ಮೈಯೆಲ್ಲಾ ಕಣ್ಣಾಗಿ
ಕಾಳು ಬಿಡಿಸುತ್ತಿದ್ದರೂ
ಆಗೊಮ್ಮೆ ಈಗೊಮ್ಮೆ
ಕಾಳಿನ ಬಟ್ಟಲಿಗೆ ಸಿಪ್ಪೆ
ಸಿಪ್ಪೆಯ ಮೊರಕ್ಕೆ ಕಾಳು!
ಮತ್ತೆ ಕಾಳಿನ ಬಟ್ಟಲಿನಲಿ
ಸಿಪ್ಪೆಗಾಗಿ ಹುಡುಕಾಟ
ಸಿಪ್ಪೆಯ ಮೊರದಾಳಕ್ಕೆ
ಹುದುಗಿ ಹೋಗುವ
ಪುಟ್ಟ ಕಾಳಿಗಾಗಿ ತಡಕಾಟ!
ಹೆಕ್ಕುವ ಮೊದಲು
ಸಣ್ಣದೊಂದು ಸಮಜಾಯಿಷಿ
‘ಅಪರಾಧವಲ್ಲ ತಾನೇ ತಪ್ಪು?’
ಒಳಗಿನದೇನೋ ಚುಚ್ಚುತ್ತದೆ
‘ಹಾಲಿಗೆ ಬೇಕೆಷ್ಟು ಹೆಪ್ಪು?’
*****