ನಾನು ಕನಸುಗಳ ಕಾಣುವುದು ಬಿಟ್ಟಿದ್ದೇನೆ ಯಾಕೆಂದರೆ ಕನಸಿನ ಲೋಕವೇ ನನ್ನದಾಗಿದೆ. ಎಳೆ ಬಿಸಿಲು ಬಿಂಬಿಸುವ ಸೂರ್ಯನ ಕೆಂಪಡರಿದ ನೀಲ ಬಾನತುಂಬ ದಿನಾಲು ಬೆಳ್ಳಕ್ಕಿಗಳು ಹಾರುತ್ತಿವೆ. ಮನೆಯ ಮುಂದಿನ ಪುಟ್ಟ ಗಿಡಗಳಲಿ ಹೂವರಳಿ ದಿವ್ಯ ಮೌನದಲಿ...
ಬೆಳಕಿನ ಸೂರ್ಯ ಉದುರಿಸುತ್ತಾನೆ ಆವರ್ತ ಬೀಜಗಳು ಸಾಗರದಲಿ. ತೇಲಿ ಮತ್ತೆ ಹನಿ ಆಗಿ ಆಗಸಕ್ಕೇರಿ ಬಿಳಿ ಮೋಡಗಳು ತೇಲಿದ ನೀಲಿ ಆಕಾಶ. ಎಲ್ಲಾ ಗುಟ್ಟುಗಳ ನಿನ್ನಲ್ಲೇ ಇರಿಸಿಕೊಂಡು ಅವಸ್ಥೆಯಲಿ ಒಲೆಬೆಂಕಿ ಉರಿದು, ಬೀಜಗಳ ರೊಟ್ಟಿಗಳು...
ದಂಡೆಗೆ ಅಪ್ಪಳಿಸುವ ಅಲೆಗಳಲಿ ನಿನ್ನ ನೆರಳು ಹರಡಿ ಗಾಳಿಯಲಿ, ರಹಸ್ಯದ ಅಮಲೇರಿಸುವ ಘಮ. ಬದುಕಿನ ಕನಸುಗಳೆಲ್ಲಾ ಖಾಸಗೀ ಮೂಲೆಯಲ್ಲಿ ಅರಳಿ, ತುಯ್ಯುತ್ತಿರುವ ಹಡಗುಗಳ ಪುಟಗಳು. ನನ್ನ ಕೋಣೆಯಲಿ ಸುಮ್ಮನೇ ಒಬ್ಬಳೆ ಕುಳಿತು ನಿನ್ನ ಬಗ್ಗೆ...
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು ಸರಿದಂತೆ ಕವಿದು ಮೇಲೇರಿ ಬರುವ ಬೆಟ್ಟದ...
ಆಕಾಶದ ನೀಲಿಯಲಿ ಅದ್ದಿದ ಬಟ್ಟೆ, ಕನಸುಗಳ ನೇಯ್ದು ಒಂದು ದಿವಸ, ಬದುಕಿನ ವಸಂತ ಅರಳಿದ ಬಿಸಿಲಿನ ದಗೆಗೆ ಕುಡಿಯುತ್ತಿರುವ ನೀರು ಆಕಾಶದ ಹನಿ. ಗಜ ಬಟ್ಟೆಯ ಜೋಳಿಗೆಯ ತುಂಬ, ಅವರಿವರ ಒಲವು ಮಾತು ಬಿರಿಸು,...
ನಾನೀಗ ದಾರಿ ದೀಪಗಳ ಹಿಡಿದು ಹೆದ್ದಾರಿಯಲಿ ಹೆಜ್ಜೆ ಹಾಕುತ್ತಿರುವೆ. ಇತಿಹಾಸದ ಹಳವಂಡಗಳು, ಕೋವಿಗಳ ಸದ್ದುಗಳು, ಎಲ್ಲಿಯೋ ಆಳದಲಿ ಕೇಳುವ ಬಿಕ್ಕಳಿಕೆಗಳು, ಕಸಾಯಖಾನೆಯ ಆಕ್ರಂದನಗಳು ಚೆನ್ನಾಗಿ ನನ್ನ ಗುದ್ದುತ್ತಲಿದೆ. ಮತ್ತೆ ನಾನು ಉಡಿಯಲ್ಲಿ ಕವಿತೆಗಳ ಕಟ್ಟಿಕೊಂಡು...
ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು, ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ, ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು, ಮೋಡಗಳ ಬೀಜ ಹರಡಿದ ನೀಲ ಬಾನು, ನಾಳೆಯ ಚಿಂತೆಯಿರದ...
ಈ ನೋವಿನ ಬದುಕಿನಲ್ಲಿ ಬರೀ ಬುದ್ಧಿಯ ವಿಚಾರಗಳಿಂದ ಉಪಯೋಗವಿಲ್ಲ ದೇವರೇ ಈ ಮೂಳೆಯೊಳಗೆ ಇಳಿಯುವ, ಹಲ್ಲು ಉದುರಿಸುವ ಚಳಿಯಿಂದ ನನಗೆ ನಿನ್ನ ಬೆಚ್ಚನೆಯ ಭರವಸೆಯ ಕಂಬಳಿ ಹೊದೆಯಬೇಕಾಗಿದೆ. ಒಂದು ಮಧುರ ಹಾಡು ಮತ್ತೆ ಮಬ್ಬಾದ...
ಬಿಟ್ಟು ಬಿಡದೇ ನಡೆದೆ ನಡೆದರು ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು. ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು. ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು, ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು. ಹಸಿರು ಸೊಂಪಿನ ದಾರಿತುಂಬ...