ಸಸ್ಯ ಪ್ರಪಂಚದ ಸ್ಥೂಲ ನೋಟ

– ಸುಭಾಶ್ ಏನ್ ನೇಳಗೆ

ಜೀವಪ್ರಪಂಚದಲ್ಲಿಯೇ ಸಸ್ಯಗಳು ವಿಶಿಷ್ಟವಾದ ವ್ಯೆವಿಧ್ಯತೆಯನ್ನು ತೋರುತ್ತದೆ. ಎಕಕೋಶೀಯ ಸೂಕ್ಷ್ಮ ಸಸ್ಯಗಳಿಂದ ಹಿಡಿದು ಬೃಹದಾಕಾರದ ಮರಗಳವರೆಗೆ ಆಕಾರದಲ್ಲಿ, ರಚೆನೆಯಲ್ಲಿ ಜೈವಿಕ ಕ್ರಿಯೆಯಲ್ಲಿ ಭಿನ್ನವಾಗಿರುವ ಸಸ್ಯಗಳಿವೆ. ಸಸ್ಯಪ್ರಪಂಚದ ಅದ್ಭುತಗಳತ್ತ ನೋಟ ಹರಿಸುವ ಮೊದಲು ಅದರ ಸ್ಥೂಲ ಪರಿಚಯ ಮಾಡಿಕೊಳ್ಳೋಣ.

ಈವರೆಗೆ ಸುಮಾರು ಸಸ್ಯಗಳು ೩,೫೯,೪೨೫ ಜಾತಿಯ ಸಸ್ಯಗಳನ್ನು ಗುರುತಿಸಲಾಗಿದೆ. ನಿಸರ್ಗ ಇನ್ನೂ ಅದೆಷ್ಟೊ ಪ್ರಭೇದಗಳನ್ನು ನಿಗೂಢವಾಗಿಯೋ ಇರಿಸಿದೆ. ಸಾಗರ ನದಿಗಳಲ್ಲಿ ಪರ್ವತದಶಿಖರದ ಮೇಲೆ, ದಟ್ಟಡವಿಗಳಲ್ಲಿ ಗುರುತಿಸಬೇಕಾದ ಅನೇಕ ಸಸ್ಯಗಳಿವೆ. ಸಸ್ಯರಾಜ್ಯವನ್ನು ಎರಡು ಪ್ರಮುಖ ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಹೂ ಬಿಡದ ಸಸ್ಯಗಳು ಮತ್ತು ಹೂ ಬಿಡುವ ಸಸ್ಯಗಳು (ಕ್ರಿಪ್ಟೋಗ್ಯಾಮಿಯ ಮತ್ತು ಘೆನಓಗ್ಯಾಮಿಯ). ಹೂ ಬಿಡದ ಸಸ್ಯಗಳನ್ನು ಮತ್ತೆ ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಥ್ಯಾಲೋಪೈಟ, ಬ್ರಯೋಪೈಟ, ಮತ್ತು ಟೆರಿಡೋಪೈಟ. ಘೆನರೋಗ್ಯಾಮಿಯ ಗುಂಪನ್ನು ಎರಡು ಪ್ರಮುಖ ಗುಂಪುಗಳಲ್ಲಿ ವರ್ಗೀಕರಿಸಲಾಗಿದೆ. ಜಿಮ್ನೋಸ್ಪರ್ಮ್ (ಅನಾವೃತ ಬೀಜೀಯ ಸಸ್ಯಗಳು) ಮತ್ತು ಅಂಜಿಯೋಸ್ಪರ್ಮ್ (ಆವೃತ ಬೀಜೀಯ ಸಸ್ಯಗಳು). ಆವೃತ ಬೀಜೀಯ ಸಸ್ಯಗಳು ದ್ವಿದಳ ಮತ್ತು ಏಕದಳ ಸಸ್ಯಗಳೆಂದು ಭಾಗಿಸಲಾಗಿದೆ. ಸ್ಥೂಲ ವಿವರ ಇಲ್ಲಿದೆ :

ಥ್ಯಾಲೋಫೈಟ ಉಪರಾಜ್ಯ

ಹೆಚ್ಚಿನ ಸಸ್ಯಗಳು ನೀರಿನಲ್ಲಿ ವಾಸಿಸುತ್ತವೆ. ಕೆಲವು ನೆಲದ ಮೇಲೆ ಮತ್ತು ಜೀವಂತ ಅಥವಾ ಮೃತ ಸಸ್ಯ – ಪ್ರಾಣಿಗಳ ಮೇಲೆ ವಾಸಿಸುತ್ತವೆ.

ಶ್ಯೆವಲ ವರ್ಗ

ನೀರಿನಲ್ಲಿ ವಾಸಿಸುವ ಏಕಕೋಶ ಅಥವಾ ಬಹುಕೋಶೀಯ ಸಸ್ಯಗಳು ವಿಶಿಶ್ಠವಾದ ಬೇರು, ಕಾಂಡ, ಎಲೆಗಳನ್ನು ಹೊಂದಿಲ್ಲ ಪತ್ರಹರಿತ್ತು ಮತ್ತಿತರ ವರ್ಣದ್ರವ್ಯ ಹೊಂದಿದ್ದು, ಸ್ವತಂತ್ರವಾಗಿ ಆಹಾರ ತಯಾರಿಸುತ್ತವೆ.

ಉದಾ: ನಾಸ್ಟಾಕ್, ಡಯಾಟಮ್, ಸ್ಪೈರೋಗೈರ, ಸರ್ಗ್ಯಾಸಮ್ ಇತ್ಯಾದಿ.

ಶಿಲೀಂದ್ರ ವರ್ಗ

ಇವು ಪತ್ರಹರಿತ್ತು ಹೊಂದಿರುವುದಿಲ್ಲ. ಆಹಾರಕ್ಕಾಗಿ ಇತರ ಜೀವಂತ ಅಥವಾ ಮೃತ ಸಸ್ಯ – ಪ್ರಾಣಿಗಳ ಮೇಲೆ ವಾಸಿಸುತ್ತವೆ, ಏಕಕೋಶೀಯ ಅಥವಾ ಕವಲೊಡೆದ ಶಿಲೀಂದ್ರ ಜಾಲದಿಂದ ಮಾಡಲ್ಪಟ್ಟಿರಬಹುದು.

ಉದಾ : ಫೈಸಾರಿಮ್, ಸ್ಯಾಪ್ರೋಲೆಗ್ನಿಯ, ಮೀಸ್ಟ್ ಇತ್ಯಾದಿ.

ಲಿಚೆನ್ (ಕಲ್ಲು ಹೂ)ಗಳು

ಇವು ಒಂದೇ ಸಸ್ಯವಲ್ಲ. ಎರಡು ಬೇರೆ ಬೇರೆ ವರ್ಗದ ಸಸ್ಯಗಳು ಕೂಡಿ ನಡೆಸುವ ಸಹಜೀವನಕ್ಕೆ ಲಿಚೆನ್ ಎಂದು ಹೆಸರು, ಕಲ್ಲುಬಂಡೆಗಳ ಮೇಲೆ ಟೊಂಗೆಗಳ ಮೇಲೆ ವಾಸಿಸುತ್ತವೆ.

ಉದಾ : ಉಸ್ನಿಯಾ, ಕ್ಲಾಡೋನಿಯಾ, ಪಾರ್ಮೇಲಿಯಾ ಇತ್ಯಾದಿ.

ಬ್ಯಾಕ್ಟಿರಿಯಾ

ಏಕಕೋಶೀಯ ಸೂಕ್ಷ್ಮಸಸ್ಯಗಳು, ಆಹಾರ ತಯಾರಿಸುವದಿಲ್ಲ. ಇತರ ಜೀವಿಗಳ ಮೇಲೆ ವಾಸಿಸುತ್ತವೆ. ಉದಾ : ಸ್ಪೈರಿಲಮ್ ಈಸ್ಟೆರಿಯಾ, ಇತ್ಯಾದಿ.

ಬ್ರಯೋಫೈಟ ಉಪರಾಜ್ಯ

ಪಾಮಾಜಿ ಸಸ್ಯಗಳೆಂದು ಕರೆಯಲ್ಪಡುವ ಇವು ಉಭಯ ಸಸ್ಯಗಳು. ಪತ್ರಹರಿತ್ತು ಹೊಂದಿವೆ ನಿಜವಾದ ಬೇರು, ಕಾಂಡ ಅಥವಾ ಎಲೆ ಹೊಂದಿರುವದಿಲ್ಲ. ಉದಾ : ರಿಕ್ಸಿಯಾ, ಮಾರ್ಕೆನಸಿಯಾ ಇತ್ಯಾದಿ.

ಟೆರಿಡೋಫೈಟ ಉಪರಾಜ್ಯ

ಇವು ನಿಜವಾದ ಬೇರು, ಕಾಂಡ ಮತ್ತು ಎಲೆ ಹೊಂದಿವೆ. ಆಹಾರ ನಾಳಗಳನ್ನು ಹೊಂದಿದ್ದು, ಹೂ ಬಿಡುವದಿಲ್ಲ.

ಉದಾ : ಸೈಲೋಟಮ್, ಲೈಕೋಪೋಡಿಯಂ ಇತ್ಯಾದಿ.

ಜಿಮ್ನೋಸ್ಪರ್ಮ್ ಉಪರಾಜ್ಯ

ಸಾಮಾನ್ಯವಾಗಿ ಮರಗಳು, ಈ ಸಸ್ಯಗಳಲ್ಲಿ ಅಂಡಾಶಯವಿಲ್ಲದುದಇಂದ ಅಂಡಕಗಳು ನಗ್ನವಾಗಿವೆ.

ಉದಾ : ಸೈಕಾಸ್, ಪೈನಸ್, ನೀಟಂ ಇತ್ಯಾದಿ.

ಅಂಜಿಯೋಸ್ಪರ್ಮ್ ಉಪರಾಜ್ಯ

ಸಸ್ಯಪ್ರಪಂಚದ ಸದ್ಯದ ಪ್ರಮುಖ ಸಸ್ಯಗಳು. ದ್ವಿದಳ ಮತ್ತು ಏಕದಳ ಸಸ್ಯಗಳೆಂದು ಎರಡು ವರ್ಗಗಳಲ್ಲಿ ವಿಂಗಡಿಸಲಾಗಿದೆ. ವಿವಿಧ ರೀತಿಯ ಪ್ರದೇಶ ಮತ್ತು ಪರಿಸರಗಳಲ್ಲಿ ಬೆಳೆಯುವ ಇವುಗಳು ಬೀಜಗಳು (ಅಂಡಕಗಳು) ಅಂಡಾಶಯದಲ್ಲಿವೆ. ಉದಾ : ಬೇವು, ತೇಗ, ಗುಲಾಬಿ ಇತ್ಯಾದಿ.

ಈವರೆಗೆ ಗುರುತಿಸಲಾದ ಸಸ್ಯಜಾತಿಗಳ ಸಂಖ್ಯೆ ಹೀಗಿದೆ :-

ಶೈವಲಗಳು – ೨೦,೦೦೦ ಜಾತಿಗಳು, ಶೀಲೀಂದ್ರಗಳು – ೯೦,೦೦೦ ಜಾತಿಗಳು.

ಲಿಚೆನ್ಗಳು – ೧೫,೦೦೦ ಜಾತಿಗಳು, ಬ್ಯಾಕ್ಟಿರಿಯಾ – ೨,೦೦೦ ಜಾತಿಗಳು.

ಬ್ರಯೋಫೈಟ -೨೩,೭೨೫ ಜಾತಿಗಳು, ಟೆರಿಡೋಫೈಟ – ೯,೦೦೦ ಜಾತಿಗಳು.

ಜಿಮ್ನೋಸ್ಪರ್ಮ್ – ೭೦೦ ಜಾತಿಗಳು ಮತ್ತು ಅಂಜಿಯೋಸ್ಪರ್ಮ್ -೧,೯೯,೦೦೦ ಜಾತಿಗಳು.

ಒಟ್ಟು ೩,೫೯,೪೨೫ ಜಾತಿಗಳು.

ಜೀವಪ್ರಪಂಚ ಅದ್ಭುತವಾಗಿದೆ. ಅದರ ಒಂದು ಭಾಗವಾಗಿರುವ ಸಸ್ಯಪ್ರಪಂಚ ಹೊರತಲ್ಲ. ಅಸಂಖ್ಯ ಅದ್ಭುತಗಳನ್ನು ಮಡಿಲಲ್ಲಿರಿಸಿಕೊಂಡಿದೆ. ಕೆಲವಷ್ಟೆ ತಿಳಿಯಲಾಗಿದ್ದು, ಅದೆಷ್ಟೊ ಅದ್ಭುತಗಳು ಇನ್ನೂ ಬಯಲಾಗಬೆಕಿದೆ. ಈವರೆಗೆ ತಿಳಿದುಬಂದ ಅಂತಹ ಕೆಲವು ಅದ್ಭುತಗಳನ್ನು ಒಂದೆಡೆ ಕಲೆಹಾಕುವ ಸಣ್ಣ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೆಣ್ಣು
Next post ಅವಸ್ಥೆಗಳು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…