ಕರುಳಿನ ಕೊರಗು

೧ ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ ನೆನಹು ನಿಡುಸುಯಿಲುಗಳ ಕರೆಯುತಿದೆಯೆ? ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ! ೨ ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು - ಆ ಎಳಗಲ್ಲಗಳ ಚೆಲ್ಲು, ಮೆಲುನಗೆಯ ಸೊಲ್ಲು,...

ನಮಗೆಯು ಹೆಸರೊಂದನು ತರಲಿ!

ಹಾಳು ಪಟ್ಟಣದ ಬಂಡೆಯ ಬಳಗದ ಕೊರಗಿನ ಮೌನದ ಕೂಗನು ಕೇಳಿ! ೧ "ಹೇಳಲಿಕಾಗದ ಕಾಲದಿಂದಲೂ ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು ಸೊಗಸೇನನೊ ಬದುಕಿಗೆ ಬಯಸಿದೆವು, ಹಗಲಿರುಳೂ ತಪದೊಳು ಬಳಲಿದೆವು.... ಆದರು ನಮಗಿಹ ಹೆಸರೇನು ? ಬಂಡೆಯೆ...

ಬೆಳಕನೆರಚು!

ಬೆಳಕನೆರಚು, ಚಳಕನೆರಳು, ಯುಗ-ಯುಗಾಂತ ತೊಳಗಲಿ! ಇಳೆಯ ಕವಿದ ಕಳ್ತಲೆಯನು ಕಳೆದೊಗೆ ದೀಪಾವಳಿ! ೧ ಬರಿಯ ಒಂದೆ ಇರುಳು ಬಂದೆ ಮುಗಿಯಿತೇನು ಕಾರ್‍ಯ? ವರುಷದಿ ನೂರಾರು ತಮಸಿ- ನಿರುಳಿವೆ ಅನಿವಾರ್ಯ! ಅಂದಂದಿನ ಕತ್ತಲಿಂದೆ ಮಂದಿಯ ಮನವಿಡಿದು...

ಬಾಳಿದು ಕಾಳೆಗದ ಕಣ!

೧ ಕೂಗುತಲಿದೆ ಕಹಳೆಯು- ನವಯುಗ ವೈತಾಳಿಯು! ‘ಬಾಳಿದು ಕಾಳೆಗದ ಕಣ!’ ಹೇಳುತಿರುವುದಿಂತಾ ಸ್ವನ ! ಕೂಗುತಲಿದೆ ಕಹಳೆಯು.... ನಮಯುಗವೈತಾಳಿಯು! ೨ ‘ಬೇಡ ಕದನ’ ಎಂದೊರೆವಾ ಕೇಡುಗಾರನೆಲ್ಲಿರುವ....? ಹೇಡಿ ಏನ ಬಲ್ಲನವ? ನಾಡಿಗೆ ಕಾಳೆಗವೆ ಜೀವ!...

ಬಾಯ ಬಂಧಿಸಿದ ಬಸವ

(ಒಂದು ರೂಪಕ ಕಥನ) ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು, ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು. ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ! ಹುರುಳಿ...

ಭಲಭಲರೆ, ಶಕುನಿ!

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ? ೧ ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ ತಲೆವಾಗಿ ವಂದಿಸುವೆನೈ! ಭಾರತೀಯರ ಮೇಲೆ ನೀ ಮಾಡಿದುಪಕಾರ ಭಾರವಾಗಿಹುದು ಕಾಣೈ! ೨...

ಚೆಲುವಿನ ಬೇಟೆ

೧ ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ. ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು, ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ, ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ. ಕಾಲವೇನೊ ಬಾಳ...

ಚೆಲುವು-ಒಲವು

(ಒಂದು ಕತೆ) ಚೆಲುವು ಹಿರಿಯದೊ-ಹೃದಯ- ದೊಲವು ಹಿರಿಯದೊ? ಚೆಲುವಿನಲಿಯೆ ಒಲವು ಇಹುದೊ? ಒಲವಿನಲಿಯೆ ಚೆಲುವು ಇಹುದೊ? ಎಳೆಯ ಚೆನ್ನನೊಬ್ಬನಿಂದು ಕೆಲೆದು ಕುಣಿದು ಆಡಿ .ಹಾಡಿ, ಕುಳಿತ ಜನರ ಕಣ್‌-ಮನಗಳ ಸೆಳೆದುಕೊಂಡ ಸೊಬಗನೂಡಿ. ನೆರೆದ ಮಂದಿಯಲ್ಲಿ...

ಚಂದ್ರಗ್ರಹಣ

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳುಕು-...

ಕನ್ನಡಿಗರ ಹಾಡು!

ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ, ಕನ್ನಡಿಗರಿಗೇನಿದೆ, ಬರಿ ಕಂಬನಿಗಳ ಕಣ್ಣೆವೆ! ೧ ಈ ಹಬ್ಬದ ಬಯಕೆಯಿಂದ ನಾವು ದುಡಿದುದೆಷ್ಟು! ‘ಹಬ್ಬ ಬಹುದು, ಬಹುದು!’ ಎಂದು ಹಿಗ್ಗಿ ಮಿಡಿದುದೆಷ್ಟು! ಆದರೇನು? ಇಲ್ಲ ನಮಗೆ ಸುಖವು ಎಳ್ಳಿನಷ್ಟು-...