Home / ಕವನ / ಕವಿತೆ

ಕವಿತೆ

೧ ಗಾಲಿ ಉರುಳಿದಂತೆ-ಕಾಡಿನ ಗಾಳಿ ಹೊರಳಿದಂತೆ- ಬಾನ ದೇಗುಲದ ಬೆಳ್ಳಿ ಗೋಪುರದ ಘಂಟೆ ಮೊಳಗಿದಂತೆ, ಹಾಲು ಕಂಚಿನ ಹೊನ್ನ ಮಿಂಚಿನ ಘಂಟೆ ಮೊಳಗಿದಂತೆ, ಊರ ದಾರಿಯಲಿ ಹೂವ ತೇರಿನಲಿ ಕೃಷ್ಣ ಬರುವನಂತೆ! ೨ ಎತ್ತಿ ನೋಡು ಕಣ್ಣ, ಬಾನಿಗೆ ಹತ್ತಿ ಹೊಳೆವ ಬಣ್...

ನರ್ತಕಿ ಬಂದಳು ಛಲ್‌ಝಲ್ ನಾದದಿ ಠಮ ಢಮ ತಾಳಕೆ ಕುಣಿಯುತ್ತ ಪಾತರಗಿತ್ತಿಯ ಆ ಕುಣಿತ. ಪಾರ್ಥ ಸುಭದ್ರೆಯ ರಾಧಾಕೃಷ್ಣರ- ನೊಬ್ಬಳೆ ತಾನೆಂದೆಣಿಸುತ್ತ ರಂಗಸ್ಥಳದಲಿ ತಿರುಗುತ್ತ. ತುಟಿಯಿಂದುರುಳುವ ಹಾಡಿನ ತನಿರಸ ಮೌಕ್ತಿಕ ಮಣಿಯಂತುರುಳುವುದು; ತಾಳದ ಓ...

ಫ್ರೆಂಚ್ ಕ್ರಾಂತಿಯ ಅರುಸೊತ್ತಿಗೆಗಳ ವೈಭವದ ದಾಖಲೆಗಳ ಸ್ತಂಭಗಳಡಿಯಲಿ ಭೀಭತ್ಸ ರಕ್ತದ ವಾಸನೆಯ ಗೊರಲಿಗಳು ಶತ ಶತಮಾನಕ್ಕೂ ಕಥೆಗಳನ್ನು ಹೇಳುತ್ತಲೇ ಇವೆ. ಚಕ್ರವರ್ತಿಗಳ ದರ್ಪ, ಅರಮನೆ ಓಪೆರಾ, ಕಾನಕಾರ್ಡ್ ಚೌಕ ನೋಡುತ್ತಿದ್ದಂತೆಯೇ ಐಫಲ್ ಟವರ್‌ದ ತ...

ಹೊಸ ಹರಯದಲಿ ಹೂವು ಅರಳುತ್ತ ಮೊಗೆಮೊಗೆದು ಮಾಧುರ್ಯವನು ಬೀರಿ ಹಿಗ್ಗಿನಲಿ ಕುಣಿಯುತಿರೆ ದೂರದಿಂ ಹಾರುತ್ತ ದುಂಬಿ ಅದರೆಡೆ ನಡೆದು ತನ್ನಿಚ್ಛೆ ಝೇಂಕರಿಸಿ ಹೂಂಕರಿಸಿ ಹೂವಿನೆಡೆ ದಿಟ್ಟಿಸುತ ಸುತ್ತೆಲ್ಲ ಸುತ್ತಿ ಸುಳಿದಾಡುವೊಲು, ಸಾವ ಛಾಯೆಯು ಬಂದು ...

ಗದ್ದೆಯಿಂದ ರಸವ ತುಂಬಿ ಕಟ್ಟುಬಂತು ಗಾಣಕೆ ಗಾಣ ಅದರ ರಸವ ಹಿಂಡಿ ಒಗೆಯಿತತ್ತ ದೂರಕೆ ಮರದ ಮಡಿಲಿನಿಂದ ಹಣ್ಣ ನರನು ತಾನು ಪಡೆವನು ಬಹಳ ರುಚಿ ಎಂದು ಹೀರಿ ಹಿಪ್ಪೆ ಮಾಡಿ ಒಗೆವನು ಕೆಲವು ಹೊತ್ತು ತಲೆಯ ಮೇಲೆ ಸಿಂಗರಿಸುತ ಇದ್ದಿತು ಬಾಡಿ ಹೋದ ಮೇಲ...

ಹೊತ್ತು ಮೂಡುವ ಮುನ್ನ ಕೂಡಿ ಹಾಕಿಕೊಂಡ ಕನಸುಗಳನ್ನು ಎಳೆ ಬಿಸಿಲಿನಲ್ಲಿ ವಿಮಾನವೇರಿದ ಕೇರಳಿ, ಬಂಗ್ಲಾ, ಪಾಕಿಸ್ತಾನಿ, ಫಿಲಿಫೈನ್‌ (ಏಕಾಂಗಿ) ಕೆಲಸಿಗರು ಉರಿಬಿಸಿಲಿನಲಿ ಬಂದಿಳಿಯುವರು ಬಿಸಿಲಿಗೆ ಹಸಿರು ಕನಸು ಬಿಚ್ಚುತ್ತ ಬಣ್ಣಬಣ್ಣದ ಹೂವುಗಳೂಡೆ...

ನಾನು ನೀನೂ ಒಂದೇ ಅಂದ್ರೂ | ಐತೆ ಸ್ಥಲ್ಪ ತೊಂದ್ರೆ || ನಾನು ಉತ್ರಾ ನೀನು ದಕ್ಷ್ಣಾ| ನಾನು ಪೂರ್ವ ನೀನು ಪಶ್ಚಿಮಾ ನಾನು ಅತ್ತ ನೀನು ಇತ್ತ| ನಾನು ಆಚೆ ನೀನು ಈಚೆ ನಾನು ಮೇಲೆ ನೀನು ಕೆಳಗೆ | ನೀನು ಮೊದಲು ನಾನು ಕೊನೆಗೆ ಆದ್ರು ಕೂಡ ನಾನು ...

ಮಳೆ ಬರಲಿ ಪ್ರೀತಿಯ ಬನಕೆ ಅರಳಲಿ ಹೂ ಗಿಡ ಲತೆ ಮರಕೆ ಅತ್ತು ಕರೆದು ಆಡುವ ಮಾತು ಬತ್ತಿದ ತೊರೆಯಾಯಿತು ಸೋತು ಎಷ್ಟು ಉತ್ತಿ ಬಿತ್ತಿದರೇನು ಸತ್ತ ಬೀಜ ಮೊಳೆವುದೆ ತಾನು? ಭಾವತೇವವಿಲ್ಲದ ಎದೆಯು ಹೂವಿಲ್ಲದ ಮುಳ್ಳಿನ ಪೊದೆಯು ಕಾರಿರುಳಲಿ ನರಳುವ ಬಾನು...

ಮಲೆನಾಡ ಸಮೃದ್ಧ ಗಿರಿರಾಜಿಯ ಪ್ರಶಾಂತ ಮೊಗದಲ್ಲಿ ಹಿಮಾಲಯದ ಮೇಗಣ ಶುಭ್ರಾಭ್ರ ಮಂಜಿನ ತೆರೆತೆರೆ ತಲೆಮೇಲೆ ಅಲ್ಲಿ ಕುಳಿತು ಬಂಗಾಳಕೊಲ್ಲಿ ಅರಬ್ಬಿ ಕೊಲ್ಲಿಗಳ ಕಣ್ಣ ಕೋಲ್ಮಿಂಚು ತೂರುತ್ತವೆ ಗಂಗೆಯಮುನೆಯರ ತೀರದನುಭವದಲೆಯಲೆ ಹಣೆಯಂದ, ಎರಡು ಕೆನ್ನ...

ಹೋಗುವಿಯೋ ನೀ ಹೋಗು – ಮತ್ತೆ ನುಡಿಯದೆ ಇರುವುದೆ ಮುರಳಿ? ಬಂದೇ ಬರುವೆ ಹೊರಳಿ-ನೀ ಬಂದೇ ಬರುವೆ ಮರಳಿ. ಅದ್ದುವಳಲ್ಲ ನನ್ನೀ ಬಾಳನು ಸಲ್ಲದ ಕಣ್ಣೀರಲ್ಲಿ ತೆರಳುವಳಲ್ಲ ದೀಪವ ನಂದಿಸಿ ಜೀವನದುತ್ಸವದಲ್ಲಿ ಏನೇ ಕಂಟಕ ಬಂದರು ಏನು ಬೆಚ್ಚುವ ಜ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...