
ಸೊಳ್ಳೆ ಕೊಂದಷ್ಟೇ ಸುಲಭದೊಳೆಮ್ಮೆಲ್ಲ ಶ್ರಮ ಸಂಸ್ಕೃತಿಯ ಕೊಂದು ಬರಿದೆ ಪೇಳಿದೊಡೇನು ? ಪರಿ ಸರವನುಳಿಸೆಂದು ಜೂನೈದರಂದು ಹಸುರ ಕ್ಷರದೊಳೆಲ್ಲ ಪತ್ರಿಕೆಯ ಬ್ಯಾಟಿಂಗಿನಿಂದೇನು ? ಸೊಳ್ಳೆ ಬೆಳೆವ ಕೊಳೆ ಜಾಹೀರನುಗಾಲ ಒಸರುತಿರೆ – ವಿಜ್ಞಾನೇಶ್...
ದುಂದು ವೆಚ್ಚದೊಳುಂದುನ್ನತದ ರಸ್ತೆಯನು ಮಾಡಿದೊಡ ಲ್ಲೊಂದು ವೇಗ ತಡೆ ದಿಬ್ಬಗಳಿರ್‍ಪಂತೆ ಎಮ್ಮೊ ಳಿಂದಾ ಪರಿಸರದ ಪಾಠಗಳು ಭೋಗ ಬಾಳಿನೊಳು ಅಂತೆ ರಸ್ತೆಯವಗಢದ ಲೆಕ್ಕವತ್ತೆಡೆಗಿರಲಿ ದುಂದು ರಸ್ತೆಯೊಳಾದ ಪರಿಸರದಾಘಾತವೆಣಿಕೆಗೆ ಬರಲಿ – ವಿಜ್ಞ...
ಅಲಲಾ ನಿಸರ್‍ಗ ತಾನೊಲಿದಿತ್ತ ಅನುಕೂಲ ಗಳನೊಲ್ಲದೆ ಆಕ್ರಮಣದಿಂದೇನೆಲ್ಲ ಭೋಗಗಳ ನೆಳೆದು ಸೇರಿಸುತಿರಲೆಲ್ಲೆಲ್ಲೂ ಬರಿ ವೈರಿ ಗಳವರ ಸೋಲಿಸಲನುದಿನವು ಯುದ್ಧ ಸಿದ್ಧತೆ ಯೊಳಾರಿಂಗು ನಿದ್ರಿಸಲಿಲ್ಲಿಲ್ಲ ಪುರುಸೊತ್ತು – ವಿಜ್ಞಾನೇಶ್ವರಾ *****...
ಮನದ ಮೌನದೊಳರಳ್ವ ಕವನವೆಮ್ಮನು ಮೌನದ ವನ ಕಾನನಕೊಯ್ಯಲು ಬೇಕು ಮನ, ಜನ, ವಾಹನ, ಯಂತ್ರದೊಳೊಂದಷ್ಟು ಮೌನ ಮರಳಿದರಾಗ ಪ್ರಕೃತಿ ಗಾನವೇ ವನ, ಕವನ, ಜೀವನದೊಳಿಕ್ಕು – ವಿಜ್ಞಾನೇಶ್ವರಾ *****...
ಸುಮ್ಮನಾಲೋಚಿಸಿರಿ ನೀವೊಂದು ಸ್ಥಿತಿಯ ಎಮ್ಮ ಬಂಡಿಯ ಚಕ್ರ ಚೌಕವಾದೊಡದರ ಗತಿಯ ಗಮ್ಮತಿನ ಪಟ್ಟಣಕು ವಾಹನಕು ಹೊಂದಲಿಕೆಂ ದೆಮ್ಮ ಪ್ರಗತಿ ಪಥ ನೈಸಾಗುತಿರುವಂತೆ ಎಮ್ಮ ಪ್ರಕೃತಿ ರಥ ಚಕ್ರಗಳೊಂದೊಂದೆ ಚೌಕಾಗುತ್ತಿದೆ – ವಿಜ್ಞಾನೇಶ್ವರಾ *****...
ತುಸು ಹಿಂದೆ ಪೋದರಂದೆಲ್ಲರವರವರ ಕೆ ಲಸಗಳನವರವರೆ ನೂರಕೆಪ್ಪತ್ತು ಮಾಡುತಲಿರಲಾ ಪ ರಿಸರದೊಳುಳಿದಿತ್ತು ನೂರಕೆಪ್ಪತ್ತು ಕಾಡು ಹೊಸತೊಂದಧ್ಯಯನ ಶಾಖೆ ಇಹುದಿಂದು ಪರಿಸರವನು ಳಿಸಲಿಕೆಂದು ಸ್ವಾವಲಂಬನೆಯು ಶೂನ್ಯಕಿಳಿದಿರಲು – ವಿಜ್ಞಾನೇಶ್ವರಾ *...
ಚಕ್ರವರ್‍ತಿಯನೊಪ್ಪಿ ಕಪ್ಪವನಿತ್ತೊಡೆ ಬ ದುಕಿಗದಾವ ತೊಂದರೆಯಿಲ್ಲ ಸಾಮಂತನಿಗೆ ಪ್ರಕೃತಿ ತಾನನಿವಾರ್‍ಯದದ್ಭುತದನಂತದ ಚಕ್ರವರ್‍ತಿಯಿರಲಿದಕೆ ಮಣಿದೊಂದಿಷ್ಟು ಬೆವರ ನಿಕ್ಕುವುದಾರಧ್ಯವೆಮ್ಮ ಬದುಕಿನ ರಕ್ಷಣೆಗೆ – ವಿಜ್ಞಾನೇಶ್ವರಾ *****...
ಹುಲಿಯೊಂದು ಹಸುವನು ಕೊಂದು ತಿಂದೊಡದು ತ ಪ್ಪಲ್ಲವದರಂತೆ, ಎಮ್ಮ ಬದುಕಿನ ಬೇಕು ಬಯಕೆ ಗಳಿಗೊಂದಷ್ಟು ಮರನ ತರಿದೊಡೆ, ಮನೆಯ ನೆಳಸಿದೊಡೆ ತಪ್ಪಿಲ್ಲವಾದೊಡಂ, ವ್ಯಾಘ್ರ ವನ ಸಮ ತೋಲಕಿಂತಧಿಕ ಧನಧಾನ್ಯಕಿಲ್ಲಿ ಸೊಪ್ಪಿಲ್ಲ – ವಿಜ್ಞಾನೇಶ್ವರಾ ***...
ಪರಿಪರಿಯ ಕೈಚೀಲ, ಸೋಲಾರು, ಕಾಂಕ್‌ವುಡ್‌ಗಳೆಂದೆಂಬ ಬರಿ ಮುಖವಾಡಗಳಿಂದೆಂತು ಪರಿಸರವ ರಕ್ಷಿಪುದು ? ಪರಿಪರಿಯೊಳುಂಬನ್ನವನು ದುಡಿಮೆಯೊಳಲ್ಲಲ್ಲೇ ಗಳಿಸಿದರೆ ಬೇಕಿಲ್ಲ ಕೈ ಚೀಲ, ಸಾಕಲ್ಲ ಬರಿ ಸೂರ್‍ಯ ಇರುಳೊಳೆಲ್ಲರೊರಗಿದರೆ ಮರವಿಕ್ಕು ಮನೆಗಕ್ಕು &#...
ಬೆಳೆದೊಡೆಮ್ಮ ಕೈಯುಗುರ ತೆಗೆವಂತೆಮ್ಮ ಬಾಳಿನನುಕೂಲಕಪ್ಪಷ್ಟು ಪ್ರಕೃತಿಯ ಬೋಳಿಸಲವಕಾಶವೆಮಗಿಹುದು ಬಲು ಸರಳವಿದೆಮ್ಮನ್ನವನು ಕೈ ಮುಟ್ಟಿ ಬೆಳೆದೊಡೆಮ್ಮುಗುರು ತಾನೆ ಸವೆಯುವುದು – ವಿಜ್ಞಾನೇಶ್ವರಾ *****...














