ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?
ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ – ವಿಜ್ಞಾನೇಶ್ವರಾ […]
ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ – ವಿಜ್ಞಾನೇಶ್ವರಾ […]
ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ […]
ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ […]
ಜಾಬೆಂಬಾಗ್ಲ ಪದಕೆಮ್ಮ ಉದ್ಯೋಗವೆಂಬುದೆಂದೆಂದುಂ ಬದಲಿ ಪದವಲ್ಲವಿದರರ್ಥದೌನ್ನತ್ಯವದಕಿಲ್ಲ ಜಾಬೆಂದರೆಮ್ಮ ಪ್ರಕೃತಿಯನರ್ಥ ಲಾಭಕೊಳಪಡಿಸುವುದು ಉದ್ಯೋಗದೊಳೆಮ್ಮ ಬುದ್ಧಿ ಮೈ ಮನಗಳನ್ನದೊಳೊಂದಾಗಿ ಲಾಭದರ್‍ಥವನುನ್ನತದ ಕೃಷಿಗೇರಿಪುದು – ವಿಜ್ಞಾನೇಶ್ವರಾ *****
ಆರಣ್ಯಿಕವೆಮ್ಮ ಸಂಸ್ಕೃತಿಯು ಕಾಡೊಳ ಗರಿತು ಬದುಕುವ ಕಲೆಯು. ಕಾಡ ಕಳೆಗಳೆಡೆಯಲ್ಲಿ ಆರಂಭ ಎನುತಷ್ಟಿಷ್ಟು ಕಳೆಯ ಕೀಳುವ ಕಲೆಯು ಬರ ಬರುತಾರಂಭವೀ ಪರಿವೇಷದೊಳಂತ್ಯವನು ದೂರಿಡಲೆಳಸುವಾಸ್ಪತ್ರೆವೊಲ್ ದುಬಾರಿಯಾಯ್ತಲಾ – ವಿಜ್ಞಾನೇಶ್ವರಾ […]
ಸ್ವಂತ ಕೃಷಿ ಸಂಬಂಧದುದ್ಯೋಗ ಗೌರವಕ್ಕೆ ಕುಂದೆಂದು ಬಂದಿಹುದನೇಕ ಬೂಟು ಕೋಟಿನುದ್ಯೋಗಗ ಳಿಂದವರಿವರ ಕುಂತಲ್ಲೇ ದುಡಿಸಲಿಕೆ ತುಂಬ ಸಂಬಳವಿದಕೆ ಮೇಲಧಿಕ ಗೌರವಾರೈಕೆ ಕುಂತಲ್ಲೇ ಸಂಶೋಧನೆಗಳನ್ನ ಬಂದುದುರಲಿಕೆ – ವಿಜ್ಞಾನೇಶ್ವರಾ […]
ಒಪ್ಪವೀ ಜಗವು ಇಲ್ಲಿರ್‍ಪೆಲ್ಲ ಜೀವಿಯುಂ ತಪ್ಪದೀ ಜಗದ ನಿಯಮದೊಳನ್ನ ಪಡೆಯು ತಿರ್‍ಪುದಿದನು ಕಂಡಾದಿ ಋಷಿಗಳುಸುರಿದ ವೇದ ವೊಪ್ಪುವ ಕೃಷಿಯ ಮೀರಿರಲೆಲ್ಲೆಡೆಗಲ್ಲೋಲಕಲ್ಲೋಲ ತಪ್ಪನಿನ್ನೊಂದು ತಪ್ಪಿನಲಿ ತಿದ್ದುವುದ್ಯೋಗಕಿದು ಕಾಲವಾಯ್ತಲಾ – […]
ಸ್ವಂತದುದ್ಯೋಗ, ಮಡದಿ, ಮನೆ, ಮಕ್ಕಳೆನ್ನುತಲೊಂದು ಸುಖದ ಕೋಟೆಯ ಬಲಿವವಸರದೊಳೊಂದಷ್ಟು ಸಾವಯವ ಮೊಹರಿನನ್ನವನು ಕೊಂಡೊಡೇನಕ್ಕು? ಸಾವಯವವೆಂದೊಡದು ಬರಿ ಯಕ್ಷಿಣಿಯ ಹಣ್ಣಕ್ಕು ಸುಮ್ಮನಷ್ಟು ಹೊತ್ತಿನೊಳೊಂದಷ್ಟು ಭ್ರಾಮಕದ ಮಜವಿಕ್ಕು – ವಿಜ್ಞಾನೇಶ್ವರಾ […]
ನಾವೇನೆ ಮಾಡಿದೊಡದು ನಿರ್ಜೀವವಿರುತಿಲ್ ಜೀವ ಜಗವನಂತಿಮದಿ ಕೆಡಿಸುತಿರಲ್ ಸಾವಯವವೆನದಿನ್ನು ಅನ್ಯ ದಾರಿಗಳಿಲ್ಲ ಸಾವಯವವೆಂದೊಡದು ಕೊಂಡು ತಿನ್ನುವುದಲ್ಲ ಅವಯವಗಳೆಮ್ಮದಮಗಾಗಿ ದುಡಿವ ಬಲ – ವಿಜ್ಞಾನೇಶ್ವರಾ *****
ಪ್ರಕೃತಿ ಪರವಾಗದೊಡಿತ್ತ ಅಧ್ಯಾತ್ಮ ತತ್ತ್ವಜ್ಞಾನವೆಂದೊಡಂ ಸೊಕ್ಕಿನೊಳತ್ತ ವಿಜ್ಞಾನವೆಂದೊಡಂ ಏನು ಪುರುಷಾರ್ಥ? ಪ್ರಕೃತಿಪರ ಜೀವನಕಿರ್‍ಪುದದೊಂದೆ ಕೃಷಿ ಕ್ಷೇತ್ರ ಯುಕ್ತದೊಳನ್ನಾರೋಗ್ಯ ಐಶ್ವರ್‍ಯವಾರಾಮ ಇಲ್ಲಿಹುದು ಎಕ್ಕಸಕ್ಕವಾಗದಂದದೊಳಿಲ್ಲಿ ವಿಜ್ಞಾನವಾಧ್ಯಾತ್ಮ ಬೆರೆಯುವುದು – ವಿಜ್ಞಾನೇಶ್ವರಾ […]