ಉಮರನ ಒಸಗೆ – ೫೧

ಇನ್ನೊರ್‍ವನಿಂತೆಂದನ್ : "ಈ ನೆಲದ ಮಣ್ಣಿಂದೆ ಎನ್ನೊಡಲನಿಂತೆಸಗಿ ಸೊಗಸುಗೊಳಿಸಿದವಂ ಮರಳಿ ಮಣ್ಣೊಳಗೆನ್ನ ಬೆರೆವಂತೆ ಮಾಡಿದೊಡೆ ಅಚ್ಚರಿಯದೇನದರೊಳದೆ ತಕ್ಕುದಲ್ತೆ?" *****

ಉಮರನ ಒಸಗೆ – ೪೯

ಕೇಳು ರಂಜಾನ್ ಹಬ್ಬದಂತ್ಯದೊಳದೊಂದು ದಿನ, ಶುಭ ಚಂದ್ರನಿನ್ನು ಮುದಿಸದಿರೆ, ಸಂಜೆಯಲಿ ನಾನೋರ್‍ವ ಕುಂಬಾರನಂಗಡಿಯ ಬಳಿ ನಿಂತು ಮಣ್ಣ ಮಾಟಗಳ ಸಾಲ್ಗಳ ನೋಡುತಿರ್‍ದೆಂ. *****

ಉಮರನ ಒಸಗೆ – ೪೭

ಹಳ್ಳಕೊಳ್ಳಗಳಿಂದೆ-ಕಳ್ಳು ಹೆಂಡಗಳಿಂದೆ- ಎನ್ನ ಹಾದಿಯೊಳೆಡವಿಬೀಳಿಸುವ ಬಿದಿಯೆ, ನೀನೆನ್ನ ಮೇಲೆ ದುರಿತದ ಹೊರೆಯ ಹೊರಿಸಿಂತು ಕರುಮ ಚಕ್ರದೊಳೆನ್ನ ಸಿಲುಕಿಪುದು ತರವೆ? *****

ಉಮರನ ಒಸಗೆ – ೪೪

ನಿಲದೆ ಚಲಿಸುವ ಬೆರಲದೊಂದು ಬರೆವುದು ಶಿರದಿ; ಬರೆದು ಸರಿವುದು. ನಮ್ಮ ಬಕುತಿ ಯುಕುತಿಗಳು ಪಿಂತದನು ಕರೆದಳಿಸಲಾರವರೆ ಬಂತಿಯನು; ನಿನ್ನ ಕಣ್ಣೀರೊಂದು ಮಾತನಳಿಯಿಸದು. *****

ಉಮರನ ಒಸಗೆ – ೪೨

ಪಗಲಿರುಳ್ಗಳೆನಿಪ್ಪ ಪಗಡೆಹಾಸನು ಹಾಸಿ ಮಾನಿಸರ ಕಾಯ್ಗಳವೊಲಲ್ಲಿರಿಸಿ ಬಿದಿ ತಾ ನಿಲ್ಲಲ್ಲಿ ನಿಲ್ಲಿಸುತ ಚಾಲಿಸುತ ಕೊಲ್ಲಿಸುತ ಲಾಟವಾಡುತ ಬಳಿಕ ಪೆಟ್ಟಿಗೆಯೊಳಿಡುವಂ. *****