ಅಚ್ಚರಿಯ ನೋಟವದೇಕೆ
ನಿಟ್ಟುಸಿರ ಬಿಡುವಿರೇಕೆ
ಅರೆಗಳಿಗೆ ದಿಟ್ಟಿಸಿ ನೋಡಿರಿ
ಕಲಾವಿದನ ಕರಚಳಕದೆ
ಅವಿರ್ಭವಿಸಿದ ಕಲ್ಪನೆಯ ಚಿತ್ರವೇ
ದೇವನ ಸೃಷ್ಠಿಯ ವೈಚಿತ್ರವೇ
ಅಲ್ಲ ನಿಮ್ಮೆದುರು ನಿಂತಿರುವ
ನಾನೊಂದು ಬೋಳು ಮರ
ಗತ ಕಾಲದೆ ನಾನಾಗಿದ್ದೆ
ಫಲಭರಿತ ಸಂಪತ್ತಿನ ಆಗರ
ನನ್ನಡಿಯಲ್ಲಿ ನನ್ನೊಡಲಲ್ಲಿ
ಆಸರೆ ಪಡೆದ ಜೀವಿಗಳೆದೆಷ್ಟೋ
ಮುಗ್ಧ ಕಂದಮ್ಮಗಳು ನಕ್ಕು ನಲಿದು
ಕುಪ್ಪಳಿಸಿದ ದಿನಗಳೆಷ್ಟು,
ಅಶಾಂತಿಯಲಿ ಬೆಂದು ನೊಂದ
ಹೃದಯಗಳಿಗೆ ನೀಡಿದೆ ಸಾಂತ್ವನ
ನನ್ನುಸಿರ ಧಾರೆಯೆರೆದು
ನೀಡಿದೆ ಕ್ಷಣಕಾಲ ಚೇತನ
ಇಂದು ಸುಡು ಬಿಸಿಲು ಬಿರುಮಳೆಯಲಿ
ಕಾಲನಾಟದ ಆಟಿಕೆಯಾಗಿ
ಸ್ವಾರ್ಥ ಮಾನವನ ಕ್ರೌರ್ಯಕ್ಕೆ
ಸಾಕ್ಷಿಯಾಗಿ ಮೂಕವಾಗಿ
ಶೋಧಿಸುತಿಹೆನು ಏಕಾಂಗಿಯಾಗಿ.
*****
Related Post
ಸಣ್ಣ ಕತೆ
-
ಆ ರಾಮ!
ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…
-
ಇರುವುದೆಲ್ಲವ ಬಿಟ್ಟು
ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…
-
ಬಿರುಕು
ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…
-
ಆಪ್ತಮಿತ್ರ
ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…
-
ಏಡಿರಾಜ
ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…