
ದಟ್ಟ ನಗರದ ಈ ಸ್ಪಷ್ಟ ಏಕಾಂತದಲ್ಲಿ ಈ ಹೋಟೆಲಿನ ಈ ಮೂಲೆಯಲ್ಲಿ ಈ ಟೇಬಲಿನ ಈ ಎರಡು ಪಕ್ಕಗಳಲ್ಲಿ ಕೂತಿರುವ ನಾವು ಈಗ ಯೋಚಿಸುತ್ತಿರುವುದು ಏನು ಪ್ರಿಯೆ ? ಅದು ಜಾಫ್ನಾ ಅಲ್ಲ ನಾಳಿನ ಭಾರತದ ಸ್ವಪ್ನವೂ ಅಲ್ಲ ಅದು ಶ್ರೀಲಂಕಾ ಅಲ್ಲ ಅದು ಗೋಯಂಕಾ ಅಲ್ಲ...
ನಾವು ಮತ್ತೆ ಮತ್ತೆ ಕೆಲವು ಪ್ರಶ್ನೆಗಳನ್ನು ಸಾಕಿಕೊಳ್ಳಲೇಬಾರದು ಅವು ನಾಯಿಗಳನ್ನು ಸಾಕಿಕೊಂಡಂತೆ ಒಮ್ಮೊಮ್ಮೆ ಕಿರಿಕಿರಿ ಮತ್ತೊಮ್ಮೆ ಪ್ರೀತಿ ನಾವು ಮತ್ತೆ ಮತ್ತೆ ಉತ್ತರಗಳನ್ನು ಬಿಟ್ಟುಕೊಡಲೇಬಾರದು ಅವು ಮೀನುಗಳಂತೆ ಪುಳಕ್ಕನೆ ಜಾರಿ ಕಣ್ಮರೆ ಸು...
ಯಾವುದೀ ಹೊಸ ಸಂಚು ಎದೆಯಂಚಿನಲಿ ಮಿಂಚಿ ಮನಸು ಕನಸುಗಳನ್ನು ಕಲೆಸಿರುವುದು? ಗಿರಿಕಮರಿಯಾಳದಲಿ ತೆವಳಿದ್ದ ಭಾವಗಳ ಮುಗಿಲ ಮಂಚದೊಳಿಟ್ಟು ತೂಗುತಿಹುದು? ಸತ್ತ ಬಾಳಿಗೆ ಮತ್ತೆ ಅಮೃತವೆರೆದು ಕತ್ತಲಾಳಗಳಲ್ಲಿ ದೀಪವುರಿದು, ಬಾಳು ಕೊನೆಯೇರುತಿದೆ ಬೆಳಕಿನ...
ನೀವೀಗ ಕಲಿಸುತ್ತಿರಬಹುದು ಭೂಮಿತಿಯ ಪ್ರಮೇಯವೊಂದನ್ನು ಎಸ್. ಎಸ್, ಎಲ್. ಸಿ. ಯಲ್ಲಿ ಗಣಿತಕ್ಕೆ ನೂರಕ್ಕೆ ನೂರು ಪಡೆದ ವಿದ್ಯಾರ್ಥಿ ನೀವು ಈಗ ವಿದ್ಯಾರ್ಥಿಗಳ ಎದುರು ನಿಂತಿದ್ದೀರಿ ಹೇಳುತ್ತಿದ್ದೀರಿ : ಲುಕ್ ಹಿಯರ್ ಆ ಅದೇ ಬೆಂಚಿನ ಮೇಲೆ ನಾನು ಕೂ...
ಮಲಗೋ ಮಲಗೆನ್ನ ಮರಿಯೆ ಬಣ್ಣದ ನವಿಲಿನ ಗರಿಯೆ, ಎಲ್ಲಿಂದ ಬಂದೆ ಈ ಮನೆಗೆ ನಂದನ ಇಳಿದಂತೆ ಬುವಿಗೆ? ತಾವರೆದಳ ನಿನ್ನ ಕಣ್ಣು ಕೆನ್ನೆ ಮಾವಿನ ಹಣ್ಣು, ಸಣ್ಣ ತುಟಿಯ ಅಂದ ಬಣ್ಣದ ಚಿಗುರಿಗು ಚಂದ, ನಿದ್ದೆಯ ಮರುಳಲ್ಲಿ ನಗಲು ಮಂಕಾಯ್ತು ಉರಿಯುವ ಹಗಲು! ...
ಕರ್ನಾಟಕಾಂಬೆಯ ಕನ್ನಡ ಮಾತೆಯೆ ಎಬ್ಬಿಸಮ್ಮ ತಾಯೆ ಎಬ್ಬೀಸೆ ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ ಹಿಂದಿನ ಕವಿಗಳ ಹಿಂದಿನ ಸಿರಿಗಳ ಬಾಯ್ತುಂಬ ಹೊಗಳುತ್ತ ಮಲಗಿಹರ ಇಂದಿನ ಪರಿಗಳ ಮುಂದಿನ ಗುರಿಗಳ ಕೈಯಿಂದ ಮಾಡದೆ ಕುಳಿತಿಹರ ಪಂಪ ರನ್ನ ಕು...













