ-ಪಿಲಿ ಗಾನವ ಹಾಡುತ
ಅಪ್ಪುಗೆಯಲಿ ಮೈಮರೆತು…
ಎಚ್ಚರಗೊಂಡು ಮಿಸುಕುತಲಿ
ಅಧರಾಮೃತವು ವಿನಿಮಯಿಸುತಿರೆ
ಬಾಳಿನ… ಬೆಳದಿಂಗಳ ಬಾಲೆ.. ನೀ..
ಎಂದು ಹರುಷದಿ ತೇಲಿದ್ದ… ನನಗೆ…
ನಗುನಗುತಿರುವ ಪ್ರೀತಿ, ಇಂದು
ಸ್ನೇಹ-ಪ್ರೇಮ ಹುಸಿಯಾಗಿಸುತಲಿ
ಆಶೆಯ ಅರಗಿನ ಕೈಗೊಂಬೆಯಾಗಿ
ದೂರದಿ… ಇರುಳಿನ ಬೆಂಗಾಡಿನಲಿ
ಹಸಿರನರಸುತಲಿ… ಅವಳು…
ಮರೆಯಾದ… ಆ ಮಾಯಾಂಗಿನಿ
ಹೆಣ್ಣೆ… ಎನ್ನಲು… ಮನಸ್ಸು
ಲಜ್ಜೆಯಲಿ… ನಾಚುತ ಅದರುತಿದೆ
ಹೃದಯ ಬಿರಿದು ಕಂಪನಗೊಳ್ಳುತಿದೆ
***