ನೆರಳು

ಮೇಲೊಂದು ಗರುಡ ಹಾರುತಿಹುದು ಕೆಳಗದರ ನೆರಳು ಓಡುತಿಹುದು ಅದಕೊ ಅದರಿಚ್ಛೆ ಹಾದಿ ಇದಕು ಹರಿದತ್ತ ಬೀದಿ. ನೆಲನೆಲದಿ ಮನೆಯ ಮನೆಯ ಮೇಲೆ ಕೊಳ ಬಾವಿ ಕಂಡು ಕಾಣದೋಲೆ ಗಿಡ ಗುಲ್ಮ ತೆವರು ತಿಟ್ಟು ಎನ್ನದಿದಕೊಂದೆ...

ಇದೆಂತಹ ಗಡಿಗಳು

ಇದೆಂತಹ ಗಡಿಗಳು ಎಂತಹ ವಿಭಾಜಕ ರೇಖೆಗಳು ಕಾವೇರಿಯ ತಟದಲಿ ಕುಂಟಾಬಿಲ್ಲೆ ಆಡುತ್ತಾ ಎಲ್ಲರೊಂದಿಗೆ ಕೂಡಿ ಬೆಳೆದವಳು ನಾನು ಇಲ್ಲಿ ಮುಹಾಜಿರಳಾಗಿರುವೆ. ಅಲ್ಲಿ ಮಾಮರಗಳ ಹತ್ತಿ ಮರಕೋತಿ ಆಡಿದ್ದವಳು ಆ ನದಿ, ಬೆಟ್ಟ, ಗಿಳಿ, ಕೋಗಿಲೆ...

ಕವಿ ಮತ್ತು ವಿಮರ್ಶಕ

ಬಿತ್ತರಿಸದೆ ತಾಂ ಕಾವ್ಯವ ಗೊತ್ತರಿಯಲಳವೆ ಕವಿಯೆದೆಯಂ? ಕವಿಯೆದೆಯಂ| ಗೆತ್ತಿರದ ವಿಮರ್ಶಕನೇಂ? ಹೆತ್ತರಿಯದ ಬಂಜೆ ಸೂಲಗಿತ್ತಿಯೆ ಜಗದಿ? ||೧|| ಬೆಳಗುವೂಲರ್ಥದಿಂದ ನುಡಿ, ಕಾಣಿಕೆಯಿಂ ಬೆಳೆವಂತೆ ಲೋಚನಂ, ತಳುವುವೊಲಿಂಚರಂ ಸ್ಫುರಣದಿಂ, ನದಿ ತಕ್ಕನಿಹಂತೆ ದಂಡೆಯಿಂ; ಬೆಳಗಿ ಮನಕ್ಕೆ,...

ಮಲೆನಾಡಿನ ಕೋಗಿಲೆ

ಮಲೆನಾಡಿನ ಕೋಗಿಲೆ ನೀ ಹಾಡಿದೆ ಸ್ವರವೆತ್ತಿ ಬರಡಾದ ಎದೆಗಳಲಿ ಹಸಿರನ್ನು ಬಿತ್ತಿ ಅನಿಕೇತನದಿಂದ ಬಂದೆ ನಿಕೇತನದ ಕಡೆಗೆ ಮತ್ತೆ ಅನಿಕೇತನ ನೀ; ಜನಮನದಿ ನಿಕೇತನ ಕಗ್ಗತ್ತಲ ರಾತ್ರಿಯಲಿ ಮೂಡಿದೆ ಧೃವತಾರೆ ಕ್ರಾಂತಿ ಕಾಳಿ ಕಠಾರಿಗೆ...

ಕನ್ನಡದಾ ಬಾವುಟ

ಕನ್ನಡದಾ ಬಾವುಟವ ಹಾರಿಸಬನ್ನಿ ಕನ್ನಡದಾ ಕಹಳೆಯ ಮೊಳಗ ಬನ್ನಿ ಕನ್ನಡದಾ ದೀವಿಗೆ ನೀವಾಗಿ ಬನ್ನಿ ಕನ್ನಡಿಗರು ನಾವೆಂದು ಎದೆ ತಟ್ಟಿ ಬಾಳಿ|| ಕೆಂಪು ಹಳದಿ ಬಣ್ಣದ ಧ್ವಜವ ಹಿಡಿದು ವೀರಗಾಥೆಯ ತಿಲಕವನ್ನು ಹಣೆಯ ಮೇಲೆ...

ಹುಚ್ಚಿ ಜೇನ್ ಪಾದರಿಯ ಜೊತೆ ಮಾತಾಡಿದ್ದು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ದಾರಿಯಲ್ಲಿ ಎದುರಾದರು ಪಾದ್ರಿ ಮಾತ ಮಧ್ಯೆ ಎಚ್ಚರಿಸಿದರು. ‘ಚಪ್ಪಟೆ ಮೊಲೆಗಳು ಜೋತಿವೆ ಕೆಳಗೆ, ಬತ್ತಿ ಹೋಗುತಿವೆ ನಾಳಗಳು; ವಾಸಿಸು ಹೆಣ್ಣೆ ದೇವಸೌಧದಲಿ, ತಕ್ಕುವಲ್ಲ ಕೊಳೆರೊಪ್ಪಗಳು’. ಕೂಗಿ ಹೇಳಿದೆನು ಪಾದ್ರಿಗೆ...

ಗಣೇಶ ದರ್‍ಶನ

೧ ದೇವರನೆಯದೆ ಕಾವ್ಯದ ರಚನೆಯೆ ನುತಿಯುರಿ ಇಲ್ಲದೆ ಭಾವದ ಪಚನೆಯೆ? ತಪ್ಪಿದನಾದೊಡೆ ತಿದ್ದುವೆನೀಗ ದೇವತೆಯೊಂದನು ನೆನೆ ಮನ ಬೇಗ- ಎನಲೀ ನಗೆಬಗೆಗಿಂಬಾಗುತ್ತ ಬಂದಿತು ಬೆನಕನ ಭಾವನೆಯಿತ್ತ. ಬುದ್ಧಿಯ ನೀಡೈ ಗಣಾಧಿನಾಯಕ ಸಿದ್ಧಿಯ ತೋರೈ ಗಣಾಧಿನಾಯಕ...

ನಾವು ಮನೆಯ ಮಕ್ಕಳು

ಯಾಕೆ ಗುಂಡು ಗಜಗದಾಟ ನಮ್ಮ ನಾವು ಮರೆತೆವೆ ಯಾಕೆ ರಕ್ತ ರುಂಡ ಮುಂಡ ನಮ್ಮ ಮನೆಯ ಸುಟ್ಟೆವೆ ನೋಡು ಒಂದೆ ನೀಲ ಗಗನ ಒಂದೆ ತಾಯಿ ಧರಣಿಯು ಒಂದೆ ಕುಲವು ಮನುಜ ನೆಲವು ಯಾಕೆ...

ನಿಂಗ್ ನೆಪ್ಪೈತ ನಂಜಿ?

ಒಂದೇ ಕೇರೀಲ್ ಉಟ್ಟ್ ಬೆಳದೋರು ಒಂದೇ ಬೀದೀಲ್ ಒತ್ ಕಳದೋರು ನಾವ್ಗೊಳ್ ಆಡಿ ಮಾಡಿದ್ದೆಲ್ಲಾ ನಿಂಗ್ ನೆಪ್ಪೈತ ನಂಜಿ? ಕಲ್ಲು ಬಕ್ರೆ ಆರೀಸ್ಕೋಂತ ಗಂಡ ಯೆಡ್ತೀರ್ ಸಂಸಾರಾಂತ ಚಿಕ್ಕಂದ್ನಲ್ ನಾವ್ ಆಟಗೊಳ್ ಆಡಿದ್ ನಿಂಗ್...

ಒಲವೆಂಬ ಹೊತ್ತಿಗೆ

ಒಲವೆಂಬ ಹೊತ್ತಿಗೆಯನೋದ ಬಯಸುತ ನೀನು ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ! ಹಗಲಿರುಳು ದುಡಿದರೂ, ಹಲಜನುಮ ಕಳೆದರೂ ನೀ ತೆತ್ತಲಾರೆ ಬರಿ ಅಂಚೆವೆಚ್ಚ. ಬೆವರ ಹನಿಯಲಿ ಹಲವು, ಕಣ್ಣೀರಿನಲಿ ಕೆಲವು ನೆತ್ತರದಿ ಬರೆದುದಕೆ ಲೆಕ್ಕವಿಲ್ಲ. ಚಿತ್ರ...