Home / Archika Venkatesha

Browsing Tag: Archika Venkatesha

೧ ದೀವಳಿಗೆಯೊಳು ಕಾಂಬ ಸಾಲು ದೀಪದ ತೆರದಿ ‘ಭಾವ’ ದೀಪಗಳೆಲ್ಲ- ಒಂದಾಗಲಿಹವನೆಂದೋ? ೨ ‘ಒಂದ’ ರೊಳು ನೂರಾಗಿ ನೂರರೊಳಗೆನಿತೆನಿತೊ ವಿರಸ ಭಾವಗಳುದಿಸಿ ಹೃದಯವನು ಕೊರೆಯುತಿವೆ ೩ ಹಿಂದಿನಂತೆಯೆ ಬುದ್ಧ- ಬಸವೇಶ್ವರರು ಜನಿಸ...

೧ ಅನ್ನ ದಾತನ ಮೇಲೆ. ಕೈಯೆತ್ತ ಬಾರದೆಂ- ದೆನ್ನುವಾ ತತ್ವದಲಿ ತಥ್ಯಾಂಶವಿದೆ; ಇರಲಿ! ಅನ್ನ ಧೊರಕಿಸ ಬಂದ ಮಾನವರು ಕುನ್ನಿಗಳೇ? ಪಶುಗಳೇ? ಕ್ರಿಮಿಗಳೇನು ಚೆನ್ನಾಗಿ-ಅರಿಯಿರೈ ಓ! ಅನ್ನ ದಾತೃಗಳೇ! ನಿನ್ನಿನಂತೆಯೆ ಇಂದು ಮುಂದು ಬಹ ದಿನಗಳಲಿ ಬೆನ್ನು ...

ಶಬ್ದ ಸಾಗರವುಕ್ಕಿಬರುತಲಿದೆ, ಓ, ತಮ್ಮ, ನಿನ್ನತುಲ ಕೀರ್ತಿಯನು ವರ್ಣಿಸಲು ಮುನ್ನುಗ್ಗಿ! ಮುನ್ನಗೈದಾ ಸುಕೃತಕಿಂದು ಫಲ ದೊರಕಿದುದು ಕನ್ನಡದ ನಾಡಗುಡಿ ತಲೆಯೆತ್ತಿ ಮೆರೆವಂತೆ ಚೆನ್ನ, ನಿನ್ನಾತಪದ ಸಿದ್ಧಿ ಸಾಧಿಸುವಂತೆ ವರ್ಣನಾತೀತ ಯಶ ಪಾದ ರೇಣುವಿ...

ಓ! ತಾಯಿ, ಮಾತಾಯಿ ಮೇಲೆತ್ತು ಮುಖವನ್ನು ದೈನ್ಯ ದೃಷ್ಟಿಯಕಂಗಳನು ಮಿಟುಕಿಸೌ! ಕವಿಯ ಕಣ್ತೆರೆದು ನೊಡಿಲ್ಲಿ; ಆವ ಶತಮಾನಗಳ ಲಾಭ ಹಾನಿಯ ಲೆಕ್ಕವನು ಗುಣಿಸಿ ತಣಿಯುತಿಹೆ! ಶಿರಬಾಗಿದಾರಿಗೌ? ಅಚಲಳಾದುದಕೇನು- ಕಾರಣಂ? ಮೊಗದೊಳೇಕೀ ಚಿಂತೆ? ಸಂಸಾರ ನಿಸ್...

ಬರುವುದೊಮ್ಮೆ ಬರುವುದು ಬಾರದೆಂದು ಬಾರದು ಬರುವ ಬಿಡುವ ಭೂತಕಾಗಿ ಇಂದು ಭಯವದೇಕದು? ಗೈವ ಗೈಮೆ ಸಾಗಲಿ ಮೈ ಮನವ ತುಂಬಲಿ ಸಾವು ಬದುಕು ನೋವು ನೂರು ಹಾರಿ ಬರಲು ನಗುತಿರು! ಕರಿದು ಮೋಡ ಹೊಳೆವುದು ಬರಿದು ಕೈ ತೀವುದು ಸಿರಿಯು ಕಣ್ಣ ಮುಚ್ಚಿ ತಾನೆ ಎಲ್...

ಅಮರ ಜೀವನದಮಲ ಲತೆಯಲಿನಿ ಹೂ‌ವಾಗಿ ಪರಮ ಪಾವಿತ್ರ್ಯತೆಯ ಮೂರ್ತಿಗೂ ಮೇಲಾಗಿ ಸರಲತೆಯ ಸೌಭಾಗ್ಯದಧಿಧಾತ್ರಿ ಚಿರಮಾಗಿ ವಿಮಲ ತೇಜೋರಾಶಿ ಬೆಳಗಲತಿಬೆಳಕಾಗಿ ದೇವಾತ್ಮ ನಡಿಯಲ್ಲಿ ಸರಸಿಜೋದ್ಭವೆಯಾಗಿ ಜನಮನದ ಮುಗಿಲಿನಲಿ ಧ್ರುವ ತಾರೆ ದಿಟಮಾಗಿ ಅನುರಾಗ ಧವ...

ಹಠಯೋಗ ಸಾಧಿಸುವ ಯೋಗಿ ಬಾ, ದಿಟವನುಡಿ. ಕಪಟಿ ಕಣ್ಣಿನ ಕೂರ ಕಿಡಿ ನೋಟ ಚಿಮ್ಮದಿರು! ಉಪಚಾರ ವೈಖರಿಯ ವಿಸ್ತರಿಸಿ ಹಿಗ್ಗದಿರು ಮಠ ಮಾನ್ಯ ಸೌಧ ಗುಡಿ ಗೋಪುರಕದ ಕಾಲಹುಡಿ ಚಿಮ್ಮಿ ಚಿತ್ರಿಸುವ ಘನ ಪುಣ್ಯ ಮೂರ್ತಿಯ ರೂಪ ಹೊಮ್ಮಿ ಹೊನ್ನಿನ ಹೊಗೆಯಲೊಗೆದ ...

೧ ಬಹಳ ದಿನದ ಬಾಯಾರಿಕೆ ಯಾವ ನೀರ ಕುಡಿಯಲಿ? ಸಹನೆಯ ಸವಿ ಬಲು ದೂರಕೆ ಹಾರಿತೇನು ಮಾಡಲಿ? ೨ ಅವರಿವರೆದೆಗಾವಿಗೆ ನಾ ಮನ ತೆತ್ತೆನು ಮರುಳ ಹವಣಿಸುವರ ಹವಣಿಕೆಗತಿ ದಿನಗಳೆದನು ದುರುಳ ೩ ಕಾಂಬುದು ಬೆಳಕೆನ್ನುತೆ ಇರುಳನೆ ಮರೆತಿರುವೆ ತಿಂಬುದೆಸೊದೆ ಎಂದ...

ಜಗದಗಲ ಮುಗಿಲಗಲ ನಿನ್ನ ಮನ ಭಾವನಾ! ಹಗಲಿರುಳಿಗು ಅದೆ ಮೂಲ ನಿನ್ನ ದೃಷ್ಟಿ ಮೋಹನ! ಇಡಿ ಜೀವನ ಪಾವನ! ಇದು ಅರ್ಪಣ ತನುಮನ ಬರಲಿ ಶಕ್ತಿ-ಇರಲಿ ಸ್ಫೂರ್ತಿ ಅದುವೆ ನನ್ನ ಚಿಂತನ ***** ಬೆಂಗಳೂರು : ೧೯೪೫...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...

ಭೋಜನ ಭೀಮಾಚಾರರ ಮಕ್ಕಳೇತಾನೆ ಆ ವೇದಾಂತ ಡಿಂಡಿಮ ರಾಜಾಚಾರ್‍ಯರು. ಭೀಮಾಚಾರ್‍ಯರು ತಮ್ಮ ಬಿರುದನ್ನು ಸ್ವಪ್ರಯಾಸದಿಂದಲೇ ಸಂಪಾದಿಸಿದರು. ತಮ್ಮ ಮಕ್ಕಳಲೊಬ್ಬನಾದರೂ ಸರಸ್ವತಿಯ ಕೈಹಿಡಿಯಲೆಂದು ಆಶೆಬಿಟ್ಟು ರಾಜಾಚಾರ್‍ಯರನ್ನು ಬಿರುದೊಣ್ಣೆಯ ವಶಕ್ಕೆ ಕೊಟ್ಟರು. ಇತ್ತಲಾಗಿ ರಾಜಾಚಾರ್‍ಯರಿ...

ಶಠಗೋಪ ಹದಿನಾರಾಣೆ ಶ್ರೀವೈಷ್ಣವ. ಒಂದುದಿನ ಅವನ ಅತ್ತಿಗೆ ಅಡುಗೆಯ ಕೆಲಸದಲ್ಲಿದ್ದು ವೀಳೆಯದೆಲೆಯ ವರ್ತನೆಯವಳು ಬಂದಾಗ ಎಲೆ ತೆಗೆಯಲು ಶಠಗೋಪನಿಗೆ ಹೇಳಿದಳು. ಶಠಗೋಪನು ಹೊರಗೆ ಬಂದು, ಎದುರಿಗಿದ್ದ ವೀಳೆದೆಲೆಯವಳನ್ನು ನೋಡಿದ. ಅವಳು ಸಾಧಾರಣದ ಹೆಣ್ಣು. ರತಿಯಲ್ಲ, ಚಪ್ಪನ್ನಾರು ದೇಶದಲ್ಲ...