ಚಲುವಿನ ಬಳ್ಳಿಯೆ ಗೆಜ್ಜೆಯ ತೊಟ್ಟು
ತುಳುಕುತ ಬಳುಕುತ ಕುಣಿಯುತಿದೆ
ಮೋಹಕ ಕಿಂಕಿಣಿ ನಾದವನಿಟ್ಟು
ಹೆಜ್ಜೆಯ ಗೆಜ್ಜೆಯು ನುಡಿಯುತಿದೆ
ಗೆಜ್ಜೆಯ ನಾದಕೆ ಎನ್ನೆದೆ ನವಿಲು
ಗರಿಗೆದರುತೆ ನಲಿದುಲಿದಿತ್ತು
ಸಂತಸದೊರತೆಯ ಅಮೃತ ಹೊನಲು
ತುಂಬಿದ ಎದಯಿಂ ಚಿಮ್ಮಿತ್ತು
ನೃತ್ಯವೆ ಅವಳನು ಮೋಹಿಸಿ ಬಂತೋ
ಅಂಗದ ಕಂಂತಿಯ ಸಿಂಗರಕೆ
ನೃತ್ಯವೆ ಅವಳಾ ರೂಹನು ತಳೆಯಿತೊ
ತನ್ನೆದೆ ಕೋರಿಕೆ ಬೀರಲಿಕೆ
ಭಾವದ ಪುಷ್ಪದಿ ಜೇಂಗೊಡ ಹೊತ್ತು
ರಾಗ ಭ್ರಮರವ ಕರೆದಿಹಳು
ಆವುದೊ ಕನಸಿಗೆ ಜೀವವ ನಿತ್ತು
ಲೋಕಕೆ ನಾಕವ ತಂದಿಹಳು
*****
ಕಾಲೇಜಿನ ಸ್ನೇಹ ಸಮ್ಮೇಲನದಲ್ಲಿ ನರ್ತಕಿಯನ್ನು ಕಂಡಾಗ ಉದಿಸಿದ ಭಾವಲಹರಿ









