Home / ಲೇಖನ / ಇತರೆ

ಇತರೆ

ನಿತ್ಯಜೀವನದ ಸಾಮಾನ್ಯಸಾಗಾಟದ ಬೇಸರಿಕೆಯನ್ನು ಕಳೆಯುವದಕ್ಕೆ ಆಗಾಗ ಹಬ್ಬ-ಹುಣ್ಣಿವೆಗಳೂ, ಉತ್ಸವಾಮೋದಗಳೂ ಬರುತ್ತಿರುತ್ತವೆ. ಆದರೆ ನಿಜವಾಗಿಯೂ ಅವುಗಳಿಂದ ಬೇಸರ ಕಳೆಯವದೆಂದು ನಮಗೆ ತೋರುವದಿಲ್ಲ. ಹಬ್ಬದ ಉಬ್ಬು ಎಲ್ಲರಿಗೂ ಬರಲಾರದು. ಸಾಮಾನ್ಯರಿಗೆ...

ಪ್ರಜಾ ಪ್ರತಿನಿಧಿಗಳಿಗೆ, ಉನ್ನತ ಹುದ್ದೆಯನ್ನಲಂಕರಿಸುವವರಿಗೆ ಪ್ರಮಾಣವಚನ ಬೋಧಿಸುವ ನಿಧಿ ವಿಧಾನಗಳನ್ನು ನಮ್ಮ ಸಂವಿಧಾನದಲ್ಲಿ ನಮೂದಿಸಲಾಗಿದೆ ಇತ್ತೀಚೆಗೆ ನಡೆದ ಚುನಾವಣೆಗಳ ನಂತರ ಲೋಕಸಭೆಯಲ್ಲಿ, ನಿಧಾನ ಸಭೆಗಳಲ್ಲಿ ಆಯ್ಕೆಯಾದ ಪ್ರಜಾಪ್ರತಿನಿಧಿ...

” ಮಾನವೇಚ್ಛೆಯನ್ನು ಹೋಗಲಾಡಿಸಿ ಪರಮೇಚ್ಛೆಯನ್ನು ಅನುಸರಿಸುವದೆಂದರೇನು ? ಅದನ್ನು ಸಾಧಿಸುವ ಬಗೆ ಯಾವುದು? ಪರಮೇಚ್ಛೆಯನ್ನು ಅನುಸರಿಸುವಾಗ ಉಂಟಾಗುವ ಎಡರುಗಳು ಯಾವವು? ಆ ಎಡರುಗಳನ್ನು ತೊಡೆದುಹಾಕಿದರೆ ಆಗುವ ಸುಗಮದಾರಿಯ ಲಕ್ಷಣಗಳೇನು ?- ಈ...

” ಜಗತ್ತಿನ ಜೀವನದಲ್ಲಿ  ನುಗ್ಗಾಟ-ಜಗ್ಗಾಟಗಳು ಅನಿವಾರ್ಯವಾಗಿವೆಯೆಂದೂ, ತೂರಾಟ-ಹೋರಾಟಗಳು ತಪ್ಪಲಾರವೆಂದೂ  ತಿಳಿಯಿತು. ಮೇಲಾಟವಿಲ್ಲದೆ  ಜೀವ ಉಳಿಸಿಕೊಳ್ಳುವದೇ ಕಠಿಣವೆಂದೂ  ಮನವರಿಕೆಯಾಯಿತು. ಮಥನವಿಲ್ಲದೆ ಯಾವ  ನಿಷ್ಟತ್ತಿಯೂ  ಸಾಧ್ಯವಿ...

ಮನುಷ್ಯನನ್ನು ನಿಜದ ನೆಲೆಯಲ್ಲಿ ನಿಲ್ಲಿಸಿ ಅವನಿಂದ ಸತ್ಯ ನುಡಿಸಲು ಮಾಡಿಕೊಂಡು ಬಂದಿರುವ ಪ್ರಯತ್ನಗಳು ನೂರಾರಿವೆ. ಅದಕ್ಕಾಗಿ ಸ್ವರ್ಗ ನರಕಗಳ ಸೃಷ್ಟಿಯೂ ಆಗಿದೆ. ಸತ್ಯವನ್ನು ನುಡಿದರೆ ಸ್ವರ್ಗ, ಸುಳ್ಳಾಡಿದರೆ ನರಕ ಎಂದು ಸ್ವರ್ಗದಲ್ಲಿ ಸುಖದ ಕಲ್...

” ಮನುಷ್ಯನು ಹುಟ್ಟಬಂದ ಬಳಿಕ ತನ್ನ ಪ್ರವೃತ್ತಿಗನುಸಾರನಾಗಿ ವಿದ್ಯಾಭ್ಯಾಸ ಮಾಡುವನು. ಒಲವಿನ ಉದ್ಯೋಗ ಕೈಕೊಳ್ಳುವನು. ಆತನು ಶಿಲ್ಪಿಯಾಗಬಲ್ಲನು; ಕವಿಯಾಗಬಲ್ಲನು; ವ್ಯಾಪಾರಿಯಾಗಬಲ್ಲನು; ಸಾರ್ವಜನಿಕ ಜೀವನವನ್ನು ನಡೆಯಿಸಬಲ್ಲನು. ಆದರ ಅದರಲ...

“ಹೆಣ್ಣು ಹೊನ್ನು ಮಣ್ಣುಗಳ ಬಗ್ಗೆ ಬಹಳ ಎಚ್ಚರಿಕೆಯೆಂದು ಹಿರಿಯರು ಹೇಳಿದ್ದು ಕಂಡುಬರುತ್ತದೆ. ಆದರೆ ಆ ಮೂರರಲ್ಲಿ ಹೆಣ್ಣು ಮಾಯೆಯೆಂದು ಬಹುಶಃ ಗಂಡಿಗೆ ಹೇಳಿದಂತಿದೆ. ಆದರೆ  ಗಂಡಿನ ಬಗ್ಗೆ ಅಂಥ, ಎಚ್ಚರಿಕೆಯೇನೂ ಬೇಡವೆ? ಆದಕಾರಣ ಗಂಡು-ಹೆಣ...

“ಮಾನವ ದೌರ್ಬಲ್ಯಕ್ಕೆ ಅವಶ್ಯಕತೆ ಎನ್ನುವುದು ಒಂದು ದೊಡ್ಡ ಕ್ಷಮೆ ಅಥವಾ ಆಶ್ರಯ. ಇದು ಕಾನೂನನ್ನು ಕಡಿದು ನುಗ್ಗುತ್ತದೆ; ಇಲ್ಲಿ ಶಿಕ್ಷೆಗೆ ಆಸ್ಪದವಿರಬಾರದು, ಕಾರಣ, ರೈತರ ಅಥವಾ ಅಪರಾಧ ಆಯ್ಕೆಯಾಗಿರದೆ ಅನಿವಾರ್ಯ- ವಾಗಿರುತ್ತಾದ್ದರಿಂದ. ...

‘ಕಾನೂನು ತಳವಿಲ್ಲದೆ ಮಹಾಪಾತಾಳ’ -John Arbuthnot ವಿಶಾಲ ವಿಶ್ವದಲ್ಲಿ ಎಣಿಕೆಗಟುಕದ ತಾರಾ ಕೋಟಿಗಳೊಳಗೆ ಮನುಷ್ಯನ ಸೀಮಿತ ಬುದ್ಧಿಶಕ್ತಿಗೆ ಗೋಚರಿಸುವ ಸೌರ- ವ್ಯೂಹದ ಗ್ರಹಗಳಲ್ಲಿ ಒಂದು ನಾವು ವಾಸಿಸುತ್ತಿರುವ ಈ ಭೂಮಿ. ಸೃಷ್ಟಿಯ ...

“ಬಾಳಿನುದ್ದಕ್ಕೂ ಅನಿಷ್ಟ, ಕುತ್ತು, ಸಂಕಟ, ಎಡರು, ಅಡೆ-ತಡೆ ಇವುಗಳೊಡನೆ ಒಂದೇಸಮನೇ ಹೋರಾಟ ನಡೆದಿರುತ್ತದೆ. ಅನಿಷ್ಟವಿಲ್ಲದ ಒಂದೇ ಒಂದು ಗಳಿಗೆ ಬೇಡ, ಕ್ಷಣ ಇಲ್ಲವೆ ಒಂದು ನಿಮಿಷವಾದರೂ ದೊರೆತೀತೇ ಎನ್ನುವುದು ಸಹ ಸಂಶಯಾಸ್ಪದವೇ ಆಗಿದೆ. ಆ...

1...6162636465...72

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...