ಬಿಸಿಲೋ ಬೆಳೆಯಿತು; ಬಾನೋ ತಿಳಿಯಿತು; ಸೆಳೆಸೆಳೆದೆಲೆಗಳು ಕುಣಿಯುವುವು; ಮುಸುಕಿದ ಮಂಜನು ಕಳೆಯುತ ಗಿರಿಗಳು ಬೆಳಗುವ ಹಗಲನು ಹೊದೆಯುವುವು; ಬಿರಿಯದ ಮೊಗ್ಗುಗಳೆಸಳನು ತೆರೆಯುತ; ಸುಳಿವುದು ತಂಪಿನ ನೆಲದುಸಿರು; ಬೆರೆದೊಂದೇ ಆನಂದದ ದನಿವೊಲು, ಹೊಳಲಲ...

ಎಲ್ಲಿಹನೋ ನಿನ್ನ ದೇವ? ಅದೆಲ್ಲಿಹನೋ ನಿನ್ನ ಕಾವ? ತಂದೆದುರಿಗೆ ನಿಲ್ಲಿಸೊ! ಅದುವರೆವಿಗು ಏನೇನನೊ ಗಳಹುವುದನು ನಿಲ್ಲಿಸೊ! ಅನಂತನೆಂಬೆ! ಅಂತವುಳ್ಳ ನೀನವನನು ಕಾಣೆ ಸತತ ಯತ್ನಿಪೆ! ಅಚಿಂತ್ಯನೆಂಬೆ! ಅನವರತವು ನಿನ್ನ ಮನದೊಳವನ ಬಿಡದೆ ಚಿಂತಿಪೆ! ಅಮ...

ನಾನು ಕೊಡುವವನೆಂದು ಹೆಮ್ಮೆಪಡುವುದು ಬೇಡ ನಾನು ಕೊಡುವವನಲ್ಲ ನೋಡುವವನು ಕೊಡಿಸುವನು ನನ್ನಿಂದ ಕೊಡಗೈಯ ದೊರೆ ತಾನು ಒಬ್ಬನೇ ಜಗದೊಳಗೆ ದಾನಿಯವನು ಇಂದಿರುವುದೆಲ್ಲವೂ ಬಂದಿರುವುದೇತಕ್ಕೆ? ಎಂದಾದರೊಂದು ದಿನ ಕೊಡುವುದಕ್ಕೆ ಇಂದು ಕೊಡು ಇದ್ದುದನು ಮು...

ಗಿಡಬೆಳೆದು ಹುಡಿಗೂಡುತಿದೆ ಗುಡಿಯ ಗೋಪುರ ಮುಟ್ಟೆ ಮೈಲಿಗೆಯೆನ್ನೆ ಪಾಚೆಗಟ್ಟಿದೆ ತೀರ್ಥ ಅಟ್ಟ ಮಿಷ್ಟಾನ್ನವನು ತೊರೆದು ಹೆರಮನೆತಿರಿವ ಜಡಮತಿಯ ವರ್ತನೆಯ ತೋರುತಿದೆ ಯುವಚಿತ್ತ. ವಿಶ್ವಾತ್ಮನೊಳಕೊಂಡ ನುಡಿಗಳಕ್ಷಯಪಾತ್ರೆ ಗಳಿತಸತ್ವರ ಕರದಿ ವೃತ್ತಿಭ...

ಹೇಳು ಬೇಗ – ಕೇಳು ಈಗ ರಾಮನೇನು? – ಕಾಮಧೇನು! ** ಈತನಾರು? – ಪ್ರೀತಿಪೈರು! ಎಂತು ಕೀರ್ತಿ?- ಪ್ರೀತಿ-ಮೂರ್ತಿ; ರಾಸರಾಜ್ಯಚಕ್ರವರ್ತಿ!- ಏಕೆ ಈತ?-ಪ್ರೀತಿಯೇಕೆ? ** ಈತನೆಂಥ ಪ್ರೀತಿಕಾಂತ?- ಎನ್ನ ಚೆನ್ನ ಚಂದ್ರಕಾಂತ! ಓತುಸ...

ದಿನ ದಿನ ತುಂಟನು ಅಕ್ಕನ ಜೋಡಿ ಕಾರಣವಿಲ್ಲದೆ ಜಗಳಾಡಿ ಪೆಟ್ಟನು ತಿಂದು ಮೈ ಕೈ ನೊಂದು ಹರಿಸುವ ಕಣ್ಣೀರಿನ ಕೋಡಿ ಮರುದಿನ ಎದ್ದು ಅದೆ ಅದೆ ಗುದ್ದು ಕಾರಣವಿಲ್ಲದೆ ಜಗಳಾಟ ಛಡಿಗಳ ಹೊರೆಯನು ಪುಡಿಮಾಡಿದರೂ ನಿಲ್ಲದು ತುಂಟನ ಆ ಕಾಟ ಹೀಗೇ ನಡೆದಿರೆ ತುಂ...

ಹೊಲೆಯ ಕೇರಿಯೊಳಿಲ್ಲ ಯೆಲ್ಲೆಡೆಯೊಳಿಹನು || ಪಲ್ಲ|| ನಿತ್ಯ ಪರಮಾತ್ಮನನ ಭಜಿಸದವ ಹೊಲೆಯ | ಸತ್ಯನುಡಿಯನು ಮಾತನಾಡದವ ಹೊಲೆಯ || ನಿತ್ಯಮನುಜರ ಮೋಸಗೊಳಿಸುವಾತನೆ ಹೊಲೆಯ | ಸತ್ಯವಂತರ ಜರಿಪ ತಾ ನಿತ್ಯ ಹೊಲೆಯ || ೧ || ಹಡೆದ ತಾಯ್ತಂದೆಗಳ ಸೇವೆ ತಪ್...

ಪಲ್ಲವಿ ಎಲೆ ನೋವೆ! ನೀನೋವದಿಹ ಸುಕೃತಿಯಿರನೇ! ೧ ತನ್ನೊಂದದೃಶ್ಯವಹ ದುರ್ದಮ್ಯ ಶಕ್ತಿಯಿಂ ಚೇತನಾತ್ಮಕ ದೇಹಿಗಳನದುವಮಿ ನಿಂದು, ಪ್ರಾಚುರ್ಯದಲಿ ತಾನೆ ತಾನಾಗಿ ನೆರೆ ಸಂದು, ಸಾರ್ವತ್ರಿಕ ಪ್ರಗತಿಯಲಿ ಮೆರೆಯುವೆ ಧನಿಕರನು ಸೋಲಿಸುವೆ. ಬಡವರನು ಗೆಲುವ...

ರಂಗಸ್ಥಳ, ತಾರಾಪಥ ಲೀಲಾಮಯ ಜಗವು ತೇಜೋಬಲ, ಸ್ಫುರಣದ್ರವ ಕವಿ ಕ್ರೀಡಾವನವು. ಗಾಯನ ವೀಣಾವಾತನ ಸಾಧನವಾದನೆಯು ಆರಾಧನೆ, ರಸಸ್ವಾದನೆ ವೈಣಿಕನಾದೋಪಾಸನವು. ಮೋಹಿನಿ, ನೃತ್ಯಪರಾಯಿಣಿ ಕಂಕಣ ಝಂಕೃತಿಯು ಮುಖಭಂಗಿಯ ಭಾವತರಂಗವು ರೂಪಾರಾಧನಚೇತನವು. ಬಾನ್‌ಬ...

1...3031323334...946

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...