ಯಾರಿವರು?

ಎಲ್ಲೋ ನೋಡಿದ್ದೇನೆ ಇವರನ್ನು ಕೇಳಿದ್ದೇನೆ ಮಾತುಗಳನ್ನು ಯಾರಿವರು? ಅಟ್ಟದಿಂದ ಬೆಟ್ಟಕ್ಕೆ ಏರಿಸಿ ಧೊಪ್ಪನೆ ಕೆಡುವವರು ಕಂಬಿ ಇಲ್ಲದೆ ರೈಲು ಬಿಡುವ ಅತಿ ಮಾನುಷರು. ಮಾತಿನಲ್ಲೇ ಮನೆ ಕಟ್ಟಿ ಮಾತಿನಲ್ಲೇ ಹೊಟ್ಟೆ ಬಟ್ಟೆ ಮಾತಿನಲ್ಲೇ ಸ್ವರ್ಗ...

ನಾವು

ಕಣ್ಣಲ್ಲಿ ನೀರು ತುಂಬಿ ತುಟಿಯಲ್ಲಿ ನಗು ಅರಳಿಸುತ್ತೇವೆ ನಾವು ನಗುನಗುತ್ತಾ ಅಳುತ್ತೇವೆ. ಅಳು ಮುಚ್ಚಿ ನೋವು ಮರೆಸಿ ನಗುನಗುತ್ತಾ ಬೆರೆಯುತ್ತೇವೆ. ಹೊರಜಗತ್ತಿಗೆ ಸದಾ ಸುಖಿಗಳು ನಾವು ನಗುನಗುತ್ತಲೇ ಇರುವ ಅದೃಷ್ಟಶಾಲಿಗಳು! ಗೃಹಲಕ್ಷ್ಮಿಗಳು. ದೂರದ ಬೆಟ್ಟ...

ಸಂಕ್ರಮಣ ಕಾಲ

ಬದಲಾಗಿದೆ ಕಾಲ ಸೂಕ್ಷ್ಮಾತಿಸೂಕ್ಷ್ಮ ಸಂಕ್ರಮಣ ಕಾಲ ಅಡಿಯಿಡುವ ಮುನ್ನ ನುಡಿ ಜಾರುವ ಮುನ್ನ ಎಚ್ಚರವಿರಲಿ ಹೂವೇ ಹಾವಾಗಿ ಪ್ರಕೃತಿ ವಿಕೃತಿಯಾಗಿ ಅಮೃತವೇ ವಿಷವಾಗಿ ಜೀವ ತೆಗೆಯಬಹುದು ಎಚ್ಚರವಿರಲಿ ಮಾತು ಮುತ್ತಾಗದೇ ಮೃತ್ಯುವಾಗಿ ನಗುವ ಬೆಳದಿಂಗಳು...

ಬಂಜೆ

ಹೊಸಕವಿತೆ ಬರೆಯ ಹೊರಟಾಗ ನನಗರಿವಾಯಿತು ನನ್ನೊಡಲು ಬರಿದಾಗಿದೆಯೆಂದು! ಹಳೆಯ ಕವಿತೆಗಳೆಲ್ಲ ಸತ್ತು ಹೋಗಿದ್ದವು ಹೊಸ ಹುಟ್ಟಿಗೆ ಜೀವ ಭಾವ ಕಾದುಕೊಂಡಿತ್ತು ಆದರೆ ಹೊಸ ಕವಿತೆ ಹುಟ್ಟಲಿಲ್ಲ! ಮನಸ್ಸು ಭಾವದ ಸಂಭೋಗವಾದರೂ ಹೊಸಹುಟ್ಟು ಉದಯಿಸಲಿಲ್ಲ. ಹೇಗೆ...

ಶೂನ್ಯ

ಒಂದೇ ಸಮನೆ ಸುರಿಯುತ್ತಿದೆ ಮಸಲಧಾರೆ. ಅಬ್ಬರವೇನು? ಆರ್ಭಟವೇನು? ಎಲ್ಲಿ ಅಡಗಿತ್ತೋ ಬೆಟ್ಟ ಗುಡ್ಡಗಳ ನಡುವೆ ಎಷ್ಟು ದಿನಗಳಾದವೋ ಕಾದು ಕುಳಿತ ಕಣ್ಣುಗಳು ಮಂಜಾಗಿ ಮರೆಯಾದವು ಯಾರು ದಬ್ಬಿದರೋ ಕಾಣೆ ದಿಢೀರನೆ ಬಿತ್ತು ಸುಮ್ಮನೆ ಬಂದರೆ...

ಜೀವನ ಚಿತ್ತಾರ

ನಾನು ಚಿತ್ರಿಕನಲ್ಲ ಆದರೂ ಬಾಳಿನೊಂದು ಹಾಳೆಯಲಿ ಚಿತ್ತಾರ ಬರೆಯ ಬಯಸಿದೆ. ನನ್ನ ಬೆರಳುಗಳಲ್ಲಿ ರೇಖೆಗಳನ್ನೆಳೆಯುವ ಕಸುವಿಲ್ಲ ಕುಸುರಿ ಕೆಲಸದ ಚತುರತೆಯಿಲ್ ಬಣ್ಣಗಳ ಬಾಂಡಲಿಯೂ ನನ್ನಲ್ಲಿಲ್ಲ. ಆದರೂ ಆಸೆ - ಬಾಳ ಕೊನೆಯ ಸಂಪುಟದ ಒಂದು...

ನಿಗೂಢ

ಏನಿದು? ಮಾಯೆ ಸೃಷ್ಠಿಯ ಛಾಯೆ ಎಲ್ಲಿಂದ ಎಲ್ಲಿಯವರೆಗೆ ಹರಡಿದೆ ಜಗತ್ತಿನ ಛಾಯೆ ಯಾರಾತ? ಎಲ್ಲಿಡಗಿಹನಾತ? ಸೃಷ್ಠಿಯ ರಹಸ್ಯವ ತಿಳಿಸದಾತ? ಕತ್ತೆತ್ತಿದರೆ ನೀಲಾಕಾಶ ಅಸಂಖ್ಯ ತಾರೆಗಳ ಇತಿಹಾಸ ಸೂರ್ಯ ಚಂದ್ರ ಗ್ರಹಗಳ ಪರಿವೇಷ ನದಿ ಸಾಗರ...

ಭಾರತೀಯ ಏಡಿಗಳು

ದಿನಾ ಪತ್ರಿಕೆ ಬಿಡಿಸಿದರೆ ಸಾಕು ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ; ಮನತುಂಬುವುದು ಆ ಕಥೆಯೊಳಗಿನ ವ್ಯಥೆ. ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು ಮೀನು ತುಂಬಿದ್ದ ಬುಟ್ಟಿಗಳ. ದೀರ್ಘ ಪ್ರಯಾಣ, ತೆರೆಗಳ ನಿರಂತರ...

ಮುಕ್ತಿಯ ತೀರ

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ...

ಭ್ರಮನಿರಸನ

ಸಪ್ತಪದಿಯ ತುಳಿಯುವಾಗ ನಾನೆಣಿಸಿದ್ದು ಅವನೂ ನನ್ನೊಡನೆ ತನ್ನ ಹೆಜ್ಜೆ ಸೇರಿಸಿದ್ದಾನೆಂದು! ನಾಲ್ಕು ಹೆಜ್ಜೆಗಳು ಸೇರಲಿಲ್ಲವೆಂದು ತಿಳಿದದ್ದು, ಭ್ರಮನಿರಸನವಾದದ್ದು ಸಂಸಾರದೊತ್ತಡಗಳು 'ಭಾರಿ' ಆದಾಗ! ಆಗಲೇ ತಿಳಿದದ್ದು ನನ್ನ ದಾರಿಯೇ ಬೇರೆ ಅವನ ದಾರಿಯೇ ಬೇರ ಒಂದಕ್ಕೊಂದು...