Home / ಕವನ / ಕವಿತೆ / ಭಾರತ ಭೂಮಿಯ ಬಡತನ

ಭಾರತ ಭೂಮಿಯ ಬಡತನ

ಭಾರತ ಭೂಮಿಯ ಬಡತನವು
ವಿಶ್ವ ಕುಟುಂಬದ ಜಡತನವು!

ಧರ‍್ಮದ ಭೂಮಿ ಚಿರಂತನವು;
ಉದರದಿ ಕರ‍್ಮದ ಮಂಥನವು!

ಕೋಟಿ ಮಾನವರ ಕಣ್ಣೀರು
ಹರಿದು ತುಂಬಲದು ಮುನ್ನೀರು!

ಕಾಳಿನ ಕಣಜವು ತುಂಬಿದರೂ
ಹಸಿವೆಯು ತೀರದು ನುಂಗಿದರೂ !

ಒರಗಾಲೆಂಬುದು ಬೇರಿಲ್ಲಾ;
ಯಾವಾಗಲು ತುತ್ತಿಗೆ ಇಲ್ಲಾ !

ಕೋಟಿ ಕೋಟಿ ಜನ ಬಾಲಕರು
ಹುಟ್ಟಿದ ಕ್ಷಣವೇ ಸಾಯುವರು !

ತೊಟ್ಟಿಲು ಮಸಣಕೆ ದೂರುವದು;
ಮರಣವ್ರ ಜನನಕೆ ಸೇರುವುದು !

ಹುಟ್ಟು-ಸಾವುಗಳ ಮಿತಿಯಿಲ್ಲ;
ಬದುಕಿದವರಿಗೂ ಗತಿಯಿಲ್ಲ !

ಬ್ರಹ್ಮದೇವನಿಗು ಬಿಡುವಿಲ್ಲ;
ಯಮದೇವನಿಗೂ ತಡವಿಲ್ಲ !

ಪಾಪ ಪುಣ್ಯಗಳ ವೇದಾಂತ !
ಬಡತನವೆಂಬುದು ಸಿದ್ಧಾಂತ !

ನಡುಹಗಲಲಿ ಯಾರದು ತಪ್ಪು?
ಯೌವನದಲಿ ಬರುವುದು ಮುಪ್ಪು !

ಚಡಪಡಿಸಿದರೂ ನರಜೀವ
ಹೋಗದು! ಪ್ರಾಣ ಚಿರಂಜೀವ!

ಉಸಿರೆಳೆದಾಡುವ ಜೀವನವು
ಸತ್ತೂ ಬದುಕಲು, ಪಾವನವು !

ಭಾರತ ಭೂಮಿಯ ಬಡತನವು
ವಿಶ್ವಕುಟುಂಬದ ಜಡತನವು!
*****

Tagged:

Leave a Reply

Your email address will not be published. Required fields are marked *

ವ್ಹಾಲೆಂಟಾಯಿನ್ ಡಿಗ್ಬಿಯು ಭೋಜನವನ್ನು ತೀರಿಸಿಕೊಂಡು ‘ಹಾವಾನಾ ಸಿಗರ’ (ತಂಬಾಕದ ಸುರುಳೆ) ಸೇದುತ್ತೆ ತನ್ನ ಆರಾಮ ಕುರ್ಚಿಯಲ್ಲಿ ಯಥಾಸುಖವಾಗಿ ಕುಳಿತು ಏನೇನೋ ವಿಚಾರ ಮಾಡುತ್ತಿದ್ದನು. ಸುಗಂಧಿತವಾದ ಸಿಗರದ ಹೊಗೆಯು ಕಾಮಿನಿಯ ಕೇಶಕಲಾಪದಂತೆ ಸುರುಳೆ ಸುರುಳೆಯಾಗಿ ಅಂತರಿಕ್ಷದಲ್ಲಿ ಗಾಳ...

೨-೨-೧೯೩೦ “ಹೆಣ್ಣಿನಿಂದ ಮಾನವನಿಗೆ ಎಂದೂ ತೊಂದರೆಯು. ಅವಳು ಚೆಲುವೆಯಾದರೆ, ಅವಳನ್ನು ಪಡೆಯಬೇಕೆಂಬಾಸೆಯನ್ನು ಇತರರಲ್ಲಿ ಉಂಟು ಮಾಡುವಳು; ಅವಳ ಗಂಡನು ಪ್ರೇಮ ಸಂಶಯಕ್ಕೆ ಸಿಲುಕುತ್ತಾನೆ. ಅವಳು ಕುರೂಪಿಯಾಗುವಳೆ, ಅವಳ ಗಂಡನು ಇತರರನ್ನು ನೋಡಿ ಅಸೂಯೆ ಪಟ್ಟು, ಆ ಅಸೂಯೆಯಿಂದ ತೊಂ...

ಗಂಗಮ್ಮನು ಅವಳೊಂದು ಮುತ್ತಿನಂಥಾ ಹೆಣ್ಣು! ಅವಳ ಗೋಳು, ಸಾಯುವಾಗ ಹೊಂದಿದ ಅವಳ ಸಂಕಟದ ಪರಿ, ಎಲ್ಲಾ ನೆನಿಸಿಕೊಂಡರೆ ಆ ಚಿತ್ರವು ಕಣ್ಣೆದಿರಿಗೆ ಈಗಲೂ ಕಟ್ಟಿ ಬಿಡುವುದು. ನಾನೆಷ್ಟೋ ಸಾರೆ ಅವಳು ಇಲ್ಲದಾಗ ಸಿದ್ಧರಾಮನ ದೆಶೆಯಿಂದ ಅವರ ಮನೆಗೆ ಹೋಗುತ್ತಿದ್ದೆ. ಆಗ ನನ್ನನ್ನವಳು ಕರೆದು ಕೂ...

(ಸುಶೀಲೆಯು ಗಂಡನಿಗೆ ಬರೆದ ಕಾಗದ) ಸಿರಿಪುರ ೮-೯-೧೯೨೬ ಮ|| ರಾ|| ಯವರಲ್ಲಿ ಶೀಲ ಮಾಡುವ ವಿಜ್ಞಾಪನೆಗಳು. . . . . . . . . . ನಿಮ್ಮ ಆಕ್ಷೇಪಣೆಯ ಪತ್ರವನ್ನು ಕಂಡು ಮನಸ್ಸಿಗೆ ಕಿರಿಕಿರಿಯಾದರೂ, ನಿಮ್ಮನ್ನು ನಾನು ಪ್ರೀತಿಸುತ್ತೇನಾಗಿ ಈ ಕಾಗದ ಬರೆಯುತ್ತೇನೆ. ಅಲ್ಲ, ನೀವು ಹೆಸರಿಗೆ...

ಮೂಲ: ವಿ ಎಸ್ ಖಾಂಡೇಕರ ಎದುರದಡದಿ ನಿಂದು ಬಿದಿರಕೊಳಲ ತನ್ನ| ಅಧರದಿ ನುಡಿಸುವ ಚದುರ ರಂಗನ ಕಂಡೆ|| ಅದೇ ಶಾಲೆಬಿಟ್ಟು ಬಂದು ಕುಸುಮೆಯು ರಾಗದ ಪೆಟ್ಟಿಗೆಯನ್ನು ಬಾರಿಸುತ್ತ ಹಾಡುತ್ತಿದ್ದಳು. ಸಂಗೀತದಿಂದ ದಣುವು ಪರಿಹಾರವಾಗುವದೆನ್ನುವರು. ಆದರೆ ನಡುಮನೆಯಲ್ಲಿ ಬಿಳಿಯ ಪತ್ತಲವನ್ನೊಂದು ...

ನಿರಂಜನ ಬಹಳ ಜನ ಹೆಂಗಸರನ್ನು ನೋಡಿದ್ದ. ಆದರೆ, ಅವನ ದುರದೃಷ್ಟ-ಅವನು ನೋಡಿದವರೆಲ್ಲ ಸರಿಸಿದ ಸೆರಗಿನವರು, ಸಡಿಲಿಸಿದ ನಿರಿಯವರು. ಮೇಲಾಗಿ ಅವನು ಸುಂದರನೇನೋ ಹೌದು. ಆದರೆ ಗಂಡಸಿನ ಸೌಂದರ್ಯವಲ್ಲದು, ಹೆಂಗಸಿನ ಸೌಂದರ್ಯ, ಸಾಲದುದಕ್ಕೆ “ಎಲ್ಲ ಹೆಂಗಸರೂ ಹೀಗೆಯೆ ಬಾ ಎನ್ನುವುದು ...