೧
ಬಾಳು ಹಾಳು ಧರ್ಮಶಾಲೆ
ಹಗಲು ರಾತ್ರಿ ಬಾಗಿಲ;
ಅರಸರೆನಿತೊ ಗೈದು ಲೀಲೆ
ಉಳಿದು ಹೋದರೀ ನೆಲ!
೨
ದಿನಕೆ ಸಾವಿರಾರು ಹೂವು
ಅರಳಿ ಉರುಳಿ ಅಳಿವವು;
ನಿಮಿಷಕೊಂದು ಕೋಟಿ ಜೀವ
ಸತ್ತು ಹುಟ್ಟಿ ಬೆಳೆವವು
೩
ಅಲ್ಲಿ ಪೊಡನಿಗೆಲ್ಲನನ್ನು
ಹುಗಿದು ಗೋರಿಗೈದರು;
ಬಲ್ಲ ಜನರೆ ಶೂರನೆದೆಯ
ತುಳಿದು ತುಳಿದು ನಡೆವರು
*****
ಹಾವೇರಿ : ೧೯೩೫








