ಪೋಸ್ಟಾಪೀಸಿಗೆ ದಿನಾ ಮಧ್ಯಹ್ನ ಬಸ್ಸಿನಲ್ಲಿ
ಟಪ್ಪಾಲಿನ ಗೋಣಿಚೀಲ ಬರುತ್ತದೆ. ಪೇದೆ
ಅದನ್ನು ಒಡೆದು ಕೊಡವಿ ಹಾಕುತ್ತಾನೆ. ಕಾಗದಗಳ
ಕಟ್ಟು ಕೆಳಕ್ಕೆ ಬೀಳುತ್ತದೆ. ಪೋಸ್ಟ್
ಮಾಸ್ತರರು ಒಂದೊಂದಕ್ಕೇ ಸೀಲು ಹಾಕುತ್ತಾರೆ.
ನಂತರ ಒಂದೊಂದನ್ನೇ ವಿಂಗಡಿಸುತ್ತಾರೆ.
ಕಾರ್ಡುಗಳಿವೆ, ಇನ್ಲೇಂಡುಗಳಿವೆ, ಕವರುಗಳಿವೆ.
ಕೆಲವು ಹೊಸ ರೀತಿಯ ಸ್ಟಾಂಪುಗಳು. ನಾವು
ಕುತೂಹಲದಿಂದ ಕಾಯುತ್ತೇವೆ:
ನಮಗೆ ಕಾಗದವಿದೆಯೇ, ಏನಾದರೂ
ಇದೆಯೇ ಎಂದು. ಕಾರಣ ನಮ್ಮ ಪೋಸ್ಟಾಪೀಸಿಗೆ
ಕೆಲವೊಮ್ಮೆ ಡೆಲ್ಲಿ ಮೊದಲಾದ
ದೂರದ ಊರುಗಳಿಂದ ಕಾಗದಗಳು
ಬರುತ್ತವೆ, ಪಾರ್ಸೆಲುಗಳು ಬರುತ್ತವೆ.
ನಮಗೆ ಮಾತ್ರ ಡೆಲ್ಲಿ ಎಷ್ಟು ದೂರ ಎಂದು
ಗೊತ್ತಿಲ್ಲ. ಪೋಸ್ಟಾಪೀಸಿನೊಳಗಿರುವ
ಆ ದೊಡ್ಡ ದೇವದಾರು ಪೆಟ್ಟಿಗೆಯೊಳಗೆ
ಏನಿದೆ ಎಂದು ಗೊತ್ತಿಲ್ಲ.
*****
Related Post
ಸಣ್ಣ ಕತೆ
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಕರಿ ನಾಗರಗಳು
ಚಿತ್ರ: ಆಂಬರ್ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್ ನೀರು ಹರಿಯುತ್ತಿದ್ದ… Read more…
-
ಅಜ್ಜಿ-ಮೊಮ್ಮಗ
ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…
-
ನಿಂಗನ ನಂಬಿಗೆ
ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…