Home / ವಿ ಕೃ ಗೋಕಾಕ್

Browsing Tag: ವಿ ಕೃ ಗೋಕಾಕ್

ಎಣೆಯಿಲ್ಲದೀ ಸೊಬಗ ನೋಡಿ ಸಂತಸಗೊಂಡು ಸವಿಯಿದನು ಹಾಡಬೇಕೆಂದುಲಿವ ಜೀವ! ಆನಂದದಾ ಮುಕುಟ ಮೌನವೆಂಬುದನರಿದು ನಿಗ್ರಹಿಸು, ನುಡಿಯದಿರು ನುಡಿಗೂಳಿಯಾಗಿ. ನೀನು ಕಂಡಿಹ ಚೆಲುವ ಕೋಟಿ ಕಣ್ಗಳು ಕಂಡು ಮರೆಯಾಗುವವು ನಿನ್ನ ಕಣ್ಣಿನಂತೆ, ಕಾಣಿಸಿಹ ಚೆಲುವು ತ...

ನಿರಭ್ರವಾದ ನಭೋಮಂಡಲ! ಮಧ್ಯರಾತ್ರಿಯಲ್ಲಿ ಸಹ ನೀನು ನಿಚ್ಚಳವಾಗಿ ಕಾಣುವೆಯಲ್ಲ! ಕುಳಿರನ್ನು ಪಾತಾಳಕಟ್ಟಿದೆ ನೀನು, ತಳಿರೊಡೆದ ನೆಲವನ್ನು ಎವೆಯಿಕ್ಕದೆ ನೋಡಿ ನಿಂತಿರುವೆ! ಸಾಗರವು ಸಹ ಸಾಗರಬೀಳುವದು,- ಈ ನಿನ್ನ ಚೆಲುವನ್ನು ನೋಡಿ! ಚಿಕ್ಕಮಕ್ಕಳಂತ...

(Forget-me-not) ನೆನಹು-ಹೂಗಳ ನೋಡಿ ತಣಿಯದವರಾರು? ಅವುಗಳಾ ಚೆಲುವಿಕೆಗೆ ಮಣಿಯದವರಾರು? ಇಂದ್ರನೀಲಗಳಂತೆ ಕಳೆವೆತ್ತು, ನಿಂತು- ನೋಡ ಬಾ! ಹೂಗಳಿವು ನಗುತಲಿಹವೆಂತು! ತಾಯಿ! ಪ್ರಕೃತಿಯೆ! ನಿನ್ನ ಬೆಂಡೋಲೆಯೇನು? ತಿಳಿಯದಚ್ಚರಿಗೊಳುತ ನೆನೆಯುತಿಹೆ ...

ಮಂಜು ಬೀಳುವದೆಂದು ಬೆದರಿ ನಿಂತಿಹ ಕನ್ಯೆ! ಅಂಜದಿರು, ಮೈಚಳಿಯ ಬಿಟ್ಟು ನಿಲ್ಲು. ಸುರಿದು ಮುಗಿಲೊಳಗಿಂದ ಹಿಮವು ಬಿದ್ದಿರಲೇನು? ನಿಂತ ನೀರಾದರೇನಾಣೆಕಲ್ಲು? ನಿನ್ನ ಕೊಳದಲ್ಲಿರುವ ಕೆಂಪು ಮೀನಗಳೆಲ್ಲ ಮಿನುಗದಲೆ ಮುಗಿದಿಹವು ಮಂಜಿನಲ್ಲಿ. ದಿನದಿನಕೆ...

ಮೆಯ್ಯಲಿಹ ರಕ್ತವನೆ ಹೆಸ್ಪುಗಟ್ಟಿಸುವಂಥ ಚಳಿ ಬಂತು, ಜನಜಾತ್ರೆಯೋಡಿಸಿತು, ಕೊನೆಗೊಮ್ಮೆ ಬರಿದಾದ ಬೀದಿಯಲಿ ನಿಂತ ಹೊಗೆಕಿಂಡೆಯಲಿ ಭೌಂವೆಂದು ಬೀಸುತ್ತ ಚಳಿಗಾಳಿಯದು ಬಂತು,- ಅಸಮವಾಗಿಹ ಹಿಮದ ಬರವ ಸಾರಿ! ಸದ್ದಿಲ್ಲ, ಸುಳಿವಿಲ್ಲ, ಮೊಳಗಿನಬ್ಬರವಿಲ್...

(ಆಕ್ಸಫರ್ಡಿಗೆ ಸಮೀಪವಾಗಿದ್ದ ಹಳ್ಳಿಯ ಗುಡ್ಡ) ಮಾಗಿಯು ಹಿಮ್ಮೆಟ್ಟುವ ಮುನ್ನ ಮಾಗಿಯು ಹೊನ್ನಾಗಿಸಿದ ಹಸಿರೆಲೆಗಳನ್ನು ಕುಳಿರು ಬಂದು ಮಣ್ಣುಗೂಡಿಸುವ ಮುನ್ನ ಬೂದಿಬಣ್ಣದ ಮಂಜು ಬಂದು ಬೀದಿಬೀದಿಗೆ ಬೀಳುವ ಮುನ್ನ,- ಆಂಗ್ಲದೇವಿ! ನೋಡಿದೆನು ನಿನ್ನ ಮ...

ಹಡಗದ ಹಗೆಯಲ್ಲಿಳಿದಿಳೆದು ಗವಿಯನೊಳವೊಕ್ಕು ಸಾಗಿದೆವು ದೂರ, ಸುದೂರ,- ನೀರೊಳಕೆ ಹಾಯ್ದ ಹಡಗದ ತಳದ ಗರ್ಭದೊಳು ನೂಕಿ. ಇದೇನು ತಿಮಿಂಗಿಲ ತಿಮಿರ! ನಿಶಾಚರರ ದಿಶೆಯೇನಿದು! ಜಲಚರಗಳ ಜಗವು! ಇಟ್ಟ ಕಾಲೆಳೆಯುತಿದೆ ಜಾರಿ ಯಮಲೋಕಕ್ಕೆ! ಹರಿಯುತಿದೆ ನೋಡಲ್...

ಕಂಬಿಯಿಲ್ಲದ ಗಾಡಿಯಂತೆ ಸುಂದಾಗಿ ಸಾಗಿದೆ ಹಡಗ: ಇದಕಾವ ಪಿಡುಗು ಬಂತು? ಕಲ್ಲು ತಾಕಿದ ಹಾವಿನಂತೆ ಮೆಲ್ಲನೆ ಹೊಟ್ಟೆ ಹೊಸೆಯುತಿದೆ: ನಡೆದಿರುವದೇತಕ್ಕಿಂತು? ನೀಲಕಾಯರ ನೆಲದಡಿಗೆ ಕೋಲಾಹಲವೆಬ್ಬಿಸಿ ಹೊನ್ನನು ನುಂಗಿ, ದಂಗೆ ಹಾಕಿ, ಕೆಂಪು ಕಡಲೊಳಗಿಂದ...

ಸುಡು ಈ ಗಾಳಿವೇಗವನ್ನು, ಭೋಗವನ್ನು, ಚೆಲುವನ್ನು! ಪಯಣವಿಲ್ಲದೆ ನರನು ಬಾಳಿದರೆ-ತಪ್ಪೇನಿತ್ತು? ನಿರ್ಮಿಸಿಹನೀಗ ನರಕವನ್ನು ನರಪ್ರಾಣಿಗಳಿಗೆ, ಒಬ್ಬನ ಸುಖಕಾಗಿ ಇನ್ನೊಬ್ಬರಿಗೆ ದುಃಖ: ಒರ್ವನ ಸ್ವರ್ಗಕ್ಕಾಗಿ ಇನ್ನೊರ್ವನಿಗೆ ರವರವ ನರಕ! ಇಂತಿದೆ ಇಲ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...