Home / ಕವನ / ಕವಿತೆ

ಕವಿತೆ

ಹುಟ್ಟಿದ್ ಮಳೇ ಹಾಳಾಗ್‌ಹೋಯ್ತು, ಸುಮ್ನೇ ಗುಡುಗಿನ್ ಕೋಡಿ.- ಅಕ್ಕಿ ಬೆಲೇ ಏರ್ತಾ ಹೋಯ್ತು ದುಡ್ಡಿನ್ ಮೊಕಾ ನೋಡಿ. ಅಕ್ಕೀಗಿಂತ ಅಲ್ಲಿದ್ ಕಲ್ಲೆ ಮುತ್ನಂಗಿತ್ತು, ತಣ್ಗೆ! ಕಟ್ಕೊಂಡೋಳ್ಗಿತಿಟ್ಕೊಂಡೋಳೇ ಸುಂದ್ರೀ ಅಲ್ವೆ, ಕಣ್ಗೆ! ಒಲೇ ಕುರ್ಚೀಲನ್ನ...

ಮನದ ಕಾಂಕ್ಷೆ ಒಲವಿನೆಣಿಕೆ ಆಳ ಅಳೆದು ನೋಡಲಾರೆ, ವಿಶ್ವವ್ಯಾಪಿ ಎಮ್ಮ ಮುದವು ನಿಲ್ವುದೆಲ್ಲಿ ಎಣಿಸಲಾರೆ! ಕತ್ತಲಂತೆ ಸುತ್ತಲೆಲ್ಲ ಮನಕೆ ಭಾರ ದೇಹಸರ್ವ ತಿಂಬೆದೆಲ್ಲ ಅರುಚಿ ಕೇಳು, ಯಾರ ಇದುರು ಪೇಳ್ವುದಲ್ಲ!! ಮಂಜುಗಟ್ಟಿ ನೇತೃದ್ವಯವು ಬೆಂದಮನವ ಸ...

ಈ ಮೊದಲು ತಿಳಿದುಕೊಂಡಿದ್ದೆ ಇಲ್ಲಿಯ “ಈ ಗಾಳಿ ಈ ಬೆಳಕು ಈ ಎಲ್ಲಜೀವಿಗಳೂ” ಎಲ್ಲಾ ಕಡೆಗೂ ಎಲ್ಲಾ ದೇಶದೊಳಗೂ ಒಂದ ಅಂತ. ಹಾಗಂತನ ಏನೋ ಕೆಲವೊಂದು ಅಥವಾ ಕೆಲವೊಂದೇ ಪರಿಧಿಯೊಳಗ ಸುತ್ತಿಕೊಂಡು ಬಹಳ ಆರಾಮವಾಗಿ ಇದೇ ಒಳ್ಳೆಯದು ಅಂತ ಇದ್ದ...

ಕನಸು ನನಸುಗಳೆಲ್ಲ ಯಾರಿಗೋ ಮುಡಿಪಾಗಿ ಹಾಡುಗಳಲೆಲ್ಲೆಲ್ಲು ಯಾರದೋ ಛಾಯೆಯೇ ಮೂಡಿರಲು “ಇದು ಯಾರೋ?” ಎನುತ ಕಾತರರಾಗಿ ಗೆಳೆಯರೆಲ್ಲರು ನನ್ನ ಕಾಡುತಿರೆ, ನಿನ್ನನ್ನೇ ಬಣ್ಣಿಸಲು ಹೊರಟಿಹೆನು – ನಿನ್ನ ನೆನವಿನಲೆನ್ನ ಮನದ ಮಾತುಗ...

ಸೀತೆಯೇ ಲೋಕಕ್ಕೆ ತಾಯಿ. ಸಾವಿರ ರಾಮ ತೂಗುವರೆ ಇವಳ ತೂಕಕ್ಕೆ? ರಾಮಾಯಣದ ಅಂಕಿತವೆ ಒಂದು ಅನ್ಯಾಯ ಸೀತೆಯ ಕಥೆಗೆ. ಯಾರಿಗಾ ಸೇತುಬಂಧನ? ಸೀತೆಯ ವ್ಯಥೆಗೆ? ಯಾರಿಗಾ ರಾಕ್ಷಸ ವಿನಾಶ ? ಯುದ್ಧ ಮುಗಿಯಲು, ಸೆರೆತೆರೆದು ಬಂದ ಮಡದಿಯನು ಕೈಹಿಡಿದವನು ಸಂಶಯ...

ಆರ್‍ಯಭೂಮಿಯ ಕಾಂತಿ ಮಾಸುತಿರೆ ದಿನ ದಿನಕೆ, ಶತಮಾನ ಹಲವಾರು ಕಂಗೆಟ್ಟು ದಾಸ್ಯದಲಿ ಕೊಳೆಯುತಿರೆ ಜನವೆಲ್ಲ ತಮ್ಮೊಂದು ಆತ್ಮಾಭಿ- ಮಾನವನು ಘನತೆಯನು ವೀರ್ಯವನು ಶಕ್ತಿಯನು ಕಳೆದುಳಿದು ಮೋಸದಾ ದ್ರೋಹದಾ ಉದರದಾ ಹೇಡಿತನದಾ ಒಂದು ಕ್ಷುದ್ರಬಾಳನು ಕಳೆಯೆ...

ನನ್ನ ನಂಬು ಮೋನಾಲಿಸಾ ನಾನು ಹಗಲು ಗಳ್ಳನೂ ಆಲ್ಲ ತಲೆಹಿಡುಕನೂ ಅಲ್ಲ ಪೊಳ್ಳು ಭ್ರಮೆ ಎಂದರೂ ಅನ್ನಲಿ ಈ ಜನ ಈ ನ್ಯಾಯಾಲಯ ನೀನು ನನ್ನವಳೇ. ಮರೆಯಲಾದೀತೆ ನಾನೂರು ವರ್ಷಗಳ ಹಿಂದಿನ ನಮ್ಮ ಸಂಸಾರ? ಹೇಗೆ ಹೇಳಲಿ ಇವರಿಗೆ ಸಧೃಢ ದೇಹ ಮುಗುಳ್ನಗೆ ಹೊಳಪು ...

-೧- ಗಾಳಿ ಬೀಸುತ್ತಲೇ, ಬೀಸುತ್ತಲೇ ಇತ್ತು; ಬಿಸಿಲು ಉರಿಯುತ್ತಲೇ, ಉರಿಯುತ್ತಲೇ ಇತ್ತು ; ಗುಡುಗಿ ಬಾನ್ ಮಿಂಚುರಿದು ಮಳೆ ಬೀಳುವಂತಿತ್ತು ; ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು. ಇನ್ನೊಂದು ನಿಮಿಷದಲಿ ಮಳೆ ಗಾಳಿಯಾಗಿತ್ತು ; ಗಾಳಿ ಬೀಸುತ್...

ಸ್ವಪ್ನರಾಜ್ಯದ ಭಾವದೋಜೆಯ ನಡುವೆ ನಡೆದೆನು ತೆಪ್ಪಗೆ, ಮನೋಭೂಮಿಯನುತ್ತು ಅಗಿಯಿತು ತೇಜಪೂರಿತ ಘಟನೆಯು! ಮೆತ್ತಗಾಸಿದ ತಲ್ಪತಳವೇ ನನ್ನ ಯಾತ್ರೆಯ ಭೂಮಿಯು!! ಮೇಲೆ ಭಾನುವು ಬಿಳಿಯ ಮುಗಿಲು ಕೆಳಗೆ ಕೊರಕಲು ದಾರಿಯು; ಹಾದು ನಡೆದೆನು ಏಳುಬೀಳುತ ಏರಿದೆ...

ಕನಸು ಕಾಣದ, ನಾಚಿ ತುಟಿ ಕಚ್ಚಿಕೊಳ್ಳವ ಹಸಿರಕ್ತದ ಬಿಸಿಮಾಂಸದ ಬೆಡಗಿಯೆರು ನಿಲ್ಲುತ್ತಾರೆ ಆರೆಬೆತ್ತಲಾಗಿ ನಗುತ್ತಾರೆ ಮುದಿಗಳೂ ಹೊರಳಿ ನೋಡುವಂತೆ ಹದ್ದುಗಳು ಎರಗುತ್ತವೆ ಮುಗಿಬೀಳುತ್ತವೆ ಕಾಮದ ಹಸಿವಿಗಾಗಿ ದೂರದ ಆಫ್ರಿಕ ಏಷಿಯಾದ ಮುಸುರೆ ತೊಟ್ಟ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...