ಸಹಜವಾಗಿದ್ದದ್ದು ಸರಿಯಾಗೂ ಇದ್ದೀತು

ಹೂ ಬಿಡುತ್ತದೆ ಹಣ್ಣುಕೊಡುತ್ತದೆ ಸಸ್ಯಶಾಸ್ತ್ರ ಓದದೆಯೇ ಮರ; ಮೊಟ್ಟೆಯಿಡುತ್ತದೆ ಮರಿ ಮಾಡುತ್ತದೆ ಜೀವಶಾಸ್ತ್ರ ಓದದೆಯೇ ಖಗ ವ್ಯಾಕರಣ ಯಾಕೆ, ಅಲಂಕಾರ ಬೇಕೆ ಮಾತಿನ ಮರ್ಮ ಬಲ್ಲ ವಾಗ್ಮಿಗೆ ? ವಾತ್ಸ್ಯಾಯನನ ಸೂತ್ರ ಪಾಠವಾಗಿರಬೇಕೆ ನಲ್ಲೆಗೆ...

ಸಂಜೆ

ಬಾನಂಗಣದಲ್ಲಿ ಮಲಗಿ ಉಸಿರೆಳೆಯುತ್ತಿದೆ ಹಗಲು. ರೋಗಿಯ ಸುತ್ತಮುತ್ತ ಮಿಕಿ ಮಿಕಿ ನೋಡುತ್ತ ತಲ್ಲಣಿಸಿ ಕಾಯುತ್ತಿವೆ ಕೆಂಪಗೆ ಹತ್ತಾರು ಪುಟ್ಟ ಮುಗಿಲು. ಬೆಳಗಿನ ಎಳೆಪಾಪ ಮಧ್ಯಾಹ್ನಕ್ಕೆ ಬೆಳೆದು, ಮಧ್ಯಾಹ್ನದ ಉರಿ ಪ್ರತಾಪ ಮುಸ್ತಂಜೆಗೆ ಕಳೆದು ಈಗ...

ಶರೀಫಜ್ಜನಿಗೆ

ಒಂದು ಧರ್ಮಕ್ಕೆ ಮೊಳೆತು ಇನ್ನೊಂದರಲಿ ಫಲಿತು ಸಾರ ಒಂದೇ ಎಂದು ಹಾಡಿದಾತ; ಹನಿಸೇರಿ ಹೊಳೆಯಾಗಿ ಗುರಿ ಸೇರಿ ಕಡಲಾಗಿ ನಭವೇರಿ ಮುಗಿಲಾಗಿ ಆಡಿದಾತ; ಹತ್ತು ವನಗಳ ಸುತ್ತಿ ಹೂ ಹೂವನೂ ಮುತ್ತಿ ಒಂದೆ ಜೇನಿನ...

ಕವಿ ಸೃಷ್ಟಿ

ಗಾಳ ಬೀಸಿ ಕೊಳಕ್ಕೆ ದಡದಲ್ಲಿ ಕಾಯುತ್ತ ಜೊಂಪಿನಲ್ಲಿರುವ ನಿಷ್ಪಂದ ಬೆಸ್ತ. ಸಾಕುಹಕ್ಕಿಯ ಮೇಲೆ ತೂರಿ, ಹೊಸಹಕ್ಕಿಯನು ಒಲಿಸಿ ನೆಲಕಿಳಿಸುತ್ತ ನಿಂತ ದಿಟ್ಟ ಹಿಂದೆ ಬಾವಿಗೆ ಜಾರಿ ತಳಕಿಳಿದು ಮರೆತ ಸರಕುಗಳ ತರುವ ಪಾತಾಳಗರಡಿ. ಸ್ವಾತಿ...

ಬರವ ಕಾಯುತಿದೆ

ನೋವಿನ ಹೇಳಿಗೆ ಹೊತ್ತ ಭಾರಕ್ಕೆ ಬಾಗಿದೆ ಲೋಕದ ಬೆನ್ನು ಹಸಿದ ಹೊಟ್ಟೆಯಲಿ ತತ್ತರಿಸುತ್ತಿದೆ ಕಂಗಾಲಾಗಿದೆ ಕಣ್ಣು ಕೊರಳನು ಬಿಗಿಯುವ ಕಣ್ಣಿಯ ಕಳಚಲು ಬರುವನು ಯಾರೋ ಧೀರ, ಎಂಬ ಮಾತನ್ನೆ ನಂಬಿ ಕಾಯುತಿದೆ ಜೀವಲೋಕಗಳ ತೀರ....

ಮಗನಿಗೊಂದು ಪತ್ರ

ಬಾ ಮಗೂ ಅಲ್ಲೆ ನಿಲ್ಲದೆ ಮತ್ತೆ ಹಿಂದಕ್ಕೆ ನಿನ್ನದೇನೆಲಕ್ಕೆ, ನಿನ್ನದೇ ಜಲಕ್ಕೆ ನಿನ್ನ ಒಳಹೊರಗನ್ನು ಸ್ಟಷ್ಟಿಕೊಟ್ಟ ಸತ್ವಕ್ಕೆ, ಹಿಂದು ಮುಂದುಗಳ ತಕ್ಕ ಛಂದದಲ್ಲಿಟ್ಟು ನಿನ್ನ ನಿಜಾರ್ಥಕ್ಕೆ ಸಲ್ಲಿಸುವ ಪುಷ್ಪವತಿ ಬಂಧಕ್ಕೆ, ನಿನ್ನ ಬೆನ್ನಿಗೆ ನಿಂತ...

ಅರುಣಗೀತ

-೧- ಕತ್ತೆತ್ತಿದರೆ ಸಾಕು ನಡುರಾತ್ರಿಯಲ್ಲಿ ‘ಲಕ್ಷ ನಕ್ಷತ್ರಮಯ ವಕ್ಷಾಂತರಿಕ್ಷ! ಕುಚುಕದ ಅರೆಮರೆಗೆ ಊರ್ವಶೀವಕ್ಷ! ನೀಲಿಯಂಗಳದಲ್ಲಿ ಎಲ್ಲೆಂದರಲ್ಲಿ ಮಿಂಚಿ ಹೊಂಚುವ ಕಣ್ಣು, ಆಹ! ಇರುಳಿನ ಹಕ್ಕಿ ಕೊಕ್ಕಿನಿಂದೆತ್ತೆತ್ತಿ ತಿನ್ನಲಿರಿಸಿದ ಹಣ್ಣು; ಒಂದರಿಂದೊಂದಕ್ಕೆ ಗೆರೆಯೆಳೆದ ಪಕ್ಷಕ್ಕೆ ಕೋಟಿ...

ವಾಹನದ ಗೀಳು

ಏಳು ವಾಹನದ ಗೀಳು ಅಂಟಿತ್ತೊ ! ಬೆಳಿಗ್ಗೆ ಅದನ್ನೇರಿಯೇ ಎಚ್ಚರಾಗಿ ರಾತ್ರಿ ತೂಕಡಿಸಿಯೇ ಕೆಳಕ್ಕಿಳಿಯುವಷ್ಟು ಮೆಚ್ಚಾಗಿ ಕಚ್ಚಿತ್ತು ಯಂತ್ರದ ಹುಚ್ಚು ವ್ಯಾಮೋಹ. ಸದಾ ಒತ್ತಿ ಒತ್ತಿ ಬ್ರೇಕೇ ಕಾಲು, ಹ್ಯಾಂಡಲೇ ತೋಳು ದೀಪವೇ ಕಣ್ಣು,...

ರಥದ ಕಥೆ

ಅಂದು ಇಂದು ಎಂದಿಗೂ ಲೋಕದ ಥರ ಒಂದೇ ಅವತಾರಗಳಳಿದರೂ ಕ್ರಿಸ್ತ ಬುದ್ಧ ಎಳೆದರೂ ಒಂದೆ ಒಂದು ಇಂಚೂ ರಥ ಸರಿಯಲಿಲ್ಲ ಮುಂದೆ. ಅಂಥ ಇಂಥ ರಥವೆ ? ಕೊಂಚ ಕೊರಕಲತ್ತ ಜಾರಿ ತಪ್ಪಿತಷ್ಟೆ ದಾರಿ,...

ಹೊಸ ಸಂವತ್ಸರಕ್ಕೆ

ತಲೆಯಲ್ಲಿ ನೆರೆ, ಕೆನ್ನೆ ಹಣೆಯಲ್ಲಿ ಹಳೆಯ ಬರೆ ಮೈ ಸುಕ್ಕು, ಉಸಿರಾಟ ಕೊಳವೆ ತುಕ್ಕು ಕಾಲೆರಡು ಕೋಲು, ಕೈ ಬೀಳು, ದೃಷ್ಟಿಯೆ ಹಾಳು ಹೊಸ ವರ್ಷ ಬಾ ಬಂದು ನಮ್ಮನ್ನಾಳು ಬುದ್ಧಿ, ಶ್ರಮ, ಹಣ...