
ನನ್ನ ಹಿಂದೆಯೇ ಈ ಗೋಪಿಯರು ಸದಾ ತಿರುಗುವುದು ಯಾಕಮ್ಮಾ? ಬೇಡ ಎಂದರೂ ಕೈಹಿಡಿಳೆದು ಗಲ್ಲ ಸವರುವರು ಸರಿಯಾಮ್ಮಾ? ನಾಚಿಕೆ ಇಲ್ಲದೆ ಹೆಣ್ಣುಗಳಮ್ಮಾ ಬಾಚಿ ತಬ್ಬುವರು ಮೈಯನ್ನು, ಕಣ್ಣಿಗೆ ಕಣ್ಣು ಸೇರಿಸಿ ನಗುವರು ಮೆಲ್ಲಗೆ ಕೆನ್ನೆಯ ಹಿಂಡುವರು. ಸಾಕು...
ಶ್ರಮ ಜೀವನಕೆ ಜಯವೆನ್ನಿ ಶ್ರಮಿಕರಿಗೆಲ್ಲಾ ಜಯವೆನ್ನಿ ಶ್ರಮವೇ ಜೀವನಕಾಧಾರ ಶ್ರಮದಿಂದಲೇ ಜೀವನಸಾರ ಶ್ರಮವೇ ಬದುಕಿನ ಬೇರು ಶ್ರಮವಿಲ್ಲದೆ ಬದುಕೇ ನಿಸ್ಸಾರ ಮಣ್ಣಿನ ಕಣಕಣದೆಲ್ಲಿಡೆ ಮಿಡಿಯುತ ಹೂವೂ ಹಣ್ಣು ನಿತ್ಯಾ ನಿಸರ್ಗವೆಲ್ಲಾ ಚೆಲುವಿನ ತವರು ಶ...
ಬೆಳಗಾಗಿದೆ ಮೆಲೇಳು ಕೃಷ್ಣಾ ಬಿಸಿಲಿಣುಕಿದೆ ಮೇಲೇಳು ತೆರೆದಿದೆ ಮನೆಗಳ ಬಾಗಿಲು – ಹಸು ಕರು ಆಂಭಾ ಎನುತಿದೆ ಏಳು ಕೇಳಿಸದೇನೋ ಮೊಸರನು ಕಡೆಯುವ ಗೋಪೀ ಕೈಬಳೆ ಸದ್ದು, ಆಗಲೆ ಬಾಗಿಲ ಬಳಿಯಲಿ ಗೆಳೆಯರು ಆಟಕೆ ಹೋಗಲು ಕದ್ದು! ಮರಗಿಡಬಳ್ಳಿ ಓಲಾಡ...
ಎಂಥದೆ ಇರಲಿ ಯಾವ ಮದ್ದಿಗೂ ಬಗ್ಗದ ರೋಗವಿದು ಯಾರೇ ಇರಲಿ ಎಂಥ ವೈದ್ಯಗೂ ಸಗ್ಗದ ರೋಗವಿದು ಹೊರಗಿನ ಔಷಧ ಹಾಯಲಾರದ ಮನಸಿನ ಜಾಡು ಇದು ಯಾವ ಪಂಡಿತಗು ಆಳೆಯಲು ಬಾರದ ಕನಸಿನ ಕೇಡು ಇದು, ರೋಗಿಗೆ ಮಾತ್ರ ಗೊತ್ತಿರುವಂಥ ಭಾವದ ಬೇನೆ ಇದು ರೋಗಿಗೆ ಮಾತ್ರವೆ...
ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿವಕು ಟಿವಕು ಟಿಂವ್ ಟಿಂವ್ ||ಪ|| ಐತೆ ಐತೆ ಶುಭವಾಗತ್ಯೆತೆ ಬಲವಾಗತ್ಯೆತೆ ತಂಗೀ ಹಕ್ಕಿ ಹಾಡುತದ ಶಕುನ ನುಡಿಯುತದೆ ಶುಭವು ನಿನಗೆ ತಂಗೀ ||೧|| ಮೂಡಲ ದೇಶದ ಬುಡುಬುಡುಕ್ಯಾನಾ ಹಾಡನು ಹಾಡುತ ಬಂ...
ಈಗಷ್ಟೆ ಮುಗಿದಿದೆ ಉರಿಬೇಸಿಗೆ ಸೀದುಹೋಗಿದೆ ನೆಲ ಅದರ ಧಗೆಗೆ ಮೇಲೆ ತೇಲುವ ಮುಗಿಲು ಕೆಳಗೆ ಥಣ್ಣಗೆ ಸುರಿದು ತನ್ನ ಉಳಿಸುವುದೆಂದು ಧರೆ ನಂಬಿದೆ ಹಾಗೇ ನಾನೂ ನಿನಗೆ ಕಾಯುತಿರುವೆ. ತಾಗಿತೋ ಹೇಗೆ ಈ ನೆಲದ ವಿರಹ? ಬಾನಲ್ಲಿ ಮೂಡುತಿದೆ ಮಳೆಯ ಬರೆಹ! ಕ...
ಏಕೆ ಸಖೀ ಛೇಡಿಸಿ ಕೊಂಕು ನುಡಿಯುವೆ ಗುಟ್ಟೆನ ವ್ಯವಹಾರ ಎಂದು ಅಣಕವಾಡುವೆ? ಹರಿಯ ನೀನು ಮರೆಯಲ್ಲಿ ಕೊಂಡೆ ಎನ್ನುತ ಏಕೆ ಸಖೀ ಮಾತಿನಲ್ಲಿ ನನ್ನ ಇರಿಯುವೆ? ನಿನ್ನ ಮಾತು ಶುದ್ಧ ಸುಳ್ಳು ಕೇಳು ನಿಜವನು ತಮಟೆ ಹೊಡೆದು ಸಾರುವೆ ದಿಟದ ಮಾತನು, ಲೋಕ ತಿಳ...













