ಇಲ್ಲಿ ತಂದ ಸಂಕಲ್ಪ ಬರಿ ವಿಕಲ್ಪವಾಯಿತೆ? ಅಂದು ನುಡಿದ ಬೀರನುಡಿಯದಿಂದು ಜಲ್ಪವಾಯಿತೆ? ಜಲಧಿಯಾಚೆ ಕರೆದು ತಂದ ದೈವ ಕೈಯ್ಯ ಬಿಟ್ಟಿತೆ? ದುರ್‍ದೈವವು ಬಿಟ್ಟ ಬಾಣ ಮರೆ-ಮೋಸದಿ ನಟ್ಟಿತೆ? ಎದೆಯ ಮುಗುಳ ಮುಟ್ಟಿತೆ? ಹಾತೊರೆಯಲಿಲ್ಲ ನಾನು ಹ೦ಸತಲ್ಪದಂದಕೆ. ಬಾಯ್ದೆರೆದು ನಿಲ್ಲಲಿಲ್ಲ ಬೆಳ್ಚಸದಾನಂದಕೆ. ಕನ್ನಡಿತಿಯ...

ಮೂಲ: ಉರ್ಸುಲಾ ಕೋಸಿಯೋಲ್ (ಪೋಲಿಷ್ ಕವಿ) ಕಪ್ಪು ಕತ್ತಲೆ ಮಿಂಚು ತೊಟ್ಟಿಲಲ್ಲೊಬ್ಬ ಪುಟ್ಟ ಮನುಷ್ಯ ‘ಹೆಂಗಸರ ಚಪ್ಪಲಿ’ ಎಂಬ ಹೂವಿಗಿಂತಲು ದಪ್ಪ ತನ್ನ ಕಾಲ ಹೆಬ್ಬೆಟ್ಟನ್ನು ಚೀಪುತ್ತಿದ್ದ ಸುಖಗಳಿಗೆ ಅನಂತತ್ವವನ್ನು ಟಿಕ್ ಟಿಕಿಸುತ್...

ಸಂಗಪ್ಪ ಇಷ್ಟೆಲ್ಲ ಮಾಡ್ತಿರುವಾಗ ನಿಮ್ಮ ರಾಜೇಂದ್ರನ ಬಳಗ ಎಲ್ಲಿ ಹೋಯ್ತು ಲೇಖಕರೆ ಅಂತ ನೀವು ಪ್ರಶ್ನೆ ಹಾಕಬಹುದು; ಜೊತೆಗೆ ಅವರಿಗೆ ನಿಮ್ಮ ಈ ಬರವಣಿಗೇಲಿ ಸಂಗಪ್ಪನಷ್ಟೂ ಅವಕಾಶ ಇಲ್ಲ ಅಂತಲೂ ನೀವು ಕೇಳಬಹುದು. ನಿಮ್ಮ ಎರಡು ಪ್ರಶ್ನೆಗಳೂ ಪ್ರಾಮಾಣ...

ಕಹಿ! ಕಹಿ! ಕಪ್ಪು ಕಪ್ಪು! ಉಪ್ಪುಪ್ಪು ನಿನ್ನ ನೀರು ಓ! ಸಮುದ್ರ! ನಿನ್ನ ನೀರು ಉಪ್ಪಾದುದೇಕೆ? ಮೂರು ಲೋಕದ ನೀರು ಮುಪ್ಪುರಿಗೊಂಡು ಉಪ್ಪಾಯಿತೇನು! ಮಾವಿನಕಾಯಿಯೊಲು ಮಾನವಜಾತಿಯ ಭೂತಚೇಷ್ಟೆಗಳನು-ಪೂರ್ವೇತಿಹಾಸವನು- ನೆಲದಣುಗರು ನೆನೆಯಲೆಂದು ಕಾಲಪ...

ಶಬ್ದ ಸಾಲದು ತಂದೆ ನಿಮ್ಮ ಪ್ರೀತಿಯ ಮುಂದೆ ಪಂಚಗುರುಗಳ ಗಾನ ಗುರುಸ೦ಗಮಾ ಗಗನ ಸಾಲದು ಗುರುವೆ ಕಡಲು ಸಾಲದು ಗುರುವೆ ಪರಮ ಪ೦ಚಾಚಾರ್ಯ ಶಿವಸಂಗಮಾ ।। ಕಮಲ ಮಲ್ಲಿಗೆ ನೀವೆ ವಿಮಲ ಸಂಪಿಗೆ ನೀವೆ ಹೂವಿಗಿಂತಲು ಹೂವು ನಿಮ್ಮಮಿಲನ ಲಿಂಗದೊಲವೇ ಒಲವು ಲಿಂಗ...

ಗುರುವಿಂಗೆ ಗುರುವಿಲ್ಲ ಲಿಂಗಕ್ಕೆ ಲಿಂಗವಿಲ್ಲ ಜಂಗಮಕ್ಕೆ ಜಂಗಮವಿಲ್ಲ ನನಗೆ ನಾನಿಲ್ಲ ಕಣ್ದೆರೆದು ನೋಡುವಡೆ ಆರಿಗೆ ಆರೂ ಇಲ್ಲ ಕಪಿಲಸಿದ್ಧಮಲ್ಲಿಕಾರ್ಜುನಾ ಸಿದ್ಧರಾಮನ ವಚನ ಇದು. ಮಾದರಿಗಳನ್ನು ಅನುಸರಿಸುವವರು ಹೇಳಹೆಸರಿಲ್ಲದಾಗುತ್ತಾರೆ. ಏಸು ಕ್...

ಯಾರ ದಾರಿಯ ಕಾಯುತಿರುವೆನು ಯಾರ ಬರವಿಗೆ ನವೆಯುತಿಹೆನೊ? ||ಪ|| ಹೃದಯ ವೀಣೆಯು ಯಾವ ಕೊರಗಿನ ಚಳಿಯ ಬೆರಳಿಗೆ ನಡುಗುತಿದೆಯೊ? ||ಅ.ಪ.|| ಬೆಳಕು ಬೆಳೆಯಲು ಎದೆಯನರಳಿಸಿ ಅರುಣ ಕಿರಣದ ಮುದ್ದನಾಶಿಸಿ ಪಕಳಿ ಮೊಗವನ್ನೆತ್ತಿ ನಿಂತಿಹ ಹೂವ ಕಾಣಲು, ಯಾರನೋ...

-ಬೇಡಿ ಮಾಡುವದೇನು? ಬಂದಂದು, ಬಾ, ನೀನು ಹಿಗ್ಗಿನಿಂಗಡಲ ಮನೆಯೇ! ಬಾಡೇನು! ಎಂದೆಂದು ಆರದಿರು, ಹಾರದಿರು ಕಾಡಹೂ ಜೇನ ಹನಿಯೇ! ಹೆಣಗಿ ಮಾಡುವದೇನು? ದೊರೆವಂದು ದೊರೆ ನೀನು ಕನಿಯ ಬಿಳಿ ಹರಳಗಣಿಯೇ! ಒಣಗೇನು! ಎಂದೆಂದು ಉರುಳದಿರು, ತೆರಳದಿರು ಬಡ ಹುಲ...

ಒಮ್ಮೆ ಒಂದು ಕಲ್ಲು ಬಂಡೆಯ ಪಕ್ಕದಲ್ಲಿ ಬೆಳೆದ ಹುಲ್ಲುಗರಿಗೆ, ಕಲ್ಲು ಬಂಡೆಯ ಮೇಲೆ ಪ್ರೇಮ ಅಂಕುರಿಸಿತು. ಹುಲ್ಲಿನ ಗರಿ ಗಾಳಿ ಬಂದ ನೆಪದಲ್ಲಿ ಕಲ್ಲು ಬಂಡೆಯ ಎದೆಯನ್ನು ಬಾಗಿತಾಗಿ, ತನ್ನ ಪ್ರೀತಿ ತೋರುತ್ತಿತ್ತು. ಹಸಿರು ಹುಲ್ಲಿನಲ್ಲಿ ಪ್ರೀತಿ ಉ...

ಎಲ್ಲ ಬೀಜಗಳಲ್ಲದಿರಬಹುದೆಮ್ಮ ರಟ್ಟೆಯ ಬಲಕಪ್ಪ ಹಿಟ್ಟಲ್ಲದೊಡಂ ಎಲ್ಲದಕು ಹುಟ್ಟುವಾ ಮೂಲಗುಣವುಂಟದನು ಜಾಣ್ಮೆಯೊಳು ಬಳಸಿದೊ ಡಲ್ಲೊಂದು ಹಸುರು ಬೆಳೆದೀತದುವೆ ಜೀವ ಜಲವನುಳಿಸೀತು ಬರವನಳಿಸೀತು – ವಿಜ್ಞಾನೇಶ್ವರಾ *****...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...