ಹೊಸಗನ್ನಡ ಪಂಚತಂತ್ರ – ಒಡೆಯುವುದು
ಒಂದಾನೊಂದು ಕಡೆ ಒಂದು ದೊಡ್ಡ ಆಲದ ಮರವಿರುವುದು. ಅಲ್ಲಿ ಒಂದು ಜೊತೆ ಕಾಗೆಗಳು ವಾಸವಾಗಿದ್ದುವು. ಮೊಟ್ಟೆಯಿಡುವ ವೇಳೆಗೆ ಸರಿಯಾಗಿ ಆ ಮರದ ಪೊಟ್ಟೆರೆಯಿಂದ “ಒಂದು ಕರಿಯ ನಾಗರಹಾವು ಬಂದು ಆ ಮೊಟ್ಟೆಗಳನ್ನು ತಿಂದು ಬಿಡುವುದು. ಅವು ಈ ದುಃಖವನ್ನು ಸಹಿಸಲಾರದೆ ತಮ್ಮ ನಾಗಿದ್ದ ನರಿಯನ್ನು ಕೇಳಿದುವು. “ಏನು ಮಾಡೋಣ? ಹೇಳು. ನದೀ ತೀರದಲ್ಲಿ ಬೆಳೆಯಿಟ್ಟವನು, ಹಾವಿರುವ ಮನೆಯಲ್ಲಿ ವಾಸ ಮಾಡುವವನು ಇಬ್ಬರಿಗೂ ಸುಖವೆಲ್ಲಿಯದು? ಆ ಹಾಳು ಹಾವು ನಮ್ಮನ್ನು ಯಾವೊತ್ತು ಹಿಡಿದು ತಿಂದು ಬಿಡುವುದೋ? ಎಂದು ಅತ್ತು ಕೊಂಡುವು.
ನರಿಯು ಒಂದು ಗಳಿಗೆ ಯೋಚಿಸಿ ಹೇಳಿತು: “ಇದಕ್ಕಾಗಿ ನೀವು ಇಷ್ಟು ದುಃಖ ಪಡಬೇಕಾಗಿಲ್ಲ ಉಪಾಯ ಮಾಡದಿದ್ದರೆ ಆ ಕೆಟ್ಟ ಹಾವು ಸಾಧ್ಯವಾಗುವುದಿಲ್ಲ. ಶತ್ರುವನ್ನು ಗೆಲ್ಲುವುದಕ್ಕೆ ಆಯುಧಗಳಿಗಿಂತಲೂ ಉಪಾಯವೇ ಸುಲಭ. ಉಪಾಯಕ್ಕೆ ಬುದ್ಧಿಯು ಬೇಕು. ಬುದ್ಧಿಯಿಲ್ಲದೆ ಆಸೆಗೆ ವಶವಾಗಿ ಕೊಕ್ಕರೆಯು ಪ್ರಾಣ ಬಿಟ್ಟಿತು. ಹಾಗಾಗಬಾರದು. ಅಷ್ಟೆ!” ಎಂದಿತು.
ಕಾಗೆಗಳು ಅದು ಹೇಗೆ ಎಂದು ಕೇಳಲು ನರಿಯು ಹೇಳಿತು.
*****
ಆಶೆಗೆ ವಶವಾಗಿ ಸತ್ತ ಕೊಕ್ಕರೆಯ ಕಥೆ ಓದಿ









