ಅವತಾರಿ ಬರುತ್ತಾನೆ

ಅವನು ಬರುತ್ತಾನೆ ಮಾತುಗಳ ಮಾಲೆಹಾಕಿಕೊಂಡು ಮೌನದ ಬೇಲಿ ಸುತ್ತಿಕೊಂಡು ತನ್ನ ಪರಾಕು ಪಂಪ ತಾನೇ ಒತ್ತಿಕೊಳ್ಳುತ್ತ ಅಥವಾ ಒತ್ತಿಸಿಕೊಳ್ಳುತ್ತ ತಲೆ ನಿಗುರಿಸಿ ಎದೆ ಉಬ್ಬಿಸಿ ಬಿಮ್ಮನೆ ಬೀಗಿ ಬರುತ್ತಾನೆ ಮಾತಿನ ಹೊಳೆಯಲ್ಲಿ ಮಂತ್ರ ಮಹಾರಾಜರ...

ಪ್ರಾರ್ಥನೆ

ಜಾಳು ಬೀಳಾಗಿ ಹಳೆನಾತ ಹೊಡೆಯುವೀ ಅಷಡ್ಡಾಳ ಬಟ್ಟೆಗಳ ಕಿತ್ತೊಗೆದು ಮೈಗೊಪ್ಪವಾಗೊಪ್ಪುವಂಗಿಗಳ ತೊಡಿಸೋ ಮರಗಟ್ಟದ ತೊಗಲುಗಳಲ್ಲಿ ಸಂವೇದನೆಯ ಮೊಳೆಸಿ ರೋಮಾಂಚನವ ಚಿಗುರಿಸಿ ರಂದ್ರರಂದ್ರವ ಬಯಲಗಾಳಿಗೆ ತೆರೆಸೋ ನೀಲಿಗಟ್ಟಿರುವೀ ಧಮನಿಗಳಲ್ಲಿ ಕೆಚ್ಚು ರೊಚ್ಚಿನ ಕೆಂಪು ಹರಿಸೋ ಒಣಗಿ...

ಪ್ರಕೃತಿ-ವಿಕೃತಿ

ಬಾಲ್ಯದ ಬರಿಮೈ ತಿರುಗಾಟ ಬೆಳೆದಂತೆಲ್ಲಾ ನಾಚಿಕೆ ಇಷ್ಟಿಷ್ಟೆ ಮೈಮುಚ್ಚಿತು ಮೀಸಲ ಸೊಬಗು ನೋಡಿದವರು ಹಾಡಿದರು ಆಗ ಹರಿದದ್ದೆಲ್ಲಾ ಸಿದ್ಧ ರಸ-ತರುವೆಲ್ಲ ಕಲ್ಪತರು ದನವೆಲ್ಲಾ ಕಾಮಧೇನು ಇತ್ಯಾದಿ ಇತ್ಯಾದಿ ಮೈತುಂಬ ಮರ್ಯಾದೆಯುಟ್ಟು ಪ್ರಸನ್ನತೆ ಮುಡಿದು ಸೊಬಗ...

ಸಂಧಿ

ಆಗಮ ಹಗಲೂ ಅಲ್ಲ ಇರುಳೂ ಅಲ್ಲದ ಹೊತ್ತು ಮುರಿದ ಹುಬ್ಬು ಹುರಿದ ಕಣ್ಣು ಅರ್ಧ ಜಾಗ್ರದಾವಸ್ಥೆ ಪಡುಕೋಣೆಯ ರಂಗಮಹಲಿನ ಮೇಲೆ ದೇವಾನುದೇವತೆಗಳ ಅರೆನಗ್ನ ನರ್ತನ ಪೂರ್ವದೇಗುಲದಲ್ಲಿ ಘಂಟೆ ಜಾಗಟೆ ಮದ್ದಲೆಗಳ ಮೇಳ ಲೋಪ ಬಡ...

ನೀರೆ

ಒಳಗೆಲ್ಲ ನಿನ್ನ ನೆನಕೆ ಹರಿದಾಡುತ್ತಿದೆ ನಿನ್ನಿಂದಲೆ ಇವಳುಸಿರಾಟ ದಿನದಿನದ ರಸದೂಟ ನೀನಿಲ್ಲದಿರೆ ಇವಳೊಂದು ಬರಡು ಬರಿಯೆಲುಬುಗೂಡು ನೀನು ಅವತರಿಸಿ ಬಂದಾಗ ಇವಳು ಮೀಯುವುದೊಂದು ಚೆಂದ ನೀರ ಜಾಲರಿಬಟ್ಟೆ ಮೈಗಂಟಿ ಮಲೆ ಮಡಿಲ ಉಬ್ಬು ತಗ್ಗುಗಳಿಗೊಂದು...

ಎಬ್ಬಿಸಮ್ಮ ತಾಯಿ

ಕರ್ನಾಟಕಾಂಬೆಯ ಕನ್ನಡ ಮಾತೆಯೆ ಎಬ್ಬಿಸಮ್ಮ ತಾಯೆ ಎಬ್ಬೀಸೆ ನಿನ್ನಯ ಮಕ್ಕಳನೆಬ್ಬೀಸೆ ಕನ್ನಡ ಕಂದರನೆಬ್ಬೀಸೆ ಹಿಂದಿನ ಕವಿಗಳ ಹಿಂದಿನ ಸಿರಿಗಳ ಬಾಯ್ತುಂಬ ಹೊಗಳುತ್ತ ಮಲಗಿಹರ ಇಂದಿನ ಪರಿಗಳ ಮುಂದಿನ ಗುರಿಗಳ ಕೈಯಿಂದ ಮಾಡದೆ ಕುಳಿತಿಹರ ಪಂಪ...

ಮಣ್ಣಿನ ಹಾಡು

ಬೆಂಕಿಯುದರ ಹಡೆದ ತಂಪು ತೇಜ ಇವಳು ಯಾರ ತಪೋಮಣಿಯೋ! ಯಾವ ಆಟದ ಚೆಂಡೋ! ಗೋಲಿ ಗುಂಡೋ! ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ...

ಉಷೆ

ಅವಳು ಕಣ್ಣ ತೆರೆದಳು ಮೆಲ್ಲಗೆ ಮೂಲೆ ಮೂಲೆ ಮೈಮುರಿದೆದ್ದಳು ಹೊಂಗದಿರ ಪೊರಕೆಯಿಂದ ಸಂದು ಗೊಂದುಗಳ ಝಾಡಿಸಿ ಕತ್ತಲು ಕಸ ಗುಡಿಸಿದಳು ಮೂಡಲ ಬಾಗಿಲ ತೆರೆದು ಇರುಳ ಹೊದಿಕೆಯನೋಸರಿಸಿ ತನ್ನಿನಿಯನ ಮೈತಟ್ಟಿ ಎಬ್ಬಿಸಿದಳು ಕಣ್ಣ ತೆರೆಸಿದಳು...

ಹರೆಯ

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ...

ಉಮರನ ಒಸಗೆ

ಒಲವಿನ ಬೇಗೆಯ ಬೀಸುಗೋಲಿನ ಬಾಸಾಳಗಳ ತಾಳಲಾರೆ ಬಾರೆ ಮನ್ಮಥನ ಚೆಂದುಟಿ ನಿನ್ನ ಚೆನ್ನೈದಿಲೆ ಮೈಯನೆಲ್ಲ ಮುದ್ದಿಟ್ಟು ರಂಗೇರಿಸಿದೆ ಭಾವೋದ್ವೇಗದ ಸೆಳೆಮಿಂಚು ಉಕ್ಕಿಹರಿದು ಬಾಯಿ ಕಣ್ಣುಗಳ ಮುದ್ರಿಸಿದೆ ನರನರಗಳನುದ್ರೇಕಿಸಿದೆ ಮದಿರೆಯ ಮತ್ತೊಂದು ಮದನನ ಮುದವೊಂದು ಹದವಾಗಿದೆ...