ಹರಿಶ್ಚಂದ್ರ ರಾಜ್ಯವಿಯೋಗ

(ಮತ್ತೇಭ ವಿಕ್ರೀಡಿತ) ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ| ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ| ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ| ಕಡುಗಲ್ತೀವಿದರಣ್ಯಮಂ ಪುಗಿಸಿದಂ - ಕೈಗೂಡಿಸಲ್ ಪಂತವಂ ||೧||...

ಹೊಲೆಯನ ಹಾಡು

ಉಳ್ಳಯ್ಯಾ, ದಯೆ ಗೊಳ್ಳಯ್ಯಾ! "ದಟ್ಟಿದಿಕ್ಕಾ! ಮಾರಿ, ಮುಂಡ, ಮುಂಡಾಳ! ಹುಟ್ಟು ಹೊಲೆಯ! ಪೋಲಾ! ಚಂಡ ಚಂಡಾಳ! ಬೊಟ್ಟೆ! ಬೊಗ್ಗುರೆ!" ಎಂದು ಹೆಸರೆತ್ತಿ ಕೂಗಿ ಮುಟ್ಟಲಂಜುತೆ ನಿಲ್ವೆ ದೂರಕ್ಕೆ ಹೋಗಿ! ಕಣ್ಣು, ಮೂಗು, ಕಿವಿ, ಕೈ,...

ಉತ್ತಮ ರಾಜ್ಯ

"ಕಂದ, ಕೇಳುತ್ತಮದ ರಾಜ್ಯ ಒಂದಿಹುದು: ಮಂದಿ ಎಲ್ಲವು ಸುಖದಿ ಬಾಳುತ್ತಲಿಹುದು;" ಎಂದು ನೀನಾಡುವಾ ರಾಜ್ಯವೆಲ್ಲಿಹುದು? ಕಂದನಲಿ ಕರುಣಿಸುತ ಇಂದು ತಿಳಿಸಮ್ಮಾ! "ಕಿತ್ತಳೆಯ ಮರಗಳಲಿ ಹೂಗಳರಳುತ್ತ ಎತ್ತಲೂ ಮಿಂಚುಹುಳು ಚಿಮ್ಮಿ ಕುಣಿಯುತ್ತ, ಮುತ್ತಿಕೊಂಡಿಹ ದೇಶದೊಳಗಿಹುದೆ ತಾಯೆ!"...

ಶೋಕ ಗೀತೆ

ಹೋದುದಲ್ಲಾ! ಎಲ್ಲಾ ಹೋದುದಲ್ಲಾ! ಹೋದುದೆಲ್ಲವು ಕಣ್ಣ ಹಿಂದೆ ಖೇದವಿನ್ನೆನಗುಳಿದುದೊಂದೆ ಹೇ ದಯಾನಿಧೆ! ಪ್ರೇಮದಿಂದೆ ಹಾದಿ ತೋರಿಸಿ ನಡಿಸು ಮುಂದೆ ಹೋದುದಲ್ಲಾ, ಎಲ್ಲಾ ಹೋದುದಲ್ಲಾ. ತೊಡೆಯ ತೊಟ್ಟಿಲೊಳೆನ್ನನಿಟ್ಟು, ಕುಡಿಸಿ ಮಮತೆಯ ಗುಣವ ನೆಟ್ಟು, ಬಿಡದೆ ವಿದ್ಯೆಯ...

ಚಿಕ್ಕಂದಿನ ನೆನಪುಗಳು

ಚಿಕ್ಕ ಶಿಶುವಾಗಿದ್ದ ಕಾಲವಿತ್ತೊಂದು; ಲೆಕ್ಕಿಸಲ್ಕೊಡಲಿತ್ತು ಅಡಿ ಎರಡು ಒಂದು; ಫಕ್ಕನಾ ಸ್ಮರಣೆಗೊಸರುವುದಶ್ರು ಬಿಂದು; ಮಿಕ್ಕ ನೆನಹುಗಳು ಕೊಡವಾ ತೋಷವೆಂದೂ. ಅಂದು ಅಮ್ಮನ ಕಂಕುಳಲಿ ಆಡುತಿದ್ದೆ; ಅಂದು ಅಪ್ಪನ ಕಾಲ ಕುದುರೆ ಮಾಡಿದ್ದೆ ಅಂದು ಪಾಠವು...

ಬಾಲ್ಯ ಸ್ಮರಣೆ

ಧ್ವನಿಸಿ ಬಯಲಾಗುತಿಹ ಸುರಗಾನದಂತೆ, ಕನಸಿನಲಿ ಗೈದಿರುವಮೃತ ಪಾನದಂತೆ, ವನಧಿಯಡಿಯಿಂದೆದ್ದಳಿವ ಫೇನದಂತೆ, ಜನಿಸಿ ಬಾಲ್ಯಸ್ಮರಣೆ ಬೆಳಗಿಪುದು ಮನವಾ. ಮುದಿತಂದೆ ಎಲುಬುಗೂಡಿನ ಬೆನ್ನನೇರಿ, ತೊದಲುಲಿಯ ಚುರುಕಿಂದ ಚಪ್ಪರಿಸಿ ಚೀರಿ, ಕುದುರೆಯಾಟವಗೈದ ನೆನಪೊಂದು ಬಾರಿ, ಉದಿಸಲಿಂದೀವುದೀ ಎದೆಗೆ ಚಂದನವಾ....

ಜೇನು ಹುಳು

ಹಸನು ಗೂಡನು, ಮಯಣಬೀಡನು ಎಸೆವ ಹುಳುಗಳ ನೋಡೆಲೊ. ಬಿಸಿಲು ಕಾಲದೆ, ಗೇದು ಸೋಲದೆ, ಒಸೆಯುತಿವೆ ಎಚ್ಚರದಲಿ. ಹುಳಕೆ ದೇವನು ಬುದ್ಧಿ ಈವನು ಕೆಲಸ ಹುಳು ಸರಿಗೈವುದು; ಚೆಲುವ ಗೂಡನು ನರನು ಮಾಡನು ಹುಳುವು ಕಟ್ಟಿದ...

ನಕ್ಷತ್ರ

ಮಿನುಗೆಲೆ, ಮಿನುಗೆಲೆ, ನಕ್ಷತ್ರ! ನನಗಿದು ಚೋದ್ಯವು ಬಹು ಚಿತ್ರ! ಘನ ಗಗನದಿ ಬಲು ದೂರದಲಿ ಮಿನುಗುವೆ ವಜ್ರಾಕಾರದಲಿ. ತೊಳಗುವ ಸೂರ್ಯನು ಮುಳುಗುತಲೆ, ಬೆಳಕದು ಕಾಣದು ಕಳೆಯುತ್ತಲೆ, ಹೊಳಪದು ಕೊಡುತಿಹೆ ನನಗಂದು; ತಳತಳಿಸುವೆ ಇರುಳಲಿ ನಿಂದು,...

ನದಿ

"ಎಲ್ಲಿಂದ ಬರುತಿಯೆ? ನೀರನ್ನು ತರುತಿಯೆ? ಒಳ್ಳೇದಾಗಿರುತೀಯೆ, ನೀನು? ಎಲ್ಲಿಗೆ ಹೋಗುವೆ? ನೀರನ್ನು ಸಾಗುವೆ? ಕಡೆಗೆ ಏನಾಗುವ, ನೀನು?" "ಬೆಟ್ಟದಾ ಹೊಡೆಯಲ್ಲಿ ಹುಟ್ಟಿದ ಹನಿಯಾಗಿ; ತೊಟ್ಟಾದೆ ತಟುಕಾದೆ, ನಾನು. ಬೆಟ್ಟಾದೆ, ಬೆರಳಾದೆ, ತೋಳಾದ, ತೊಡೆಯಾದೆ, ಪುಟ್ಟ...

ಸೂರ್‍ಯ

ಇಂಬಾಗಿ ನಗುನಗುವ ಮುಂಬಿಸಿಲ ಮೋರೆಯಲಿ, ಅಂಬುಜ ಸಖಂ ಬಂದನಂಬರದಲಿ, ತುಂಬಿದ್ದ ಬಲು ಕತ್ತಲೆಂಬ ಕಂಬಳಿ ಕಳಚಿ ಚೆಂಬೆಳಕ ಹಾಸಿನಿಂದುಪ್ಪವಡಿಸಿ. ಸಂಜೆ ನಿದ್ದೆಯನುಳಿದು ರಂಜಿಸುವ ಮೊಗ್ಗುಗಳು ಮಂಜಿಡಿದ ತುಟಿ ತೆರೆದು ನೋಡುತಿಹವು; ಕಂಜಾಪ್ತ! ನಿನ್ನನೀ ಮುಂಜಾನೆ...