
ತಗೊ ಹಿಂದಕೆ ತಗೊ ಹಿಂದಕೆ ನೀ ನೀಡಿದ ವರವ ಓ ಆನಂಗದೇವ ಮುಕ್ತಿ ನೀಡು ಅಳಿಸಿ ನಿನ್ನ ಈ ಮಿಥ್ಯಾ ಜಾಲ ಓ ಅನಂಗ ದೇವ ಸುರಿವೆ ನಿನ್ನ ಪಾದದಲ್ಲಿ ಹುಸಿಯಾದೀ ಚೆಲುವ ಮರೆಸಿ ಪಡೆದ ಫಲವ ನೀಡುತಿರುವೆ ಹಿಂದಕೆ ಅರ್ಥವಿರದ ಸೊಬಗ ಓ ಅನಂಗ ದೇವ ನಿನ್ನ ದಯದಿ ಅ...
ಹರಿಯುವ ನೀರಿನ ತರ ಈ ಬಾಳು ಸರಿದು ಹೋಯಿತೇ! ನಾರಿಯಾಗಿ ನಾ ಪಡೆದದ್ದೆಲ್ಲಾ ವ್ಯರ್ಥವಾಯಿತೇ! ಒಂದೆ ಗಳಿಗೆ ಕಣ್ಣೀರ ತೇವಕೆ ಹಮ್ಮು ಆರಿತೇ, ನೋವಿನ ದನಿ ವಸಂತನ ಮುಖದ ಗೆಲುವ ಅಳಿಸಿತೇ! ಕಂಬನಿ ಸೂಸುವ ಇಂಥ ಚೈತ್ರನ ಕಾಣಲಿಲ್ಲ ಎಂದೂ ಅಗಲಿದ ವ್ಯಥೆಗೆ...
ಹಣ್ಣೊಂದು ಇತ್ತು ಮರದಿಂದ ಬಿತ್ತು ಮಣ್ಣಿನಲಿ ಬಿದ್ದು ಹೋಯ್ತು ಸಣ್ಣಾಗಿ ಸೋತು ಸುದ್ದಾಗಿ ಮತ್ತೆ ಕಣ್ಣಿನಲಿ ನೀರು ಬಂತು ಬೆಳೆದಂತೆ ಕಾಯಿ ತಾ ಭಾರವಾಯ್ತು ಬೆಳೆದದ್ದೆ ಮುಳುವದಾಯ್ತು ತಳೆದೀತೆ ಭಾರ ತೆಳ್ಳನೆಯ ತುಂಬು ಕಳವಳದಿ ತಡೆಯದಾಯ್ತು ತೊಯ್...
ಯಾವ ದೇವಿಯೋ ಯಾವ ವಿನೋದಕೊ ನಮ್ಮನೆಸೆದಳೀ ಮಾಯೆಯಲಿ, ಬಾ ಒಲವೇ ಮೈಮರೆಯುವ ನಾವು ಪ್ರೇಮದ ಮಧು ವೈಹಾಳಿಯಲಿ ಸ್ನೇಹದ ಹೊನಲಲಿ ವಿನೋದದಲೆಯಲಿ ಬಯಕೆಯಾಳದಲಿ ಮೀಯೋಣ ಬಗೆಬಗೆ ರಂಗಿನ ಗಂಧವನಗಳಲಿ ಪರಿವೆಯೆ ಇಲ್ಲದೆ ಅಲೆಯೋಣ ಪುಲಕಿತ ವಕ್ಷಸ್ಥಳದಲಿ ತೂಗು...
ಎದೆಯೊಳು ಮೊರೆದಿದೆ ಒಂದೇ ಸಮನೆ ಅತಲ ಜಲದ ಗಾನ ಮನವಿದು ಯಾಕೋ ನಿಲ್ಲದು ಮನೆಯಲಿ ತುಯ್ಯುತಲಿದೆ ಪ್ರಾಣ ತೂರಿಬಿಡಲೆ ಈ ಬಾಳನ್ನೇ ದುಡುಕುವ ನೆರೆಯಲ್ಲಿ ಬಾಳಿನ ಹಾಹಾಕಾರವನು ನುಂಗುವ ಮೋದದಲಿ? ನದಿಯೊಳು ಅಲೆ ಸಾಲೇಳಂತಿದೆ, ನನ್ನೀ ಎದೆಯೊಳಗೂ; ಏನೋ ವ...
ಏಕೆ ಕಣ್ಣು ಹೀಗೆ ತೇವಗೊಂಡಿತು, ಏಕೆ ಮನವು ಕಳವಳದಲಿ ಮುಳುಗಿತು? ಇದ್ದಕಿದ್ದ ಹಾಗೆ ಏನೋ ಮಿಂಚಿತು ತಿಳಿಯದಿದ್ದರೇನು ಮನಕೆ ಹೊಳೆಯಿತು. ಯಾರ ದನಿಯೊ ಎದೆಯ ಹಾದುಹೋಯಿತು ಬಾನಿನಲ್ಲಿ ತಾರೆ ಸಂತೆ ಸೇರಿತು ಶ್ರುತಿಗೊಂಡಿತು ವೀಣೆ, ತಾನೆ ದನಿಯಿತು ಝೇಂ...













