ನಮ್ಮೂರ ಕೇರಿಯ
ರಸ್ತೆಯ ಅಂಚಿನಲ್ಲಿ
ಕುಳಿತಿದ್ದಾನೆ ಕಾಲಗರ್ಭದ ಹಿರಿಯಜ್ಜ
ಅರವತ್ತು ವಸಂತಗಳ
ಅರಿವಿನ ಅಗಾಧ ಶಕ್ತಿಯ
ಬದುಕಲಿ ಬಳಲಿದ ಹಿರಿಜೀವ
ಮುದುಡಿದ ನೆರೆಗಳ ಮುಖದಿ
ಕಳೆದಿಹ ಬದುಕಿನ…
ಬಾಳಸಂಜೆಯ ಎದುರುನೋಡುತಿಹನು
ಬರಲಿರುವ ದಿನಗಳ
ಸಮಯವ ಕಾಯುತ
ಸಮೀಪದ ಹೆಜ್ಜೆಗಳ ಗುಣಿಸುತ್ತಿರುವನು
ಯಾರು ಕಾಯುವವರಿಲ್ಲ
ಮಾತನಾಡಿಸುವವರಿಲ್ಲ
ಕರೆದು ಕೇಳುವರಿಲ್ಲ
ಆದರೂ ನಮ್ಮಜ್ಜ ಬದುಕಿದ್ದಾನೆ
ಬದುಕುತ್ತಾ ಭವಿಷ್ಯ ಎದುರು ನೋಡುತ್ತಿದ್ದಾನೆ
ನಿಸರ್ಗದ ಮಡಿಲಲ್ಲಿ ಒಬ್ಬನೇ ಕುಳಿತು
ನೆನಪಾಗುತ್ತಿವೆ ಕಳೆದ ದಿನಗಳು
ಕಣ್ಣು ಮುಂದೆ ನಿಲ್ಲುತ್ತವೆ
ಬಾಲ್ಯ ಪ್ರಾಯದ ಹಗಲು-ರಾತ್ರಿಗಳು
ಕಳೆದಿರುವ ಬದುಕು
ದಿನವಿಡಿ ತಳ್ಳುತ್ತಿದೆ
ಒಣಗಿದ ಬೋಳು ಆಲದ ಮರದಂತೆ
***