ನವಲ ಕಂಡೀರಾ ನವಲ

ನವಲ ಕಂಡೀರಾ ನಮ್ಮ ನವಲ ಕಂಡೀರ್‍ಯಾ? ಕಡಲೀಯಾ ಹೊಲದಾಗ ಇತ್ತ ನಮ್ಮ ನವಲು || ೧ || ನವಲ ಕಂಡೀರ್‍ಯಾ ನಮ್ಮ ನವಲ ಕಂಡೀರ್‍ಯಾ? ಗೋದಿಯಾ ಹೊಲದಾಗ ಇತ್ತ ನಮ್ಮ ನವಲು ನವಲ ಕಂಡೀರಾ...

ಮಂಗಳಮಯ

ಬದುಕು ಇದು ಎಂಥ ಬದುಕು ದೇವರ ಧ್ಯಾನಿಸಿದ ಈ ಬದುಕು ಬದುಕಿಗೆ ಇಲ್ಲಿ ಕಿಂಚಿತ್ತು ಮರುಕು ದೇವರ ಧ್ಯಾನಿಸದೆ ಕಾಯ ಮುರುಕು ನನ್ನೆದೆ ತುಂಬಲಿ ಕೃಷ್ಣನ ರೂಪ ನನ್ನ ಕರ್‍ಣದಲಿ ಅವನದೆ ಪದರೂಪ ಆ...

ಉಮರನ ಒಸಗೆ – ೩೯

ನೀಂ ಕುಡಿವ ಮದಿರೆಯುಂ ನೀನೊತ್ತುವಧರಮುಂ ಮಿಕ್ಕೆಲ್ಲ ಪುರುಳಂತೆ ಶೂನ್ಯಮೆಂಬೆಯೊ?- ಕೇಳ್, ಅಂತಾದೊಡೇಂ? ನೀನೆ ಶೂನ್ಯನಪ್ಪವನಲ್ತೆ? ಶೂನ್ಯತೆಯೆ ನಿನಗಿರಲ್ಕವುಗಳಿಂ ಕುಂದೇಂ? *****

ಬುದ್ಧನ ಮಾಡಿ

ಬುದ್ಧನ ಮಾಡಿ ಹೇಗಾದರು ಮಾಡಿ ಮರದಿಂದ ಮಾಡಿ ಮಣ್ಣಿಂದ ಮಾಡಿ ಕಲ್ಲಿಂದ ಮಾಡಿ ಹುಲ್ಲಿಂದ ಮಾಡಿ ದಂತದಿಂದ ಮಾಡಿ ಚಂದ್ರಕಾಂತದಿಂದ ಮಾಡಿ ಬುದ್ಧನೆಂದರೆ ಬುದ್ಧ ಮಾಯಾದೇವಿಯ ಕನಸು ಬುದ್ಧ ಶುದ್ಧೋದನನ ನನಸು ಬುದ್ಧ ಯಶೋಧರಾ...

ಅವನು-ಅವಳು

ಕಲನಾದಿನಿ ಕಾವೇರಿಯ ತೀರದಿ ತನ್ನನೆ ನೆನೆಯುತಲವನಿದ್ದ; ತನ್ನ ಬಿಜ್ಜೆ ಕುಲ ಶೀಲ ಸಂಪತ್ತು ತನ್ನ ರೂಪು ತನ್ನೊಳೆ ಇದ್ದ. ತನ್ನವರೊಲ್ಲದ ಸರಸತಿ ನವವಧು ಗಂಡನ ಮಡಿವಾಳಿತಿಯಾಗಿ ಹಿಂಡುಬಟ್ಟೆಗಳ ಹಿಂಡಲು ಬಂದಳು ಜವ್ವನದುಲ್ಲಸದೊಳು ತೂಗಿ. ಕರೆಯೊಳಗಿಬ್ಬರೆ-ಆರೋ...

ಮಗು ಮಲಗಿದಂತೆ

ಬೆಚ್ಚಗೆ ಬೆಳಗಿನ ಸೂರ್‍ಯ ಕಿರಣಗಳ ಹಿತ ತಣ್ಣನೆಯ ತನಿಗಾಳಿ ಸುಳಿಸುಳಿದು ಹಿಡಿದಿಪ್ಪಿ ತೊರೆ ಹಳ್ಳಗಳ ಹರಿವ ಜುಳುಜುಳು ನಾದ ಹಿಂಜಿದ ಹತ್ತಿ ಹರಡಿದಂತೆ ಸುತ್ತಲೂ ಕಾಡಿನ ಜೀರುಂಡೆಗಳ ಝೇಂಕಾರದ ನಾದ ಕಾಡ ಗುಬ್ಬಚ್ಚಿಗಳ ಚಿಲಿಪಿಲಿ...

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ

ನಾವೆ ನಮಗಾಗಿಸುವೆವೆಮ್ಮ ಕೋಟಲೆಯಂ- ಬಾಳ್ವೆ ಸಂಗರರಂಗವೆಂಬುದಂ ಮರೆದು, ಸಿಂಗರಂ ಗೆತ್ತು ಶಸ್ತ್ರಂಗಳಂ ಮುರಿದು ವಿಧಿಗೆರೆದು ಕಡೆದೀವೆವಳಲ ಸಂಕಲೆಯಂ. ಕಾದದೊಡೆ ಬಾಳೇಕೆ? ಕಾದೆನೆನೆ ನಿನ್ನ ಸಂಧಿಪುದೊ? ಬಂಧಿಪುದೊ? ಬಗೆಯ ವಿಧಿಯದರಿಂ ಬಿಳಿಯ ಪಳವಿಗೆಯಳವೆ? ಬಾಳನೆತ್ತುದರಿಂ ಪಡೆವಳಂ...

ಎದೆ ತುಂಬಿದ ಹಾಡು

ಕನ್ನಡ ನಾಡು ಸುವರ್ಣ ಬೀಡು ಮುತ್ತು ಹರಿವ ಜಾಡು ಕನ್ನಡ ನಾಡಿನ ಚೆಲುವಿಗೆ ಒಲಿದು ಹಾಡುವೆ ನಾ ಹಾಡು - ಎದೆ ತುಂಬಿ ಬಂದ ಹಾಡು ಬೇಲೂರಿನ ಶಿಲೆ ಶಿಲ್ಪಿಗಳಾ ಕಲೆ ಸಮ್ಮೋಹನವಾಗಿ ಮಲೆನಾಡಿನ...

ಯುಗದ ಹಾದಿಯಲಿ

ಯುಗದ ಹಾದಿಯಲ್ಲಿ ಜಗದ ಸುತ್ತ ಹೊನ್ನ ಕಿರಣ ಆವಾಗ ಮನವಾಗುವಮುನ್ನ ನಡೆ ಮುಂದೆ ನಡೆ ಮುಂದೆ ನಿಂತ ಮಗ್ಗುಲಲ್ಲಿ ನಿರ್ವಾಣ ಬೇಲಿಯ ಸುತ್ತ ಕೂಡಿತದೋ ಕೂಗಿತದೋ ನಿಮ್ಮದೆಯ ಮೌನ ಶೂನ್ಯವಿದೋ ಜೀವನ ಭಗ್ನದಿರುಳಿನ ಸೋಪಾನತಾಣದಡೆಯಲ್ಲಿ...

ಮೂರು ಗುಲಾಬಿ ಪೊದೆಗಳು

ಮೂಲ: ವಿಲಿಯಂ ಬಟ್ಲರ್ ಏಟ್ಸ್ ಕುಲೀನ ಯುವತಿ ನುಡಿದಳು ಪ್ರೇಮಿಗೆ : ‘ತಕ್ಕ ತಿನಿಸನ್ನು ಉಣಿಸದ ಪ್ರೇಮವ ಯಾರು ನೆಚ್ಚುವರು, ಹೇಗೆ? ಅದಕ್ಕೆ ಪ್ರೇಮವೆ ಅಳಿಯುವುದಾದರೆ ಹಾಡುವಿ ಪ್ರೇಮವ ಹೇಗೆ? ಆಗ ನಾ ಗುರಿಯಾಗುವೆ...