ವಿಶ್ವದುಸಿರೆಲೆ ನೀನು ವಿಶ್ವಕರ್ಣಾಟಕವೆ
ವಿಶ್ವಾತ್ಮ ನಣುರಕೇಣು ಪರಿಪೂರ್ಣ ಶ್ರೀಕೃಷ್ಣ
ಸವ್ಯಸಾಚಿಗೆ ದಿವ್ಯ ಭವ್ಯೋಪದೇಶವನು
ಬಹುಭಯಂಕರ ರಣದ ಮಧ್ಯದಲಿ ಗೈಯ್ಯುತ್ತೆ
ಸ್ಫೂರ್ತಿ ಶಕ್ತಿಯಕೊಟ್ಟು ಕೌರವರ ಶಿರ ತರಿದ
ಈ ಮಹಾ ದೇವಾಧಿ ದೇವನೇ ನಿಂತಿಹನು
ನಿನ್ನ ಬೆಂಬಲಕಿಂದು! ಇದಿರಾರು ದೇವನಿಗೆ?
ಮನಜಶಕ್ತಿಯು ಮಣ್ಣು ಮುಕ್ಕಲಾಶ್ಚರ್ಯಮೇ?
ಕ್ರೌರ್ಯದ್ವೇಷಾಸೂಯೆ ಬದುಕಲಾಪವೆ ಹೃದಯ
ಪರಿಶುದ್ಧರಂ ತಪಿಸಿ? ಶಿಖಿಯೊಡನೆ ಸರಸಮೇಂ?
ಸಿದ್ಧಾರ್ಥ ಬುದ್ಧನಪ್ಪನ್ನೆವರ ಜನರಿಂದ
ಮರೆಯಾದ; ಶಾಶ್ವತಮೆ ಆಕಾಲ ಬುವಿಯಲ್ಲಿ?!
ಸಿದ್ಧಿಗಾಗಿಯೆ ಬದ್ಧಯೋಗಿಯಾಗೆಲೊ ನೀನು
ಇದ್ದು ಸತ್ತವನಂತೆ ಬದುಕಿ ಸಾರ್ಥಕವೇನು?
*****
ಬೆಂಗಳೂರು : ೧೯೪೨








